Namma Metro Fight Video Viral: ಮೊದಲ ಬಾರಿಗೆ ಮೆಟ್ರೋದಲ್ಲಿ ಪ್ರಯಾಣಿಕರ ಗಲಾಟೆ, ಹೊಡೆದಾಟ: ನೆಟ್ಟಿಗರು ಏನಂದ್ರು?
ಬೆಂಗಳೂರು, ಜುಲೈ 12: ದೆಹಲಿ ಮೆಟ್ರೋಗೆ ಕಾಡುತ್ತಿದ್ದ ಅಹಿತಕರ ಘಟನೆಗಳು ಇದೀಗ ಬೆಂಗಳೂರು ನಮ್ಮ ಮೆಟ್ರೋಗೂ ವ್ಯಾಪಿಸಿದಂತಿದೆ. ದೆಹಲಿ ಮೆಟ್ರೋದಲ್ಲಿ ಆಹಾರ ತಿನ್ನುವುದು, ಕಾನೂನು ಬಾಹಿರ ವರ್ತನೆ, ಡಾನ್ಸ್ ಮಾಡುವುದು, ಗಲಾಟೆ ಇನ್ನಿತರವುಗಳು ಸರ್ವೇ ಸಾಮಾನ್ಯವಾಗಿದೆ. ಆದರೆ ಬೆಂಗಳೂರಿನ ನಮ್ಮ ಮೆಟ್ರೋ ದಲ್ಲಿ ಇಂತಹ ಬೆಳವಣಿಗೆ, ಘಟನೆಗಳು ಅಪರೂಪ ಅಂತಲೇ ಹೇಳಬಹುದು.
ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋದಲ್ಲಿ ನಡೆಯುತ್ತಿದ್ದ ವಾಗ್ವಾದ, ಜಗಳ, ಗಲಾಟೆಗಳು, ಇದೀಗ ರಾಜ್ಯ ರಾಜಧಾನಿ ಬೆಂಗಳೂರು ನಮ್ಮ ಮೆಟ್ರೋ (Namma Metro) ರೈಲಿನಲ್ಲಿ ಕಾಣಿಸಿಕೊಂಡಿವೆ.

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ಜಗಳವನ್ನು, ಬೈಗಳ ಮತ್ತು ಕೈ ಕೈ ಮಿಲಾಯಿಸಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದ ಪ್ರಕಾರ, ನಮ್ಮ ಮೆಟ್ರೋ ರೈಲಿನಲ್ಲಿ ಪೀಕ್ ಸಮಯದಲ್ಲಿ ಕಿಕ್ಕಿರಿದು ಜನರು ತುಂಬಿಕೊಂಡಿದ್ದಾರೆ. ಈ ವೇಳೆ ಇಬ್ಬರು ಪ್ರಯಾಣಿಕರು ಪರಿಸ್ಪರ ನಿಂದಿಸಿದ್ದಲ್ಲದೇ, ಬಡಿದಾಡಿಕೊಂಡಿದ್ದಾರೆ.
ಜಗಳ ನಡುವೆ ಮಧ್ಯೆ ಪ್ರವೇಶಿಸಿದ ಸಹ ಪ್ರಯಾಣಿಕರು
ಮೆಟ್ರೋ ರೈಲು ಬೋಗಿ ಒಳಗೆ ಇಬ್ಬರು ಪ್ರಯಾಣಿಕರ ಮಧ್ಯೆ ಮಾತಿಗೆ ಮಾತು ಬೆಳೆದು ನೋಡ ನೋಡುತ್ತಲೇ ದೊಡ್ಡ ಗದ್ದಲವಾಗಿದೆ. ನೋಡುವುದಕ್ಕೆ ಇದೇನು ಸಣ್ಣ ಜಗಳದಂತೆ ಕಾಣುತ್ತಿಲ್ಲ. ಅಷ್ಟು ಗದ್ದಲದ ನಡುವೆ ಇಬ್ಬರು ಮುಗಿಬಿದ್ದು ಜಗಳವಾಗಿದ್ದಾರೆ. ಅಶ್ಲೀಲವಾಗಿ ಬೈದುಕೊಂಡಿದ್ದಾರೆ. ಅದೃಷ್ಟವಶಾತ್, ಇತರ ಪ್ರಯಾಣಿಕರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಆದರೆ ಇವರಿಬ್ಬರ ಮಧ್ಯದ ಜಗಳಕ್ಕೆ ಸ್ಪಷ್ಟ ಕಾರಣ ಏನು ಎಂಬುದು ಗೊತ್ತಿಲ್ಲ. ಜಗಳದ ವಿಡಿಯೋ ಮಾತ್ರ ವೈರಲ್ ಆಗುತ್ತಿದೆ. ಒಂದೆ ಬೋಗಿಗೆ ಒಳಬರುವಾಗಿ ತಿಕ್ಕಾಟ, ನೂಕಾಟ ಉಂಟಾಗಿ ಅದು ಮಾತಿಗೆ ಮಾತು ಬೆಳೆದು ನಂತರ ತೀವ್ರ ವಾಗ್ವಾದಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.
ಮೆಟ್ರೋದಲ್ಲಿ ಗಲಾಟೆ, ಬಡಿದಾಟ ಇದೇ ಮೊದಲು
ಗಲಾಟೆ, ಪರಿಸ್ಪರ ನಿಂದ ಮತ್ತು ಕೈ ಕೈ ಮಿಲಾಯಿಸಿರುವ ಘಟನೆ ಬೆಂಗಳೂರಿನ ನಮ್ಮ ಮೆಟ್ರೋ ದಲ್ಲಿ ಇದೇ ಮೊದಲ ಪ್ರಕರಣದ ಎನ್ನಲಾಗುತ್ತಿದೆ. ಈ ಹಿಂದೆ ಆಹಾರ ತಿನ್ನುವುದು, ಭಿಕ್ಷೆ ಬೇಡುವುದು, ಮಹಿಳೆಯರ ಮೇಲೆ ಅಸಭ್ಯ ವರ್ತನೆ, ಟಿಕೆಟ್ ಇಲ್ಲದೇ ಪ್ರಯಾಣದಂತೆ ಘಟನೆಗಳು ಜರುಗಿದ್ದರು.
ವಿಡಿಯೋಗೆ ಬಗ್ಗೆ ನೆಟ್ಟಿಗರು ಹೇಏಳಿದ್ದೇನು?
ಜಗಳದ ವಿಡಿಯೋ ವೈರಲ್ ಆಗುತ್ತಿದ್ದಂತೆ ವಯೋವೃದ್ಧರಿಗೆ, ಮಹಿಳೆಯರಿಗೆ, ಸಾರ್ವಜನಿಕ ಸಾರಿಗೆ ಸುರಕ್ಷತೆಯ ಬಗ್ಗೆ ಕಳವಳ ಹುಟ್ಟುಹಾಕಿದೆ. ಈ ಬಗ್ಗೆ ನೆಟ್ಟಿಗರು ಬಿಎಂಆರ್‌ಸಿಎಲ್‌ಗೆ ಪ್ರಶ್ನೆ ಮಾಡಿದ್ದಾರೆ. ಕೆಲವೊಬ್ಬರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವುದು ಬಹು ವಿಧಗಳಲ್ಲಿ ಅಪಾಯಕಾರಿ" ಎಂದು ಕಾಮೆಂಟ್ ಮಾಡಿದ್ದಾರೆ.
A fight broke out between two passengers inside an overcrowded Metro train in Bengaluru.
— ChristinMathewPhilip (@ChristinMP_) July 9, 2024
BMRCL is reviewing the video & investigating further details@OfficialBMRCL pic.twitter.com/x7uwMVqAfs
ಮತ್ತೊಬ್ಬ ನೆಟ್ಟಿಗರು, ಬೇರೆ ಪ್ರಯಾಣಿಕರನ್ನು ಹೊರಹೋಗಲು ಅನುಮತಿಸದೆ ಬಾಗಿಲುಗಳ ಮೂಲಕ ನುಗ್ಗಲಾಗುತ್ತದೆ. ಜನಸಂದಣಿ ವೇಳೆ ಹೇಗಿರಬೇಕು ಎಂಬುದನ್ನು ಮರೆದು, ಪ್ರಯಾಣಿಕರಿಂದ ಅಶಿಸ್ತಿನ ವರ್ತನೆ ತೋರುತ್ತಾರೆ. ಆಗ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ವಿಷಾದಿಸಿದ್ದಾರೆ.
ವಿಶೇಷವೆಂದರೆ, ಇದೇ ಘಟನೆ ದೆಹಲಿ, ಚೆನ್ನೈ, ಮುಂಬೈನಂತಹ ಮಹಾನಗರಗಳ ಮೆಟ್ರೋದಲ್ಲಿ ನಡೆದಿದ್ದರೆ, ಸಹ ಪ್ರಯಾಣಿಕರು ಸುಮ್ಮನೆ ನಿಂತು ನೋಡುತ್ತಿದ್ದರು. ಆದರೆ ಬೆಂಗಳೂರು ನಮ್ಮ ಮೆಟ್ರೋದಲ್ಲಿ ನಡೆದಿದ್ದಕ್ಕೆ ಸಹ ಪ್ರಯಾಣಿಕರು ತತಕ್ಷಣವೇ ಸ್ಪಂದಿಸಿದ್ದಾರೆ. ಇಬ್ಬರ ಜಗಳ ನಿಲ್ಲಿಸಿದ್ದಾರೆ ಎಂದು ಬೆಂಗಳೂರು ಜನರ ಮನಸ್ಥಿತಿ, ತೊಂದರೆ ವೇಳೆ ಸ್ಪಂದಿಸುವ ಗುಣಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications