ಮೆಟ್ರೋ ರೈಲಿನ ಎರಡು ಸುದ್ದಿ, ಒಂದು ಹಗುರ ಮತ್ತೊಂದು ಭಾರ
ಬೆಂಗಳೂರು, ಜೂನ್ 16: ಮೆಟ್ರೋ ರೈಲಿಗೆ ಸಂಬಂಧಿಸಿದಂತೆ ಒಂದು ಒಳ್ಳೆ ಸುದ್ದಿ ಮತ್ತೊಂದು ಜೇಬಿಗೆ ಭಾರವಾಗುವಂಥ ಮಾಹಿತಿ ಇಲ್ಲಿದೆ. ಮೊದಲನೆಯದು ನಮ್ಮ ಮೆಟ್ರೋದ ಮೊದಲ ಹಂತದ ಎಲ್ಲ ಮಾರ್ಗಗಳು ಭಾನುವಾರದಿಂದ ಸಾರ್ವಜನಿಕ ಸೇವೆಗೆ ದೊರೆಯಲಿದೆ.
ಇನ್ನು ಪ್ರಯಾಣ ದರವನ್ನು ಶೇ ಹತ್ತರಷ್ಟು ಏರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿರ್ಧರಿಸಿದೆ. ಮೆಟ್ರೋ ರೈಲಿನ ಕಾರ್ಯಾಚರಣೆಯಿಂದ ಈ ವರೆಗೆ ಆದ ನಷ್ಟವನ್ನು ಸರಿ ಮಾಡಿಕೊಳ್ಳುವುದಕ್ಕೆ ಮೊದಲ ಹಂತದ ಎಲ್ಲ ಮಾರ್ಗಗಳಲ್ಲಿ ಶೇ ಹತ್ತರಷ್ಟು ಪ್ರಯಾಣ ದರ ಏರಿಕೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.

ಸಮಯ ನೋಡಿ ದರ ಪರಿಷ್ಕರಣೆ ಮಾಡಲಾಗುವುದು. ಇದರಿಂದ ಪ್ರಯಾಣಿಕರಿಗೆ ತುಂಬ ಹೊರೆಯೇನೂ ಆಗುವುದಿಲ್ಲ ಎಂದು ಅಧಿಕಾರಿಗಳೇನೋ ತಿಳಿಸಿದ್ದಾರೆ. ಈಗ ಇರುವ ಪ್ರಯಾಣ ದರ ಆರು ವರ್ಷದ ಹಿಂದಿನದು. ಇದರಿಂದ ರಾಜ್ಯ ಸರಕಾರಕ್ಕೆ ವಾರ್ಷಿಕ ನೂರಾರು ಕೋಟಿ ನಷ್ಟವಾಗುತ್ತಿದೆ. ಆದ್ದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ರೀತಿ ದರ ಹೆಚ್ಚಿಸುವುದರಿಂದ ನಷ್ಟದ ಪ್ರಮಾಣ ತಗ್ಗಿಸಬಹುದೇ ವಿನಾ ಲಾಭ ಆಗುತ್ತದೆ ಅಂತಲ್ಲ ಎಂದು ಹೇಳಿದ್ದಾರೆ. ಆದರೆ ನಿಗಮದ ವ್ಯವಸ್ಥಾಪಕ ಪ್ರದೇಪ್ ಸಿಂಗ್ ಖರೋಲ, ದರ ಏರಿಕೆ ನಿರ್ಧಾರ ಅಂತಿಮವಾಗಿಲ್ಲ ಎಂದಿದ್ದಾರೆ.
ರಾಜಾಜಿನಗರದಿಂದ ಸಂಪಿಗೆ ರಸ್ತೆವರೆಗಿನ ಮೆಟ್ರೋ ವಾಣಿಜ್ಯ ಸಂಚಾರ ಈ ಶುಕ್ರವಾರ ಹಾಗೂ ಶನಿವಾರ (ಜೂನ್ 16, 17) ಇರುವುದಿಲ್ಲ. ಈ ಮಾಹಿತಿ ಗಮನಿಸಿ.












Click it and Unblock the Notifications