ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

6 ತಿಂಗಳಲ್ಲಿ ಬರೋಬ್ಬರಿ 206 ಕೋಟಿ ಆದಾಯ ಗಳಿಸಿದ ನಮ್ಮ ಮೆಟ್ರೋ

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಆರು ಬೋಗಿಗಳ ಮೆಟ್ರೋ ಸಂಚಾರ ಆರಂಭವಾದ ಮೇಲೆ ಜನದಟ್ಟಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಹಾಗೆಯೇ ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 206 ಕೋಟಿ ರೂ ಆದಾಯ ಗಳಿಸಿದೆ.

2018ರ ಏಪ್ರಿಲ್ ಆರಂಭದಿಂದ ಸೆಪ್ಟೆಂಬರ್‌ವರೆಗೆ ರೈಲು ಕಾರ್ಯಾಚರಣೆಯಿಂದ ಬಂದ ಆದಾಯವನ್ನು ಗಳಿಸಿದೆ. ಈ ಆರು ತಿಂಗಳ ಅವಧಿಯಲ್ಲಿ ನಿಗಮಕ್ಕೆ ಟಿಕೆಟ್‌ನಿಂದಲೇ 206.91 ಕೋಟಿ ಆದಾಯ ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಮ್ಮ ಮೆಟ್ರೋ ನಿಲ್ದಾಣದ ಪಾರ್ಕಿಂಗ್‌ನಿಂದ ಬಂದಿರುವ ಆದಾಯವೆಷ್ಟು?ನಮ್ಮ ಮೆಟ್ರೋ ನಿಲ್ದಾಣದ ಪಾರ್ಕಿಂಗ್‌ನಿಂದ ಬಂದಿರುವ ಆದಾಯವೆಷ್ಟು?

ಏಪ್ರಿಲ್‌ನಲ್ಲಿ 28.34 ಕೋಟಿ ರೂ, ಮೇನಲ್ಲಿ 29.07 ಕೋಟಿ ರೂ, ಜೂನ್‌ನಲ್ಲಿ 29.32 ಕೋಟಿ ರೂ, ಜುಲೈನಲ್ಲಿ 30.51 ಕೋಟಿ ರೂ ಆದಾಯ ಗಳಿಸಿದೆ.

Namma metro earns Rs 206 crore in 6 months

ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿರುವ ವರದಿಯಲ್ಲಿ 2017-18ನೇ ಸಾಲಿನ ವರದಿಯಲ್ಲಿ ರೈಲು ಕಾರ್ಯಾಚರಣೆಯಿಂದ ಒಂದು ವರ್ಷದಲ್ಲಿ 281 ಕೋಟಿ ರೂ ಆದಾಯ ಬಂದಿರುವುದನ್ನು ತಿಳಿಸಲಾಗಿದೆ.

ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ

ಬಸ್, ಸ್ವಂತ ವಾಹನಗಳನ್ನು ಬಿಟ್ಟು ಮೆಟ್ರೋವನ್ನು ಏರಲು ಆರಂಭಿಸಿದ್ದಾರೆ. ಆದ್ದರಿಂದ ಮೆಟ್ರೋಗೆ ಉತ್ತಮ ಆದಾಯ ಬರುತ್ತಿದೆ. ಒಂದು ವರ್ಷಕ್ಕೆ ಹೋಲಿಸಿದರೆ ಆರು ತಿಂಗಳ ಆದಾಯ ದಾಖಲೆ ಪ್ರಮಾಣದಲ್ಲಿ ಎಂದು ಹೇಳಲಾಗುತ್ತಿದೆ.

English summary
Namma metro earns Rs 206 crore in 6 months, BMRCL indicates the increase of income. According to first six months data income is increased to 206 crore rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X