• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

14,788 ಕೋಟಿ ವೆಚ್ಚದ ನಮ್ಮ ಮೆಟ್ರೋ 2ಎ, 2ಬಿ ಯೋಜನೆಗೆ ಕೇಂದ್ರ ಸಮ್ಮತಿ

|
Google Oneindia Kannada News

ನವದೆಹಲಿ, ಜೂನ್ 07: ನಮ್ಮ ಮೆಟ್ರೋ ಯೋಜನೆಯ 2ಎ ,2 ಬಿ ಹಂತಕ್ಕೆ ಕೇಂದ್ರ ಸರ್ಕಾರ ಹಸಿರು‌ ನಿಶಾನೆ ತೋರಿದೆ.

14,788.101 ಕೋಟಿ ಮೊತ್ತದ ಯೋಜನೆ ಅನುಮತಿ ನೀಡಿದ ದಿನದಿಂದ ಮುಂದಿನ‌ 5 ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಆದೇಶದಲ್ಲಿ ತಿಳಿಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ತಿಳಿಸಿದ್ದಾರೆ.

ಕೆಂಗೇರಿವರೆಗೆ ನಮ್ಮ ಮೆಟ್ರೋ ಸಂಚಾರ ಯಾವಾಗ, ದರ ಎಷ್ಟು?, ನಿಲ್ದಾಣಗಳ ಮಾಹಿತಿಕೆಂಗೇರಿವರೆಗೆ ನಮ್ಮ ಮೆಟ್ರೋ ಸಂಚಾರ ಯಾವಾಗ, ದರ ಎಷ್ಟು?, ನಿಲ್ದಾಣಗಳ ಮಾಹಿತಿ

ಕೇಂದ್ರ ರೇಷ್ಮೆ ಮಂಡಳಿ ಜಂಕ್ಷನ್ ನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದ ವರೆಗೆ ವಯಾ ಹೆಬ್ಬಾಳ ಮೂಲಕ ಹಾದು ಹೋಗುವ 58.19 ಕಿ. ಮೀ ಉದ್ದದ ಯೋಜನೆ ಇದಾಗಿದೆ.

ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದಕ್ಕೆ ಸಂಸದ ತೇಜಸ್ವಿ ಸೂರ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು ನಮ್ಮ ಮೆಟ್ರೋ ಯೋಜನೆಯ 2ಎ ಮತ್ತು 2ಬಿ ಯೋಜನೆಯಿಂದ ಬೆಂಗಳೂರು ವಿಮಾನ ನಿಲ್ದಾಣದಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಹಂತ 2ಎ ಕೆ.ಆರ್ ಪುರಂ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ 19.75 .ಕೀ.ಮೀ ಉದ್ದದ ಯೋಜನೆ ಮತ್ತು ಹಂತ 2 ಬಿ ಕೆ.ಆರ್ ಪುರಂ ನಿಂದ ಹೆಬ್ಬಾಳ ಜಂಕ್ಷನ್ ಮೂಲಕ 38.44 ಕಿ.ಮೀ ಉದ್ದರ ನಮ್ಮ ಮೆಟ್ರೋ ರೈಲು ಯೋಜನೆ ಅನುಷ್ಠಾನಕ್ಕೆ ಕೇಂದ್ರ ನಗರಾಭಿ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಯೊಜನೆ ಅನುಷ್ಠಾನಗೆ ಅನುಷ್ಠಾನವಾದ ದಿನದಿಂದ ಮುಂದಿನ 5 ವರ್ಷದ ವರೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶದಲ್ಲಿ ತಿಳಿಸಿದೆ. ನಮ್ಮ ಮೆಟ್ರೋ ಎರಡನೇ ಹಂತರ 2ಎ ಮತ್ತು 2 ಬಿ ಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ‌ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

   ನನ್ನ ಮಾತನ್ನು ಕೇಳಲು ಮೋದಿಗೆ 4 ತಿಂಗಳು ಬೇಕಾಯ್ತು ಎಂದ ದೀದಿ | Mamata Banerjee | Modi | Oneindia Kannada

   14,788 ಕೋಟಿ ಮೊತ್ತದ ಈ ಯೋಜನೆಯನ್ನು ಮುಂದಿನ 5 ವರ್ಷದಲ್ಲಿ ಪೂರ್ಣಗೊಳಿಸಲು ಕೇಂದ್ರ ನಗರಾಭಿವೃದ್ಧಿ ಇಲಾಖೆ ಆದೇಶದಲ್ಲಿ ತಿಳಿಸಿದೆ. ಯೋಜನೆಗೆ ಒಪ್ಪಿಗೆ ನೀಡಿರುವ ಕುರಿತು ರಾಜ್ಯ ಸರ್ಕಾರದ ‌ಮುಖ್ಯ ಕಾರ್ಯದರ್ಶಿ ಅವರಿಗೆ ಕೇಂದ್ರ ಸರ್ಕಾರ ಪತ್ರದಲ್ಲಿ ತಿಳಿಸಿದೆ.

   English summary
   The Centre has approved the Bengaluru Metro's Phase 2A, 2B, which comprises two corridors of a total length of 58.19km.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X