• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಂಗೇರಿವರೆಗೆ ನಮ್ಮ ಮೆಟ್ರೋ ಸಂಚಾರ ಯಾವಾಗ, ದರ ಎಷ್ಟು?, ನಿಲ್ದಾಣಗಳ ಮಾಹಿತಿ

|
Google Oneindia Kannada News

ಬೆಂಗಳೂರು, ಮೇ 20: ಬಹುದಿನಗಳ ಜನರ ಬೇಡಿಕೆ ನನಸಾಗುವ ಕಾಲ ಬಂದಿದೆ. ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಮ್ಮ ಮೆಟ್ರೋ ವಿಸ್ತರಿತ ಮಾರ್ಗದಲ್ಲಿ ಶೀಘ್ರವೇ ಮೆಟ್ರೋ ಸಂಚರಿಸಲಿದೆ.

ಹೌದು, ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮಾಹಿತಿ ನೀಡಿದ್ದು, ನಮ್ಮ ಮೆಟ್ರೋದ ಮೈಸೂರು ರಸ್ತೆ ವಿಸ್ತರಿತ ಮಾರ್ಗವಾದ ಕೆಂಗೇರಿಯವರೆಗೆ ಜೂನ್‌ನಿಂದ ವಾಣಿಜ್ಯ ಸಂಚಾರ ಆರಂಭವಾಗಲಿದೆ.

ನಮ್ಮ ಮೆಟ್ರೋ: 2ಎ, 2ಬಿ ಹಂತದ ಯೋಜನೆಗಳಿಗೆ ಕೇಂದ್ರದ ಒಪ್ಪಿಗೆ ನಮ್ಮ ಮೆಟ್ರೋ: 2ಎ, 2ಬಿ ಹಂತದ ಯೋಜನೆಗಳಿಗೆ ಕೇಂದ್ರದ ಒಪ್ಪಿಗೆ

7.53 ಕಿ.ಮೀ ಉದ್ದದ ವಿಸ್ತರಿತ ಮಾರ್ಗದಲ್ಲಿ ಜೂನ್‌ನಲ್ಲಿ ಮೆಟ್ರೋ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆಯನ್ನು ಆರಂಭಿಸಿದೆ. ಈ ವಿಸ್ತರಿತ ಮಾರ್ಗಗಳಲ್ಲಿ ಬರುವ ನಿಲ್ದಾಣಗಳು, ಅಂದಾಜು ಪ್ರಯಾಣಿಕರ ಮಾಹಿತಿ ಇಲ್ಲಿದೆ.

   Tejasvi Surya ಕಾಂಗ್ರೆಸ್ ನಾಯಕರಿಗೆ ಟಾಂಗ್ | Oneindia Kannada
    ವಿಸ್ತರಿತ ಮಾರ್ಗದ ನಿಲ್ದಾಣಗಳು

   ವಿಸ್ತರಿತ ಮಾರ್ಗದ ನಿಲ್ದಾಣಗಳು

   ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ನಿಲ್ದಾಣ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳಿವೆ.

   ಮೈಸೂರು ರಸ್ತೆ-ಕೆಂಗೇರಿ ನಡುವೆ ಪರೀಕ್ಷಾರ್ಥ ಸಂಚಾರ ಆರಂಭಿಸಿದ ನಮ್ಮ ಮೆಟ್ರೋಮೈಸೂರು ರಸ್ತೆ-ಕೆಂಗೇರಿ ನಡುವೆ ಪರೀಕ್ಷಾರ್ಥ ಸಂಚಾರ ಆರಂಭಿಸಿದ ನಮ್ಮ ಮೆಟ್ರೋ

    ವಾಹನ ನಿಲುಗಡೆಗೆ ಅವಕಾಶ

   ವಾಹನ ನಿಲುಗಡೆಗೆ ಅವಕಾಶ

   ಈಗಾಗಲೇ ಸಿವಿಲ್ ಕಾಮಗಾರಿ ಮುಗಿದಿದ್ದು, ನಿಲ್ದಾಣಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ, ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ ಹಾಗೂ ಕೆಂಗೇರಿ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ.
   ಈ ವಿಸ್ತರಿತ ಮಾರ್ಗದಲ್ಲಿ ದಿನಕ್ಕೆ 75 ಸಾವಿರ ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ ಇದೆ, ಏ.3ರಿಂದ ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಆರಂಭಗೊಂಡಿತ್ತು. ವರ್ಕ್ ಫ್ರಂ ಹೋಂ ಕಾರಣದಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯೂ ಇರಬಹುದು.

    ನೀರು ಸೋರಿಕೆ ತಡೆಗಟ್ಟಲು ಕ್ರಮ

   ನೀರು ಸೋರಿಕೆ ತಡೆಗಟ್ಟಲು ಕ್ರಮ

   ಮೆಟ್ರೋ ರೈಲು ಮಾರ್ಗ ಅಥವಾ ನಿಲ್ದಾಣದ ಕೆಳಗೆ ಮಳೆಗಾಲದ ಸಮಯದಲ್ಲಿ ನೀರು ಸೋರಿಕೆ ಆಗುವುದನ್ನು ತಡೆಗಟ್ಟಲು ವಾಟರ್ ಪ್ರೂಫಿಂಗ್ ಕೆಲಸಕ್ಕೆ ಟೆಂಡರ್ ಕರೆಯಲಾಗಿದೆ. ಚಿಕ್ಕಪೇಟೆ ಮತ್ತು ಕೆಆರ್ ಮಾರ್ಕೆಟ್ ಸ್ಟೇಷನ್‌ಗಳಲ್ಲಿ 71 ಲಕ್ಷ ರೂ. ಮೌಲ್ಯದ ವಾಟರ್‌ ಪ್ರೂಫಿಂಗ್ ಕೆಲಸ ಆಗಲಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

   ಟೆಂಡರ್ ರದ್ದು: ನಾಗವಾರ ನಮ್ಮ ಮೆಟ್ರೋ ಮಾರ್ಗ ಕಾಮಗಾರಿ ಮತ್ತಷ್ಟು ತಡ

    ಕೆಂಗೇರಿವರೆಗೆ ಮೆಟ್ರೋ ದರ

   ಕೆಂಗೇರಿವರೆಗೆ ಮೆಟ್ರೋ ದರ

   ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಮೆಟ್ರೋ ದರ ಗರಿಷ್ಠ 56 ರೂ. ಆಗಿರಲಿದೆ. ಮೆಟ್ರೋ ಅತಿ ಉದ್ದದ ಮಾರ್ಗ ಎನಿಸಲಿರುವ ಕೆಂಗೇರಿಯಿಂದ ಸಿಲ್ಕ್‌ ಸಂಸ್ಥೆವರೆಗಿನ ಮಾರ್ಗಕ್ಕೆ 60 ರೂ. ಟಿಕೆಟ್ ದರ ಇರಲಿದೆ. ಟ್ರಾಕ್ ಹಾಗೂ ಸಿಗ್ನಲ್ ಸಂಬಂಧಿ ಕೆಲಸಗಳು ಈ ರಸ್ತೆಯಲ್ಲಿ ಅಂತಿಮ ಹಂತದಲ್ಲಿದೆ.

   English summary
   The Bangalore Metro Rail Corporation Limited on May 20 said that the 7.53-km Reach-2 Extension Line between Mysuru Road and Kengeri will open for the public in June.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X