Namma Metro: ಮುಂದಿನ ವಾರ ಮತ್ತೊಂದು ಮಾರ್ಗದ ಪ್ರಾಯೋಗಿಕ ಸಂಚಾರ ಆರಂಭ

ಬೆಂಗಳೂರು, ಜುಲೈ 10: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ಬೊಮ್ಮಸಂದ್ರ-ಆರ್. ವಿ. ರಸ್ತೆ 18.82 ಕಿ. ಮೀ. ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಮುಂದಿನ ವಾರ ಮತ್ತೊಂದು ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಶುರು ಆಗಲಿದ್ದು, ಈ ವರ್ಷದ ಅಂತ್ಯಕ್ಕೆ ಎರಡು ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ.

ನಮ್ಮ ಮೆಟ್ರೋದ ಹಸಿರು ಮಾರ್ಗದ ವಿಸ್ತರಿತ ಯೋಜನೆಯಾದ ನಾಗಸಂದ್ರ-ಮಾದಾವರ ನಡುವೆ ನಮ್ಮ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ ಮುಂದಿನ ವಾರ ಆರಂಭವಾಗಲಿದೆ. ಎಲ್ಲಾ ಪರೀಕ್ಷೆಗಳು ಮುಗಿದರೆ ವಿಸ್ತರಿತ ಮಾರ್ಗದ 3.7 ಕಿಲೋಮೀಟರ್‌ನಲ್ಲಿ ಅಕ್ಟೋಬರ್‌ನಲ್ಲಿ ವಾಣಿಜ್ಯ ಸಂಚಾರ ನಿರೀಕ್ಷೆ ಮಾಡಬಹುದು.

Namma Metro Green Line Nagasandra Madavara All Set For Trail Run

ಸದ್ಯ ಮೆಟ್ರೋ ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ ಮತ್ತು ನಾಗಸಂದ್ರ ತನಕ ನಮ್ಮ ಮೆಟ್ರೋ ರೈಲುಗಳ ಸಂಚಾರವಿದೆ. ತುಮಕೂರು ರಸ್ತೆಯ ಸಂಚಾರ ದಟ್ಟಣೆ ನಿವಾರಣೆ ಮಾಡಲು ಬಿಎಂಆರ್‌ಸಿಎಲ್ ಈ ವಿಸ್ತರಿತ ಮಾರ್ಗದ ಯೋಜನೆ ರೂಪಿಸಿತ್ತು. ಆದರೆ ಹಲವು ಗಡುವು ಮುಗಿದ ಬಳಿಕ ಈಗ ಪ್ರಾಯೋಗಿಕ ಸಂಚಾರ ಆರಂಭವಾಗುತ್ತಿದೆ.

3 ನಿಲ್ದಾಣಗಳಿವೆ: ನಾಗಸಂದ್ರ-ಮಾದಾವರ ನಡುವಿನ ವಿಸ್ತರಿತ ನಮ್ಮ ಮೆಟ್ರೋ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಮೂರು ನಿಲ್ದಾಣಗಳಿವೆ. ಮಾದವರ ನಿಲ್ದಾಣದ ಕೆಲವು ಕಾಮಗಾರಿ ಬಾಕಿ ಇತ್ತು. ಅದು ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರ ಆರಂಭಿಸಲು ತಯಾರಿ ನಡೆದಿದೆ.

ಮುಂದಿನ ವಾರ ಬಿಎಂಆರ್‌ಸಿಎಲ್ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಿದೆ. ಸುಮಾರು 45 ದಿನಗಳ ಕಾಲ ಹಳಿ, ಸಿಗ್ನಲಿಂಗ್ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಲಿವೆ. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರನ್ನು ಆಹ್ವಾನಿಸಿ ಪರೀಕ್ಷೆ ನಡೆಸಲಾಗುತ್ತದೆ. ಅವರ ಒಪ್ಪಿಗೆ ಬಳಿಕ ವಾಣಿಜ್ಯ ಸಂಚಾರದ ದಿನಾಂಕ ನಿಗದಿ ಮಾಡಲಾಗುತ್ತದೆ.

ತುಮಕೂರು ರಸ್ತೆಯ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ಈ ಮೆಟ್ರೋ ವಿಸ್ತರಿತ ಮಾರ್ಗ ಪ್ರಮುಖ ಪಾತ್ರವಹಿಸಲಿದೆ ಎಂದು ಅಂದಾಜಿಸಲಾಗಿದೆ. ವಿವಿಧ ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ಆಗಮಿಸುವ ಜನರಿಗೆ ಈ ಮಾರ್ಗ ಸಹಾಯಕವಾಗಲಿದೆ. ಬಿಐಇಸಿ ಬಳಿ ಬಸ್ ಇಳಿದು ಮೆಟ್ರೋ ಹತ್ತಿ ನಗರಕ್ಕೆ ಸುಲಭವಾಗಿ ಸಂಚಾರ ನಡೆಸಬಹುದು.

2017ರಲ್ಲಿ ಬಿಎಂಆರ್‌ಸಿಎಲ್ ವಿಸ್ತರಿತ ಮಾರ್ಗದ ಕಾಮಗಾರಿಯನ್ನು ಕೈಗೊಂಡಿತು. 2019ರಲ್ಲಿ ರೈಲು ಸಂಚಾರವನ್ನು ಆರಂಭಿಸುವ ಗುರಿಯನ್ನು ಹೊಂದಿತ್ತು. ಆದರೆ ಭೂ ಸ್ವಾಧೀನದ ವಿಚಾರಗಳು, ನೈಸ್ ರಸ್ತೆ ಮೇಲೆ ಮೆಟ್ರೋ ಫ್ಲೈ ಓವರ್ ನಿರ್ಮಾಣ ವಿಚಾರದಲ್ಲಿ ಉಂಟಾದ ವಿಳಂಬದ ಕಾರಣ ಯೋಜನೆ ಹಲವು ಗಡುವುಗಳನ್ನು ಮೀರಿ ಈಗ ಪೂರ್ಣಗೊಳ್ಳುತ್ತಿದೆ.

ಬಿಎಂಆರ್‌ಸಿಎಲ್ ಸದಾ ವಾಹನ ದಟ್ಟಣೆಯಿಂದ ಕೂಡಿರುವ ತುಮಕೂರು ರಸ್ತೆಯ ಸಂಚಾರ ದಟ್ಟಣೆ ಕಡಿಮೆ ಮಾಡುವುದು, ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ಗೆ ನಗರದಿಂದ ಮೆಟ್ರೋ ಸಂಪರ್ಕ ಕಲ್ಪಿಸುವ ಪ್ರಮುಖ ಉದ್ದೇಶದಿಂದ ಹಸಿರು ಮಾರ್ಗದ ವಿಸ್ತರಣೆ ಯೋಜನೆ ರೂಪಿಸಿ, ಕಾರ್ಯಗತಗೊಳಿಸಿದೆ.

ನಾಗಸಂದ್ರ-ಮಾದಾವರ 3.7 ಕಿ. ಮೀ. ಮಾರ್ಗ ಹಲವು ಗಡುವು ದಾಟಿ ಹೋಗಿದೆ. 2023ರ ಜೂನ್‌ನಲ್ಲಿ ರೈಲು ಸಂಚಾರ ಆರಂಭ ಎಂದು ಅಂದಾಜಿಸಲಾಗಿತ್ತು. ಆದರೆ ಬಳಿಕ ಅದು 2024ರ ಫೆಬ್ರವರಿಗೆ ಹೋಯಿತು. ನಂತರ 2024ರ ಜುಲೈಗೆ ಹೋಗಿತ್ತು. ಈಗ ಸೆಪ್ಟೆಂಬರ್ ಅಥವ ಅಕ್ಟೋಬರ್‌ನಲ್ಲಿ ಮಾರ್ಗ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

ಈ ಮೆಟ್ರೋ ಮಾರ್ಗ ಆರಂಭವಾದರೆ ತುಮಕೂರು ರಸ್ತೆಯಲ್ಲಿ ಉಂಟಾಗುವ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ನೆಲಮಂಗಲ ಕಡೆಯಿಂದ ಬೆಂಗಳೂರಿಗೆ ಬರುವ ಕಾರ್ಮಿಕರು, ಉದ್ಯೋಗಿಗಳು, ಮಾದವರದಲ್ಲಿ ಮೆಟ್ರೋ ಹತ್ತಿ ನಗರಕ್ಕೆ ಸುಲಭವಾಗಿ ತಲುಪಬಹುದು. ಆದ್ದರಿಂದ ಬೇಗ ಮೆಟ್ರೋ ಸಂಚಾರ ಆರಂಭಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+