BMRCL: ಬೈಯಪ್ಪನಹಳ್ಳಿ 'ಮೆಟ್ರೋ' ನಿಲ್ದಾಣದಲ್ಲಿ ಪಾರ್ಕಿಂಗ್ ಸಮಸ್ಯೆ: ಪ್ರಯಾಣಿಕರಿಗೆ ತೊಂದರೆ

ಬೆಂಗಳೂರು, ಮಾರ್ಚ್ 19: ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಮುಖವಾದ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಗುತ್ತಿಗೆದಾರರು ಹಾಗೂ ಮೆಟ್ರೋ ಅಧಿಕಾರಿಗಳ ಮಧ್ಯೆದ ತಿಕ್ಕಾಟಕ್ಕೆ ಜನರು ತೊಂದರೆ ಅನುಭವಿಸುವಂತಾಗಿದೆ.

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಇದ್ದ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಎರಡು ವಾರದಿಂದ ಬೀಗ ಬಿದ್ದಿದೆ. ಅಲ್ಲಿ ಇಲ್ಲಿ ಬೈಕ್, ಕಾರುಗಳನ್ನು ನಿಲ್ಲಿಸಿ ಮೆಟ್ರೋದಲ್ಲಿ ಓಡಾಡಬೇಕಾದ ಸ್ಥಿತಿ ಇದೆ. ಪಾರ್ಕಿಂಗ್ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಮತ್ತು ಬಿಎಂಆರ್‌ಸಿಎಲ್ ಮಧ್ಯೆ ಸುಸೂತ್ರ ಒಪ್ಪಂದ ಮುಂದುವರೆದಿಲ್ಲ. ಹೀಗಾಗಿ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

Namma Metro Passengers Face Vehicle Parking Issue in Baiyappanahalli Metro Station

ಈ ನಿಲ್ದಾಣದಲ್ಲಿ ಒಟ್ಟು 280ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು, ಹತ್ತಾರು ಕಾರು ಮತ್ತು ಸೈಕಲ್‌ಗಳನ್ನು ನಿಲ್ಲಿಸಿ ಪ್ರಯಾಣಿಕರು ತಮ್ಮ ಗಮ್ಯಸ್ಥಳಕ್ಕೆ ತೆರಳುತ್ತಿದ್ದರು. ಜಾಗದ ನಿರ್ವಹಣೆ ವಹಿಸಿಕೊಂಡಿದ್ದ ಗುತ್ತಿಗೆದಾರರ ಅವಧಿ ಅಂತ್ಯಗೊಂಡಿದೆ. ಬಿಎಂಆರ್‌ಸಿಎಲ್ ಕರೆದ ಟೆಂಡರ್‌ನಲ್ಲಿ ಬೇರೊಂದು ಕಂಪನಿ ಗುತ್ತಿಗೆ ಪಡೆದು, ಅರ್ಧ ಹಣ ಮಾತ್ರ ಠೇವಣಿ ಇಟ್ಟಿದ್ದು, ಬಾಕಿ ಪ್ರಕ್ರಿಯೆ ಪೂರ್ಣಗೊಳ್ಳಿಸಿಲ್ಲ ಎಂದು ತಿಳಿದು ಬಂದಿದೆ.

ಪ್ರಯಾಣಿಕರಿಗೆ ತೀವ್ರ ತೊಂದರೆ

ಹೀಗಾಗಿ ಗುತ್ತಿಗೆದಾರರು ಮತ್ತು ನಮ್ಮ ಮೆಟ್ರೋ ನಡುವೆ ಹೊಂದಾಣಿಕೆ ಆಗಿಲ್ಲ. ಇದರಿಂದ ಪಾರ್ಕಿಂಗ್ ಗೇಟ್‌ಗೆ ಬೀಗ ಬದ್ದಿದೆ. 'ಯು' ಆಕಾರದ ಪಾರ್ಕಿಂಗ್ ಜಾಗದಲ್ಲಿ ಒಂದು ಕಡೆಯಿಂದ ಬಂದು ಮತ್ತೊಂದು ಕಡೆಗೆ ಸುಲಭವಾಗಿ ತೆರಳಬಹುದಿತ್ತು. ಆದರೆ ಒಂದು ದ್ವಾರದ ಕಡೆಗಿನ ಜಾಗವನ್ನು ಬಿಎಂಆರ್‌ಸಿಎಲ್ ಬಳಕೆ ಮಾಡಿಕೊಂಡಿದೆ. ಪಾರ್ಕಿಂಗ್ ಬಂದ್ ಆಗಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ.

Namma Metro Passengers Face Vehicle Parking Issue in Baiyappanahalli Metro Station

ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆ

ಬಿಟ್ಟು ಹೋಗಿದ್ದ ನಮ್ಮ ಮೆಟ್ರೋ ನೇರಳೆ ಮಾರ್ಗದ ಸಂಪರ್ಕ ಕೊಂಡಿಯಾಗಿದ್ದ ಕೆ.ಆರ್‌ಪುರ ಮತ್ತು ಬೈಯಪ್ಪನಹಳ್ಳಿ ಮಧ್ಯೆದ 2 ಕಿಲೋ ಮೀಟರ್ ಮಾರ್ಗವು ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ವೈಟ್‌ಫಿಲ್ಡ್‌ಗೆ ಓಡಾಡುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಬಹುತೇಕ ಐಟಿ ನೌಕರರು, ಸಾರ್ವಜನಿಕರು ತಮ್ಮ ವಾಹನ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ನಿಲ್ಲಿಸಿ ಚಿಂತೆ ಇಲ್ಲದೇ ತಮ್ಮ ಕೆಲಸಗಳಿಗೆ ತೆರಳುತ್ತಿದ್ದರು.

ಆದರೆ ಇಂದಿನ ಪರಿಸ್ಥಿತಿಯಲ್ಲಿ ರಸ್ತೆ ಬದಿ, ಇನ್ಯಾರದ್ದೋ ಮನೆ ಮುಂದಿ ಗಾಡಿ ನಿಲ್ಲಿಸಿ ಹೋಗಬೇಕಾಗುತ್ತದೆ. ವಾಹನಗಳಿಗೆ ಏನಾದರೂ ಯಾರು ಹೊಣೆ ಎಂಬ ಚಿಂತೆಯಲ್ಲಿಯೇ ಪ್ರಯಾಣಿಕರು ಓಡಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಬೈಯಪ್ಪನಹಳ್ಳಿಯ ಅಳವಡಿಸಲಾದ ಪಾರ್ಕಿಂಗ್ ತಾತ್ಕಾಲಿಕ ಬಂದ್ ಬೋರ್ಡ್ ತೆಗೆಯುವವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+