ಏಪ್ರಿಲ್ 29ಕ್ಕೆ ನಮ್ಮ ಮೆಟ್ರೋ ಸುರಂಗ ಮಾರ್ಗ ಉದ್ಘಾಟನೆ

ಬೆಂಗಳೂರು, ಏಪ್ರಿಲ್ 25 : ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್‌ನ 18 ಕಿ.ಮೀ ನೇರಳೆ ಮಾರ್ಗದ ಉದ್ಘಾಟನೆ ಏಪ್ರಿಲ್ 29ರಂದು ನಡೆಯಲಿದೆ. ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ಜಂಕ್ಷನ್ ವರೆಗಿನ ಮಾರ್ಗವಿದಾಗಿದೆ. ಈ ಮಾರ್ಗದಲ್ಲಿ 5 ಕಿ.ಮೀ.ಸುರಂಗ ಮಾರ್ಗವಿರುವುದು ವಿಶೇಷ.

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮಾರ್ಗದ ಉದ್ಘಾಟನೆ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಏಪ್ರಿಲ್ 29ರ ಶುಕ್ರವಾರ ಸಂಜೆ 6 ಗಂಟೆಗೆ ವಿಧಾನಸೌಧದಲ್ಲಿ ನಮ್ಮ ಮೆಟ್ರೋ ಮಾರ್ಗದ ಉದ್ಘಾಟನೆ ನಡೆಯಲಿದೆ. ಏಪ್ರಿಲ್ 30ರ ಶನಿವಾರ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ. [ಚಿತ್ರಗಳು : ನಮ್ಮ ಮೆಟ್ರೋ ಸುರಂಗ ಮಾರ್ಗದ ನಿಲ್ದಾಣಗಳು]

namma metro

ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ರೈಲು ಸಂಚಾರವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಿದ್ದಾರೆ. [ಬೈಯಪ್ಪನಹಳ್ಳಿಯಿಂದ-ನಾಯಂಡಹಳ್ಳಿಗೆ 35 ನಿಮಿಷದ ಪ್ರಯಾಣ]

ಪೂರ್ವ-ಪಶ್ಚಿಮ ಕಾರಿಡಾರ್‌ನ 18 ಕಿ.ಮೀ ನೇರಳೆ ಮಾರ್ಗದ ಪರಿಶೀಲನೆ ನಡೆಸಿದ್ದ ರೈಲ್ವೆ ಸುರಕ್ಷತಾ ಆಯುಕ್ತ ಎಸ್.ಕೆ.ಮಿತ್ತಲ್ ಅವರು ಸಾರ್ವಜನಿಕ ಸಂಚಾರಕ್ಕೆ ಏ.11ರಂದು ಅನುಮತಿ ನೀಡಿದ್ದರು. ಈಗ ಈ ಮಾರ್ಗದ ಉದ್ಘಾಟನೆ ನಡೆಯುತ್ತಿದೆ.

ಸುರಂಗ ಮಾರ್ಗವಿದೆ : ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ಜಂಕ್ಷನ್ ವರೆಗಿನ ಮಾರ್ಗ (ಪೂರ್ವ-ಪಶ್ಚಿಮ ಕಾರಿಡಾರ್‌) 18 ಕಿ.ಮೀ ನೇರಳೆ ಮಾರ್ಗದ ಪೈಕಿ 13 ಕಿ.ಮೀ.ಎತ್ತರಿಸಿದ ಮಾರ್ಗ ಮತ್ತು 5 ಕಿ.ಮೀ.ಸುರಂಗ ಮಾರ್ಗವಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ತನಕ ರೈಲು ಸುರಂಗ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ.

ದಕ್ಷಿಣ ಭಾರತದ ಮೊದಲ ಮೆಟ್ರೋ ಸುರಂಗ ಮಾರ್ಗ ಇದಾಗಿದೆ. ಸುರಂಗ ಮಾರ್ಗದಲ್ಲಿ 5 ನಿಲ್ದಾಣಗಳಿವೆ. ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣ ತಲುಪಲು 2 ನಿಮಿಷ ಸಾಕು. ಸುರಂಗದೊಳಗೆ 8 ರಿಂದ 10 ನಿಮಿಷಗಳ ಕಾಲ ರೈಲು ಸಂಚಾರ ನಡೆಸಲಿದೆ.

ನಿಲ್ದಾಣಗಳು

bmrcl

ಸುರಂಗ ಮಾರ್ಗದ ವಿಡಿಯೋ ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+