Namma Metro: ಡೆಲ್ಮಿಯಾ ರಸ್ತೆ ಮೇಲ್ಸೇತುವೆ ಮೇಲೆ 'ನಮ್ಮ ಮೆಟ್ರೋ' ಕಾರಿಡಾರ್ ನಿರ್ಮಾಣ!, ಅದೇಗೆ? ತಿಳಿಯಿರಿ

ಜೆಪಿ ನಗರ 4ನೇ ಹಂತ- ಕೆಂಪಾಪುರವರೆಗೆ 32.15 ಕಿಲೋ ಮೀಟರ್ ದೂರದಲ್ಲಿ ಮೆಟ್ರೊ ಕಾರಿಡಾರ್ ನಿರ್ಮಾಣಕ್ಕೆ ಡೆಲ್ಮಿಯಾ ಮೇಲ್ಸೇತುವೆ ಅಡ್ಡಿ. ಹೀಗಿದ್ದರು ತಲೆ ಎತ್ತಲಿದೆ ಮೆಟ್ರೋ ಕಾರಿಡಾರ್. ಅದು ಹೇಗೆ, ಹೊಸ ವಿಧಾನ ಏನು? ಮುಂದೆ ಓದಿ.

ಬೆಂಗಳೂರು, ಫೆಬ್ರವರಿ 16: ಬೆಂಗಳೂರಲ್ಲಿ ನಮ್ಮ ಮೆಟ್ರೋ ಯೋಜನೆ ಕಾಮಗಾರಿಗಳ ಕೆಲಸ ಭರದಿಂದ ಸಾಗುತ್ತಿದೆ. ಮೆಟ್ರೋ 3ನೇ ಹಂತದ ಯೋಜನೆಯಡಿ ಬರುವ ಮೆಟ್ರೋ ಲೈನ್‌ಗೆ ಕೆಲವು ವರ್ಷಗಳ ಹಿಂದಷ್ಟೇ ಲೋಕಾರ್ಪಣೆಗೊಂಡ ನಗರದ ಪ್ರಮುಖ ಮೇಲ್ಸೇತುವೆ ಅಡ್ಡಿಯಾಗಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) 3ನೇ ಹಂತದ ಯೋಜನೆಯಡಿ ನಗರದ ಹೊರವರ್ತುಲ ರಸ್ತೆಯಲ್ಲಿ ಜೆಪಿ.ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಒಟ್ಟು 32.15 ಕಿಲೋ ಮೀಟರ್‌ ದೂರದ ಮೆಟ್ರೊ ಕಾರಿಡಾರ್ ನಿರ್ಮಿಸುತ್ತಿದೆ. ಈ ಮೆಟ್ರೋ ಲೈನ್‌ ಸ್ಥಾಪನೆಗೆ ಜೆ.ಪಿ ನಗರದಲ್ಲಿರುವ ಡೆಲ್ಮಿಯಾ ಸರ್ಕಲ್ ಫ್ಲೈಓವರ್ ಅಡ್ಡಿಯಾಗಿತ್ತು.

ಮೇಲ್ಸೇತುವೆ ರಕ್ಷಿಸಬೇಕು ಎಂಬ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಹೊಸದೊಂದು ಕ್ರಮಕ್ಕೆ ಮುಂದಾಗಿದೆ. ಹೊಸ ತಂತ್ರಜ್ಞಾನದ ಮೂಲಕ ಮೇಲ್ಸೇತುವೆ ಮೇಲೆಯೆ ಕಾರಿಡಾರ್ ನಿರ್ಮಿಸಲು ನಿರ್ಧರಿಸಿದೆ. ಇದು ಹೇಗೆ ಸಾಧ್ಯ? ಎಂಬ ಕುತೂಹಲವು ಎಲ್ಲರಲ್ಲಿದೆ. ಒಂದು ವೇಳೆ ಸ್ಥಾಪನೆಯಾದರೆ ಸಿದ್ಧವಾದ ಮೇಲ್ಸೇತುವೆ ಮೇಲೆ ಮೆಟ್ರೋ ಕಾರಿಡಾರ್ ಸ್ಥಾಪನೆ ಇದೇ ಮೊದಲು ಎನ್ನಬಹುದಾಗಿದೆ.

2018ರಲ್ಲಿ ನಿರ್ಮಾಣಗೊಂಡಿದ್ದ ಮೇಲ್ಸೇತುವೆ

2018ರಲ್ಲಿ ನಿರ್ಮಾಣಗೊಂಡಿದ್ದ ಮೇಲ್ಸೇತುವೆ

ವೇಗಾ ಸಿಟಿ ಮಾಲ್ ಕಡೆಯಿಂದ ಕನಕಪುರ ರಸ್ತೆ ಕಡೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಡೆಲ್ಮಿಯಾ ಸರ್ಕಲ್ ಫ್ಲೈಓವರ್ ಸಮಸ್ಯೆ ಒಂದು ಹಂತ್ಯಕ್ಕೆ ಇತ್ಯರ್ಥವಾದಂತಾಗಿದೆ. ಈ ಮೇಲ್ಸೇತುವೆ ರಸ್ತೆಯ ಮೀಡಿಯನ್ ಜಾಗವನ್ನು ಬಳಸಿಕೊಂಡು ನಿರ್ಮಿಸಲಾಗಿತ್ತು.

ಕನಕಪುರ ರಸ್ತೆ,ಬನ್ನೇರುಘಟ್ಟಕ್ಕೆ ಮಾರ್ಗವಾಗಿ ಸಂಚರಿಸುವವರಿಗೆ ಅನುಕೂಲವಾಗಲು ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡಲು 4 ಪಥದ ಮೇಲ್ಸೇತುವೆ ನಿರ್ಮಿಸಲಾಗಿದೆ. ಇದರ ನಿರ್ಮಾಣಕ್ಕೆ ಬಿಬಿಎಂಪಿಯು ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿದೆ. 2018 ರಲ್ಲಿ ಲೋಕರ್ಪಣೆಗೊಂಡಿತ್ತು. ಇಳಿಜಾರು ಸೇರಿದಂತೆ ಮೇಲ್ಸೇತುವೆ ಸುಮಾರು 300 ಮೀಟರ್ ಉದ್ದವಿದೆ.

32.15 ಕಿಮಿ ಕಾರಿಡಾರ್:22 ನಿಲ್ದಾಣ

32.15 ಕಿಮಿ ಕಾರಿಡಾರ್:22 ನಿಲ್ದಾಣ

ಜೆಪಿ ನಗರ 4ನೇ ಹಂತ- ಕೆಂಪಾಪುರವರೆಗೆ 32.15 ಕಿಲೋ ಮೀಟರ್ ದೂರದಲ್ಲಿ ಮೆಟ್ರೊ ಕಾರಿಡಾರ್ ತಲೆ ಎತ್ತಲಿದೆ. ಈ ಮಾರ್ಗದಲ್ಲಿ ಒಟ್ಟು 22 ನಿಲ್ದಾಣಗಳು ಬರಲಿವೆ. ಈ ಕುರಿತು ಮಾತನಾಡಿದ ನಮ್ಮ ಮೆಟ್ರೋ ಅಧಿಕಾರಿಯೊಬ್ಬರು, ಮುಖ್ಯ ರಸ್ತೆಗಳಲ್ಲಿ ಮಧ್ಯಮ ಭಾಗದಲ್ಲಿ ಪಿಲ್ಲರ್ ನಿಲ್ಲಿಸಿ ಮೆಟ್ರೋ ಕಾರಿಡಾರ್ ನಿರ್ಮಿಸಲಾಗುತ್ತದೆ. ಆದರೆ ಡೆಲ್ಮಿಯಾ ವೃತ್ತದಲ್ಲಿ ಹಾಗೆ ನಿರ್ಮಿಸಲು ಸ್ಥಳದ ಅಭಾವವಿದೆ. ಹೀಗಾಗಿ ಬಿಬಿಎಂಪಿ ಅನುಮೋದನೆ ಸಹಿತಿ ಮೇಲ್ಸೇತುವೆಯ ಮೇಲೆಯೇ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.

ಮೇಲ್ಸೇತುವೆ ಮೇಲೆ ಮೆಟ್ರೋ ಕಾರಿಡಾರ್ ನಿರ್ಮಾಣ ಹೇಗೆ?

ಮೇಲ್ಸೇತುವೆ ಮೇಲೆ ಮೆಟ್ರೋ ಕಾರಿಡಾರ್ ನಿರ್ಮಾಣ ಹೇಗೆ?

ಎಲಿವೇಟೆಡ್ ಲೈನ್‌ ನಿರ್ಮಾಣಕ್ಕಾಗಿ ಮೊದಲು ರಸ್ತೆಯ 2 ಬದಿ ಪೋರ್ಟಲ್ ಪಿಯರ್ ನಿರ್ಮಿಸಿ ಅದರ ಮೇಲೆ ವೈಡಕ್ಟ್ ಕೂರಿಸಲಾಗುವುದು. ಈ ಡೆಲ್ಮಿಯಾ ಮೇಲ್ಸೇತುವೆಯ ಎರಡೂ ಬದಿಯಲ್ಲಿ ಒಟ್ಟು 12 ಪೈರ್ ಸ್ಥಾಪಿಸಲಾಗುವುದು. ಈ ವಿಧಾನವು ಮೇಲ್ಸೇತುವೆ ರಕ್ಷಣೆ ಮಾಡುವ ಜೊತೆಗೆ ಅಂದುಕೊಂಡಂತೆ ಮೆಟ್ರೋ ಕಾರಿಡಾರ್ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಕಾರಿಡಾರ್‌ಗಾಗಿ ಮೇಲ್ಸೆತುವೆಯ ಎರಡೂ ಕಡೆಗಳಲ್ಲಿ 767 ಚದರ ಮೀಟರ್ ಭೂಮಿ ಸ್ವಾಧೀನ ಮಾಡಿಕೊಳ್ಳಲಿದೆ. ಮೇಲ್ಸೇತುವೆ ಮೇಲೆ ಮೆಟ್ರೋ ಕಾರಿಡಾರ್ ಪಿಲ್ಲರ್ ಎತ್ತರ 12 ಮೀಟರ್‌ ಗಳಷ್ಟಿರಲಿವೆ ಎನ್ನಲಾಗಿದೆ.

ಸ್ವಾಧೀನಕ್ಕೆ ಭೂ ಮಾಲೀಕರಿಂದ ವಿರೋಧ

ಸ್ವಾಧೀನಕ್ಕೆ ಭೂ ಮಾಲೀಕರಿಂದ ವಿರೋಧ

ಯೋಜನೆಗಾಗಿ ನಮ್ಮ ಮೆಟ್ರೋಗೆ ಸದ್ಯ ಭೂಮಿ ಕೊಡಲು ಭೂಮಾಲೀಕರು ವಿರೋಧಿಸುತ್ತಿದ್ದಾರೆ. ಆಸ್ತಿ ಮಾಲೀಕರು ತಮ್ಮ ಆಸ್ತಿಯ ಒಂದು ಭಾಗವನ್ನು ಸ್ವಾಧೀನಪಡಿಸಿಕೊಂಡ ನಂತರ ಪಿಲ್ಲರ್‌ಗಳನ್ನು ನಿರ್ಮಿಸುವುದರಿಂದ ತಮ್ಮ ಆಸ್ತಿಗಳ ಅತ್ಯುತ್ತಮ ಬಳಕೆಯಿಂದ ವಂಚಿತರಾಗಲಿದ್ದಾರೆ. ಕೆಲವರು ಮೇಲ್ಸೇತುವೆ ಮಧ್ಯ ಭಾಗದಲ್ಲಿ ಪಿಲ್ಲರ್ ನಿಲ್ಲಿಸಿ ಮೆಟ್ರೋಲೈನ್ ಸ್ಥಾಪಿಸಲು ಸೂಚಿಸಿದ್ದರು. ಅವುಗಳು ಕಾರ್ಯ ಸಾಧುವಲ್ಲ ಎಂದು ತಿಳಿದು ಬಂದಿದೆ.

ಕೇಂದ್ರದ ಅನುಮತಿಗಾಗಿ ಕಾಯುತ್ತಿರುವ ನಮ್ಮ ಮೆಟ್ರೋ

ಕೇಂದ್ರದ ಅನುಮತಿಗಾಗಿ ಕಾಯುತ್ತಿರುವ ನಮ್ಮ ಮೆಟ್ರೋ

3ನೇ ಹಂತ ಮೆಟ್ರೋ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮತಿಗೆ ನಮ್ಮ ಮೆಟ್ರೋ ಕಾಯುತ್ತಿದೆ. ರಾಜ್ಯ ಸರ್ಕಾರ ಎರಡು ಕಾರಿಡಾರ್‌ಗಳ ಯೋಜನೆಗೆ ಅನುಮತಿ ನೀಡಿದೆ. ಆ ಕಡತಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಈ ಮೂರನೇ ಹಂತದ ಮತ್ತೊಂದು ಕಾರಿಡಾರ್ ಅನ್ನು ಮಾಗಡಿ ರಸ್ತೆಯಲ್ಲಿ ಹೊಸಹಳ್ಳಿಯಿಂದ ಕಡಬಗೆರೆಗೆ ಪ್ರಸ್ತಾಪಿಸಲಾಗಿದ್ದು 12.5 ಕಿ.ಮೀ. ಉದ್ದವರಲಿದೆ. ಒಟ್ಟು ಯೋಜನಾ ವೆಚ್ಚ ₹16,300 ಕೋಟಿ ನಲ್ಲಿ ತಲೆ ಎತ್ತಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+