Namma Metro Phase 3: 'ಆರೆಂಜ್‌, ಗ್ರೇ' ಲೈನ್‌ಗಾಗಿ 11 ಬಡಾವಣೆಗಳಲ್ಲಿ 1.44 ಲಕ್ಷ ಚ.ಅಡಿ ಭೂಸ್ವಾಧೀನ, ಅಪ್ಡೇಟ್ಸ್

ಬೆಂಗಳೂರು: ಕೇಂದ್ರ ಸರ್ಕಾರ ನಮ್ಮ ಮೆಟ್ರೋ ಮೂರನೇ ಹಂತದ (Namma Metro 3rd Phase Project) ಯೋಜನೆ ಅನುಮೋದನೆ ನೀಡಿದ ಸುಮಾರು ಎರಡು ವರ್ಷ ಸಮೀಪಿಸುತ್ತಿದೆ. ಇದೀಗ ರಾಜ್ಯ ಸರ್ಕಾರ ಒಟ್ಟು 44.45 ಕಿಲೋ ಮೀಟರ್ ಉದ್ದದ ಎರಡು ಕಾರಿಡಾರ್‍‌ ಯೋಜನೆಗೆ ನಗರದ 11 ಬಡಾವಣೆಗಳಲ್ಲಿ ಬರೋಬ್ಬರಿ 1,44,314 ಚದರ ಅಡಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಈ ಮೂಲಕ ತುಂಬಾ ವಿಳಂಬದ ಬಳಿಕ ಯೋಜನೆಗೆ ವೇಗ ದೊರೆತಂತಾಗಿದೆ.

ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಶೇ. 25ರಷ್ಟು ಹೆಚ್ಚುವರಿ ಭೂಮಿ ವಶಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಅಧಿಕಾರಿಗಳು ಸದ್ಯ ನಗರದಲ್ಲಿ ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ (ಚದರ ಮೀಟರ್, ಚದರ ಅಡಿ) ಜಾಗ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

Namma Metro Phase 3

ಕೇಂದ್ರದ ಅನುಮೋದನೆ: ವಿಳಂಬ ನಂತರ ಯೋಜನೆಗೆ ವೇಗ

ಹೌದು, ಕೇಂದ್ರ ಸರ್ಕಾರ 2024ರ ಡಿಸೆಂಬರ್ ತಿಂಗಳಲ್ಲಿ ಯೋಜನೆಗೆ ಅಂತಿಮ ಅನುಮೋದನೆ ನೀಡಿತ್ತು. ರಾಜ್ಯ ಸರ್ಕಾರ ಈ ಯೋಜನೆಯಡಿ ನಿರ್ಮಾಣವಾಗುವ 'ಕಿತ್ತಲೇ ಮಾರ್ಗ' ಮತ್ತು 'ಬೂದು ಮಾರ್ಗ'ದ ಎತ್ತರಿಸಿದ ಕಾರಿಡಾರ್ ಜೊತೆ ಜೊತೆಗೆ ಡಬಲ್ ಡೆಕ್ಕರ್ ಮೇಲ್ಸೇತುತೆ ನಿರ್ಮಿಸಲು ಪ್ಲ್ಯಾನ್ ಮಾಡಿತು. ಇದರಿಂದ ಅಂದಾಜು ವೆಚ್ಚ, ಕಾರ್ಯಸಾಧನೆ ಅಧ್ಯಯನ ಮತ್ತಿತರ ಪ್ರಕ್ರಿಯೆಗಳ ಕಾರಣದಿಂದ ವಿಳಂಬವಾಗುತ್ತಲೇ ಬಂದಿತ್ತು.

ಎರಡು ಪ್ರಮುಖ ಕಾರಿಡಾರ್, ವಿವರ

* ಕಾರಿಡಾರ್ 1: ಜೆಪಿ ನಗರ 4ನೇ ಹಂತದಿಂದ ಹೊರವರ್ತುಲ ರಸ್ತೆ (ORR) ಮೂಲಕ ಕೆಂಪಾಪುರವರೆಗೆ (ಹೆಬ್ಬಾಳ) 'ಕಿತ್ತಲೇ ಮಾರ್ಗ' (Metro Orange Line). ಕಾರಿಡಾರ್ 1ರ ಉದ್ದ: 32.15 ಕಿಲೋ ಮೀಟರ್, 21ನಿಲ್ದಾಣಗಳ ನಿರ್ಮಾಣ.

* ಕಾರಿಡಾರ್ 2: ಮಾಗಡಿ ರಸ್ತೆಯ ಹೊಸಹಳ್ಳಿಯಿಂದ ಕಡುಬಗೆರೆವರೆಗೆ 'ಬೂದು ಮಾರ್ಗ' (Metro Grey Line) ನಿರ್ಮಿಸಲು ಉದ್ದೇಶಿಸಲಾಗಿದೆ. ಕಾರಿಡಾರ್ 2ರ ಉದ್ದ: 12.50 ಕಿಲೋ ಮೀಟರ್, 9 ನಿಲ್ದಾಣಗಳು ನಿರ್ಮಾಣ ಆಗಲಿವೆ.

* ಅಂದಾಜು ವೆಚ್ಚ- 15,611 ಕೋಟಿ ರೂಪಾಯಿ
* ಒಟ್ಟು 31 ನಿಲ್ದಾಣಗಳು
* ಈ ಯೋಜನೆ ಪೂರ್ಣಗೊಂಡರೆ ನಮ್ಮ ಮೆಟ್ರೋ ಜಾಲ 222 ಕಿಮೀಗೆ ಏರಿಕೆ

ಭೂಮಿ ಸ್ವಾಧೀನ ಮಾಹಿತಿ

ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) 11 ಪ್ರದೇಶ/ಬಡಾವಣೆಗಳಲ್ಲಿ ಅಗತ್ಯ ಭೂಮಿ ಪೈಕಿ 13,409.05 ಮೀಟರ್ (1,44,314 ಚದರ ಮೀಟರ್) ಭೂಮಿ ವಶಕ್ಕೆ ಪಡೆಯಲಾಗಿದೆ. ಅದರ ಪಟ್ಟಿ ಇಲ್ಲಿದೆ.

* ಬಿಳೇಕಹಳ್ಳಿ: 1,448.72 ಚ.ಮೀಟರ್, (15,586 ಚ.ಅಡಿ)
* ಸಾರಕ್ಕಿ ಅಗ್ರಹಾರ: 1673.10 ಚ.ಮೀಟರ್ (18,002 ಚ.ಅಡಿ)
* ಸಾರಕ್ಕಿ: 1,078.34 ಚ.ಮೀಟರ್ (11,603 ಚ.ಅಡಿ)
* ಜರಗನಹಳ್ಳಿ: 1,582.08 ಚ.ಮೀಟರ್ (17,027 ಚ.ಅಡಿ)
* ಕದಿರೇನಹಳ್ಳಿ: 7,92 ಚ.ಮೀಟರ್ (85 ಚ.ಅಡಿ)
* ಕರೀಸಂದ್ರ: 451,88 ಚ.ಮೀಟರ್ (4,864 ಚ.ಅಡಿ)
* ಕತ್ರಿಗುಪ್ಪೆ: 1,254.95 ಚ.ಮೀಟರ್ (13,508 ಚ.ಅಡಿ)
* ಇಟ್ಟಮಡು: 833.53 ಚ.ಮೀಟರ್ (8,976 ಚ.ಅಡಿ)
* ಹೊಸಕೆರೆಹಳ್ಳಿ : 2,817.86 ಚ.ಮೀಟರ್ (30,329 ಚ.ಅಡಿ)
* ಹೊಸಕೆರೆಹಳ್ಳಿ (ದ್ವಾರಕನಗರ ಮೆಟ್ರೋ ನಿಲ್ದಾಣ): 288.88 ಚ.ಮೀಟರ್ (2,463 ಚ.ಅಡಿ)
* ಪಂತರಪಾಳ್ಯ: 2,031.79 ಚ.ಮೀಟರ್ (21,872)

ಒಟ್ಟು: 13,409.05 ಚದರ್ ಮೀಟರ್, (144,314 ಚ.ಅಡಿ) ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಶೀಘ್ರವೇ ಟೆಂಡರ್ ಪೂರ್ಣಗೊಳಿಸಿ, ಮಾರ್ಗದ ಸಿವಿಲ್ ಕೆಲಸ ಆರಂಭಿಸಲು ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+