Namma Metro Phase 2: ಸುರಂಗ ಮಾರ್ಗದ ಉದ್ದ, ಪೂರ್ಣಗೊಂಡ ಕೆಲಸ, ಅಂದಾಜು ವೆಚ್ಚದ ಮಾಹಿತಿ
ಬೆಂಗಳೂರು, ಜುಲೈ 14: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಕೆಲವು ವರ್ಷಗಳಿಂದ ಒಟ್ಟು 73 ಕಿಲೋ ಮೀಟರ್ ಗುರಿ ಉದೇಶದೊಂದಿಗೆ ಯೋಜನೆ ಹಂತ-2 ಆರಂಭಿಸಿತು. ಇದರಲ್ಲಿ ರೀಚ್- 6 ರ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21,26 ಕಿಲೋ ಮೀಟರ್ ಇದೆ. ಈ ಮಾರ್ಗದಲ್ಲಿ ಬರುವ ಸುರಂಗ ಕಾಮಗಾರಿಯ ಸಂಪೂರ್ಣ ವಿವರ ಇಲ್ಲಿ ತಿಳಿಯೋಣ.
ಕಾಳೇನ ಅಗ್ರಹಾರ-ನಾಗವಾರವರೆಗಿನ ಮಾರ್ಗವು ಒಟ್ಟು 18 ನಿಲ್ದಾಣಗಳನ್ನು ಹೊಂದಿದೆ. ಈ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ತನಕ ಎತ್ತರಿಸಿದ ಮಾರ್ಗವು 7,50 ಕಿ.ಮೀ. ಇದ್ದು, ಇಲ್ಲಿ 6 ನಿಲ್ದಾಣಗಳು ಬರಲಿವೆ. ಡೈರಿ ವೃತ್ತದಿಂದ ನಾಗವಾರದವರೆಗಿನ ಸುರಂಗ ಮಾರ್ಗವು 13.76 ಕಿ.ಮೀಟರ್ ಬರಲಿದ್ದು, ಅಲ್ಲಿ ಒಟ್ಟು 12 ನಿಲ್ದಾಣಗಳು ನಿರ್ಮಾಣಗೊಳ್ಳಿವೆ ಎಂದು ನಮ್ಮ ಮೆಟ್ರೋ ಮಾಹಿತಿ ನೀಡಿದೆ.

* ಸುರಂಗ ಮಾರ್ಗ ವಿವರ: ದಕ್ಷಿಣ ರಾಂಪ್ (ಡೈರಿ ಸರ್ಕಲ್) ಮತ್ತು ನಾಗವಾರ ಮಧ್ಯೆ
* ಸುರಂಗ ಮಾರ್ಗದ ಉದ್ದ - 13.89 ಕಿ.ಮೀ. (ರಾಂಪ್ ಒಳಗೊಂಡಂತೆ)
* ಸುರಂಗ ನಿಲ್ದಾಣ ಸಂಖ್ಯೆ- 12
* ಸುರಂಗದ ಉದ್ದ - (10.496 ಕಿಮೀ x 2) 20.992 ಕಿ.ಮೀ.
* ಪ್ಯಾಕೇಜುಗಳ ಸಂಖ್ಯೆ- 4
ಸುರಂಗ ಮಾರ್ಗ ಕಾಮಗಾರಿ ಗುತ್ತಿಗೆದಾರರ ಮಾಹಿತಿ/ಒಪ್ಪಂದ
* ಪ್ಯಾಕೇಜ್-1: M/s AFCONS Ltd ಕಂಪನಿ ಜೊತೆ ಒಪ್ಪಂದಕ್ಕೆ 2019ರ ಡಿಸೆಂಬರ್ 12 ರಂದು ಸಹಿ ಮಾಡಲಾಗಿದೆ. ವೆಚ್ಚ ರೂ.1526.32 ಕೋಟಿ.
* ಪ್ಯಾಕೇಜ್- 2: M/s L&T Ltd. ಕಂಪನಿ ಜೊತೆ ಒಪ್ಪಂದಕ್ಕೆ 2019ರ ಮಾರ್ಚ್ 8ರಂದು ಸಹಿ ಹಾಕಲಾಗಿದ್ದು, ವೆಚ್ಚ ರೂ.1329.14 ಕೋಟಿ ಎಂದು ಅಂದಾಜಿಸಲಾಗಿದೆ.
* ಪ್ಯಾಕೇಜ್- 3: M/s L&T Ltd. ಒಪ್ಪಂದಕ್ಕೆ 2019ರ ಮಾರ್ಚ್ 08 ರಂದು ಸಹಿ ಮಾಡಿದ್ದು, ಅಂದಾಜು 1299 ಕೋಟಿ ವೆಚ್ಚವಾಗಲಿದೆ.
* ಪ್ಯಾಕೇಜ್- 4: M/s ITD Ltd. ಒಪ್ಪಂದಕ್ಕೆ 2019 ಡಿಸೆಂಬರ್ 13 ರಂದು ಸಹಿ ಮಾಡಲಾಗಿದ್ದು, ಕಾಮಗಾರಿಗೆ 1771.25 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಸುರಂಗ ನಿರ್ಮಾಣಕ್ಕಾಗಿ ಒಟ್ಟು 9 ಸುರಂಗ ಕೊರೆಯುವ ಯಂತ್ರಗಳನ್ನು (TBMs) ಬಳಸಲಾಗಿದೆ. 5 ಟಿಬಿಎಂಗಳು ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಿವೆ. ಉಳಿದ 4 ಟಿಬಿಎಂಗಳು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದೆ.
ಸುರಂಗ ಮಾರ್ಗದ ಶೇಕಡಾವಾರು ಪ್ರಗತಿ
* ಪ್ಯಾಕೇಜ್ 1ರಲ್ಲಿ ಶೇಕಡಾ 80 ರಷ್ಟು ಅಂದರೆ ಒಟ್ಟು 5346 ಮೀಟರ್‌ನಲ್ಲಿ 4,327 ಮೀಟರ್ ಕೆಲಸ ಪೂರ್ಣವಾಗಿದೆ.
* ಪ್ಯಾಕೇಜ್ 2 ನಲ್ಲಿ ಶೇಕಡಾ 100ರಷ್ಟು 4,423 ಮೀ.ನಲ್ಲಿ 4423 ಮೀಟರ್ ಕೆಲಸ ಪೂರ್ಣಗೊಂಡಿದೆ.
* ಪ್ಯಾಕೇಜ್ 3 ರಲ್ಲಿ ಶೇಕಡಾ 98 4,847 ಮೀ. ನಲ್ಲಿ 4,847 ಮೀ. ಪೂರ್ಣಗೊಂಡಿದೆ.
* ಪ್ಯಾಕೇಜ್ 4ರಲ್ಲಿ ಶೇಕಡಾ 54 6,375 ಮೀ. ನಲ್ಲಿ 3,122 ಮೀ. ಪೂರ್ಣಗೊಂಡಿದೆ.
ಸುರಂಗ ನಿಲ್ದಾಣಗಳ ಕಾಮಗಾರಿ ಶೇಕಡಾವಾರು ಪ್ರಗತಿ
* ಪ್ಯಾಕೇಜ್ 1- ಡೈರಿ ಸರ್ಕಲ್, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್ ಭಾಗದಲ್ಲಿ ಶೇಕಡಾ 48% ಪೂರ್ಣವಾಗಿದೆ.
* ಪ್ಯಾಕೇಜ್ 2- ಆರ್‌ಎಂಎಸ್, MG ರಸ್ತೆ, ಶಿವಾಜಿ ನಗರ ಭಾಗದಲ್ಲಿ ಶೇಕಡಾ 79ರಷ್ಟು ಕೆಲಸ ಮುಕ್ತಾಯ.
* ಪ್ಯಾಕೇಜ್ 3- ಕಂಟೋನೆಂಟ್, ಪಾಟರಿ ಟೌನ್ ಭಾಗದ ಶೇಕಡಾ 75 ರಷ್ಟು ಕೆಲಸ ಪೂರ್ಣಗೊಂಡಿದೆ.
* ಪ್ಯಾಕೇಜ್ 4- ಟ್ಯಾನರಿ ರಸ್ತೆ, ವೆಂಕಟೇಶಪುರ, ಕೆಜಿ ಹಳ್ಳಿ, ನಾಗವಾರದಲ್ಲಿ ಶೇಕಡಾ 49 ರಷ್ಟು ಪೂರ್ಣಗೊಂಡಿದೆ. ಮಾರ್ಚ್ 2025 ರ ಅಂತ್ಯಕ್ಕೆ ಸದರಿ ಕರ್ಮಗಾರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪೂರ್ಣಗೊಳಿಸುವ ಗುರಿ ಹೊಂದಿದೆ..
-
IPL 2026: ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications