ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಟ್ಯಂತರ ರೂಪಾಯಿ ನಷ್ಟದಲ್ಲಿ ನಮ್ಮ ಮೆಟ್ರೋ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ನಗರ ಸಂಚಾರದಟ್ಟಣೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ನಮ್ಮ ಮೆಟ್ರೊ ಕೋಟ್ಯಂತರ ರೂಪಾಯಿ ನಷ್ಟದಲ್ಲಿದೆ.

ಪ್ರಸಕ್ತ ವರ್ಷದಲ್ಲಿ ನಮ್ಮ ಮೆಟ್ರೋ ಕ್ಕೆ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ನಷ್ಟವಾಗಿದೆ. ಈ ಹಣಕಾಸು ವರ್ಷದಲ್ಲಿ 498.41 ಕೋಟಿ ರೂಪಾಯಿ ನಷ್ಟವನ್ನು ಮೆಟ್ರೋ ಅನುಭವಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಷ್ಟ ಪ್ರಮಾಣ ಶೇ 30 ಹೆಚ್ಚಿದೆ.

ಮರ ಕಡಿದಿರುವ ಜಾಗದಲ್ಲಿ ಕಾಮಗಾರಿ ನಡೆಯಲಿದೆ ಎಂದ ಮೆಟ್ರೋ ನಿಗಮ ಮರ ಕಡಿದಿರುವ ಜಾಗದಲ್ಲಿ ಕಾಮಗಾರಿ ನಡೆಯಲಿದೆ ಎಂದ ಮೆಟ್ರೋ ನಿಗಮ

ಕಳೆದ ಹಣಕಾಸು ವರ್ಷದಲ್ಲಿ 352.25 ಕೋಟಿ ರೂಪಾಯಿ ನಷ್ಟವಾಗಿತ್ತು. ಆದರೆ ಈ ವರ್ಷ ನಷ್ಟದ ಪ್ರಮಾಣ ಹೆಚ್ಚಾಗಿರುವುದು ಮೆಟ್ರೋ ನಿಗಮಕ್ಕೆ ಆತಂಕ ತಂದಿದೆ.

Namma Metro Is In 498 Crore Rupees Loss This Year

ಈ ಬಾರಿ ಟಿಕೆಟ್‌ನಿಂದ ಬಂದ ವರಮಾನ ಹೆಚ್ಚಾಗಿದೆ ಆದರೆ ಜಾಹೀರಾತಿನಿಂದ ಬಂದ ವರಮಾನ ಕುಸಿದಿದ್ದು, ನಷ್ಟ ಹೆಚ್ಚಾಗಲು ಇದೇ ಮೂಲ ಕಾರಣ ಎನ್ನಲಾಗುತ್ತಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 402 ಕೋಟಿ ರೂಪಾಯಿ ಹಣ ಟಿಕೆಟ್‌ ಮಾರಾಟದಿಂದ ಮೆಟ್ರೊಕ್ಕೆ ಬಂದಿದೆ. ಕಳೆದ ವರ್ಷ ಟಿಕೆಟ್ ಮಾರಾಟದಿಂದ 325 ಕೋಟಿ ಹಣವನ್ನು ಮೆಟ್ರೊ ಗಳಿಸಿತ್ತು. ಆದರೆ ಈ ಬಾರಿ ಜಾಹೀರಾತು ಪೂರ್ಣವಾಗಿ ಕುಸಿದಿದೆ.

ಮಹಿಳೆಯರಿಗೆ ಬಸ್, ಮೆಟ್ರೋ ಪ್ರಯಾಣ ಉಚಿತ: ಕೇಜ್ರಿವಾಲ್ ಹೊಸ ಪ್ಲ್ಯಾನ್ಮಹಿಳೆಯರಿಗೆ ಬಸ್, ಮೆಟ್ರೋ ಪ್ರಯಾಣ ಉಚಿತ: ಕೇಜ್ರಿವಾಲ್ ಹೊಸ ಪ್ಲ್ಯಾನ್

ಜಾಹೀರಾತಿನಿಂದ ಕಳೆದ ವರ್ಷ 131 ಕೋಟಿ ರೂಪಾಯಿ ವರಮಾನವನ್ನು ಮೆಟ್ರೋ ಗಳಿಸಿತ್ತು. ಈ ವರ್ಷ ಇದು ಕೇವಲ 81 ಕೋಟಿ ರೂಪಾಯಿಗೆ ಕುಸಿದಿದೆ. ನಿಗಮದ ವರಮಾನ ಮತ್ತಿತರೆ ಅಂಕಿ-ಅಂಶಗಳನ್ನು ಶೀಘ್ರವೇ ಹೊರಡಿಸಲಾಗುವುದು ಎಂದು ಮೆಟ್ರೊ ಅಧಿಕಾರಿಗಳು ಹೇಳಿದ್ದಾರೆ.

ಮೆಟ್ರೋ ವನ್ನು ನಷ್ಟದಲ್ಲಿಯಾದರೂ ನಡೆಸಲೇಬೇಕು ಎಂಬುದು ಸರ್ಕಾರದ ಗುರಿಯಾಗಿದ್ದು, ನಗರದ ಟ್ರಾಫಿಕ್ ಕಿರಿ-ಕಿರಿಯನ್ನು ತಪ್ಪಿಸಲು ಮೆಟ್ರೋ ಏಕೈಕ ಸಾಧನವಾಗಿದ್ದು, ಅದನ್ನು ನಷ್ಟದಲ್ಲಿಯಾದರೂ ಉತ್ತಮವಾಗಿ ನಡೆಸುವ ತೀರ್ಮಾನ ಈ ಹಿಂದೆಯೇ ಮಾಡಲಾಗಿದೆ.

English summary
Namma Metro is in 498 crore rupees loss this economic year. Last year it shows was 352 crore loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X