Namma Metro; ಚಾಲಕ ರಹಿತ ಮೆಟ್ರೋ ರೈಲು ಅಕ್ಟೋಬರ್‌ನಲ್ಲಿ ಆಗಮನ

ಬೆಂಗಳೂರು, ಸೆಪ್ಟೆಂಬರ್ 21; ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ನೇರಳೆ ಮತ್ತು ಹಸಿರು ಮಾರ್ಗ ಬಿಟ್ಟು ಹಳದಿ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಚಾಲಕ ರಹಿತ ಮೆಟ್ರೋ ಸಹ ಬೆಂಗಳೂರು ನಗರಕ್ಕೆ ಆಗಮಿಸುತ್ತಿದೆ.

ಬೆಂಗಳೂರು ನಗರದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಹಳದಿ ಮಾರ್ಗ (ಆರ್. ವಿ. ರಸ್ತೆ-ಬೊಮ್ಮಸಂದ್ರ) ನಡುವೆ ಸಂಚಾರ ನಡೆಸುತ್ತದೆ. ಈ ರೈಲಿನ ಮಾದರಿ ಈಗ ಬಿಡುಗಡೆಗೊಂಡಿದ್ದು, ಅಕ್ಟೋಬರ್‌ನಲ್ಲಿ 12 ಬೋಗಿಯನ್ನು ಒಳಗೊಂಡಿರುವ 2 ರೈಲುಗಳು ಚೀನಾದಿಂದ ನಗರಕ್ಕೆ ಬರುವ ನಿರೀಕ್ಷೆ ಇದೆ.

Namma Metro Driver Less Coach Expected To Arrive By October

ಇನ್ಫೋಸಿಸ್, ಬಯೋಕಾನ್ ಹೀಗೆ ಹಲವು ಐಟಿ ಕಂಪನಿಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಸಿಟಿಗೆ ದಕ್ಷಿಣ ಬೆಂಗಳೂರನ್ನು ನಮ್ಮ ಮೆಟ್ರೋ ಹಳದಿ ಮಾರ್ಗ ಸಂಪರ್ಕಿಸುತ್ತದೆ. ಈ ಮಾರ್ಗದಲ್ಲಿಯೇ ಚಾಲಕ ರಹಿತ ಮೆಟ್ರೋ ಓಡಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಚೀನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಚಾಲಕ ರಹಿತ ಮೆಟ್ರೋ ಬೋಗಿ ಪೂರೈಕೆ ಮಾಡುವ ಟೆಂಡರ್ ಪಡೆದಿದೆ.

ಈಗ ನಗರದಲ್ಲಿ ಸಂಚಾರ ನಡೆಸುತ್ತಿರುವ ಮೆಟ್ರೋ ರೈಲುಗಳು ಬಿಎಂಇಎಲ್ ತಯಾರು ಮಾಡಿವೆ. ಇದೇ ಮೊದಲ ಬಾರಿಗೆ ಬೇರೆ ಕಂಪನಿಯೊಂದು ನಮ್ಮ ಮೆಟ್ರೋ ರೈಲು ಬೋಗಿ ಪೂರೈಕೆ ಮಾಡಲು ಬಿಎಂಆರ್‌ಸಿಎಲ್ ಟೆಂಡರ್ ಪಡೆದುಕೊಂಡಿದೆ. ಒಟ್ಟು 204 ಬೋಗಿಗಳನ್ನು ಪೂರೈಕೆ ಮಾಡುವ ಒಪ್ಪಂದ ಇದಾಗಿದೆ.

ಎರಡು ರೈಲುಗಳು ಆಗಮನ; ಅಕ್ಟೋಬರ್‌ನಲ್ಲಿ ಚೀನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ 12 ಬೋಗಿಯನ್ನು ಹೊಂದಿರುವ 2 ಚಾಲಕ ರಹಿತ ಮೆಟ್ರೋ ರೈಲನ್ನು ಬೆಂಗಳೂರಿಗೆ ಕಳಿಸಲಿದೆ. ಒಪ್ಪಂದದ ಭಾಗವಾಗಿ ಉಳಿದ ರೈಲು ಬೋಗಿಯನ್ನು ಭಾರತದ ಟಿಟಾಗರ್ ರೈಲ್ ಇಂಡಿಯಾ ಕಂಪನಿ ಮೂಲಕ ತಯಾರು ಮಾಡಲಾಗುತ್ತದೆ.

ಬಿಎಂಆರ್‌ಸಿಎಲ್ ಮೂಲಗಳನ್ನು ಉಲ್ಲೇಖಿಸಿ moneycontrol.com ಈ ಕುರಿತು ವರದಿ ಮಾಡಿದೆ. ಬಿಎಂಆರ್‌ಸಿಎಲ್‌ನ ಅಧಿಕಾರಿಗಳು ರೈಲುಗಳ factory acceptance test ಪರೀಕ್ಷೆಗಾಗಿ ಚೀನಾಕ್ಕೆ ತೆರಳಿದ್ದಾರೆ. ಸಿಗ್ನಲಿಂಗ್ ಸೇರಿದಂತೆ ಹಲವು ಪರಿಶೀಲನೆಗಳನ್ನು ನಡೆಸಿ, ಬದಲಾವಣೆಗಳ ಕುರಿತು ಕಂಪನಿಗೆ ಮಾಹಿತಿ ನೀಡಲಿದ್ದಾರೆ.

ಈ ಪರೀಕ್ಷೆಗಳು ಮುಕ್ತಾಯವಾದರೆ ಚೀನಾದಿಂದ ಚೆನ್ನೈ ಬಂದರಿಗೆ ಎರಡು ರೈಲುಗಳು ಆಗಮಿಸಲಿವೆ. ಅಕ್ಟೋಬರ್‌ನಲ್ಲಿ ಈ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ. ಬಳಿಕ ಚೆನ್ನೈನಿಂದ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ರೈಲು ತರಲಾಗುತ್ತದೆ. ಬಳಿಕ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತದೆ.

ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಭಾಗವಾಗಿ ಚಾಲಕ ರಹಿತ ಮೆಟ್ರೋ ರೈಲು ಓಡಿಸಲಾಗುತ್ತದೆ. ಈಗ ಡಿಸ್ಟೆನ್ಸ್ ಟು ಡಿಸ್ಟೆನ್ಸ್‌ ರೈಲು ಸಿಗ್ನಲಿಂಗ್ ವ್ಯವಸ್ಥೆಯನ್ನು ನಮ್ಮ ಮೆಟ್ರೋ ಅಳವಡಿಕೆ ಮಾಡಿಕೊಂಡಿದೆ. ಆದರೆ ಸಿಬಿಟಿಸಿ ಸಿಗ್ನಲಿಂಗ್ ಮೂಲಕ ರೈಲು ಸಂಚಾರದ ಅವಧಿಯಲ್ಲಿ 90 ಸೆಕೆಂಡ್ ಉಳಿತಾಯವಾಗಲಿದೆ.

2024ರ ಜೂನ್ ಒಳಗೆ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಮಾರ್ಗದ ಎಲ್ಲಾ ಕಾಮಗಾರಿಯನ್ನು 2023ರ ಡಿಸೆಂಬರ್‌ನಲ್ಲಿ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ಸೆಪ್ಟೆಂಬರ್‌ನಲ್ಲಿಯೇ ಚೀನಾದಿಂದ ರೈಲು ಬೋಗಿ ಬರಬಹುದುದ ಎಂದು ಅಂದಾಜಿಸಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಅದು ವಿಳಂಬವಾಗಿದೆ.

ಮನಿ ಕಂಟ್ರೋಲ್‌ಗೆ ನೀಡಿದ ಸಂದರ್ಶನದಲ್ಲಿ ಟಿಟಾಗರ್ ರೈಲ್ ಇಂಡಿಯಾ ಕಂಪನಿ ಸಿಇಒ ಉಮೇಶ್ ಚೌಧರಿ 216 ಬೋಗಿಗಳನ್ನು ಬಿಎಂಆರ್‌ಸಿಎಲ್‌ಗೆ ಮಾರ್ಚ್ 2025ರೊಳಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. 216 ರೈಲುಗಳಲ್ಲಿ 126 ರೈಲು 21ಬೋಗಿಯನ್ನು ಹೊಂದಿವೆ. ಉಳಿದ ರೈಲುಗಳು 15 ಬೋಗಿಯನ್ನು ಒಳಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+