ನಮ್ಮ ಮೆಟ್ರೋ: ಹಸಿರು ಮಾರ್ಗದ ಜಯನಗರ–ಆರ್.ವಿ.ರಸ್ತೆ ನಡುವೆ ನಿಧಾನಗತಿಯಲ್ಲಿ ರೈಲು ಸಂಚಾರ
ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ (Green Line) ಜಯನಗರ ಮತ್ತು ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ನಡೆಯುತ್ತಿರುವ ಸಿವಿಲ್ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ತಾತ್ಕಾಲಿಕ ವೇಗ ನಿರ್ಬಂಧ ವಿಧಿಸಲಾಗಿದೆ. ಈ ಸಂಬಂಧ ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಕಾಮಗಾರಿ ಅವಧಿಯಲ್ಲಿ ರೈಲುಗಳು ಸೂಚಿಸಿದ ಭಾಗದಲ್ಲಿ ನಿಧಾನಗತಿಯಲ್ಲಿ ಸಂಚರಿಸಲಿವೆ. ಪ್ರಯಾಣಿಕರ ಸುರಕ್ಷತೆ ಹಾಗೂ ಮೂಲಸೌಕರ್ಯ ದುರಸ್ತಿ ಕಾರ್ಯಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಹಸಿರು ಮಾರ್ಗದ ಜಯನಗರ ಮತ್ತು ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ನಡೆಯುತ್ತಿರುವ ಸಿವಿಲ್ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ತಾತ್ಕಾಲಿಕ ವೇಗ ನಿರ್ಬಂಧವನ್ನು ವಿಧಿಸಲಾಗಿದೆ. ಆದರೆ ಸಾಮಾನ್ಯ ರೈಲುಗಳ ಹೆಡ್ವೇಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ" ಎಂದು ಸ್ಪಷ್ಟಪಡಿಸಿದೆ.

ಆದರೆ ಸಾಮಾನ್ಯ ರೈಲುಗಳ ಹೆಡ್ವೇಯಲ್ಲಿ (Headway) ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮೆಟ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರೈಲುಗಳ ಆಗಮನ-ನಿರ್ಗಮನ ಸಮಯದಲ್ಲಿ ವ್ಯತ್ಯಾಸವಿಲ್ಲದೆ ನಿಗದಿತ ಅವಧಿಯಲ್ಲೇ ಸೇವೆ ಮುಂದುವರಿಯಲಿದೆ.
Information
— ನಮ್ಮ ಮೆಟ್ರೋ (@OfficialBMRCL) February 18, 2026
A temporary speed restriction has been imposed for the train movements between Jayanagar and R.V. Road Metro Stations for the ongoing civil maintenance works. However, normal train headways on the Green Line remains unaffected.
PRO, BMRCL @srivasrbmrccoi1
ಜಯನಗರ-ಆರ್.ವಿ.ರಸ್ತೆ ಮಧ್ಯೆ ರೈಲುಗಳು ತಾತ್ಕಾಲಿಕವಾಗಿ ನಿಧಾನಗತಿಯಲ್ಲಿ ಸಂಚರಿಸಲಿದೆ. ಹೆಡ್ವೇ ಅಥವಾ ಸೇವಾ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರಯಾಣಿಕರಿಗೆ ಸುರಕ್ಷತೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದೆ. ನಿರ್ವಹಣಾ ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ವೇಗ ನಿರ್ಬಂಧ ಜಾರಿಯಲ್ಲಿರಲಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸ್ವಲ್ಪ ಹೆಚ್ಚುವರಿ ಸಮಯವನ್ನು ಗಮನದಲ್ಲಿಟ್ಟುಕೊಂಡು ಯೋಜಿಸಿಕೊಳ್ಳಲು ಬಿಎಂಆರ್‌ಸಿಎಲ್ ಮನವಿ ಮಾಡಿದೆ.












Click it and Unblock the Notifications