ಬೈಯಪ್ಪನಹಳ್ಳಿ - ಕೆಆರ್ ಪುರ ಮಾರ್ಗ ಜುಲೈ 15ರೊಳಗೆ ಕಾರ್ಯಾರಂಭ: ಬೆಂಗಳೂರು ಮೆಟ್ರೋ ಎಂಡಿ

ಬೆಂಗಳೂರು, ಮೇ. 18: ಬೆಂಗಳೂರು ಮೆಟ್ರೋದ ಬಹುನಿರೀಕ್ಷಿತ 2 ಕಿಮೀ ಉದ್ದದ ಬೈಯಪ್ಪನಹಳ್ಳಿ - ಕೆಆರ್ ಪುರ ಮೆಟ್ರೋ ವಿಭಾಗ ಜುಲೈ 15 ರೊಳಗೆ ಕಾರ್ಯನಿರ್ವಹಿಸಲಿದೆ ಎಂದು ಬೆಂಗಳೂರು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಈ ಲಿಂಕ್ ಪೂರ್ಣಗೊಂಡ ನಂತರ 25.7ಕಿಮೀ ಉದ್ದದ ಕೆಂಗೇರಿ-ಬೈಯಪ್ಪನಹಳ್ಳಿ ಕಾರಿಡಾರ್ ಇತ್ತೀಚೆಗೆ ಉದ್ಘಾಟನೆಗೊಂಡ 13.7 ಕಿಮೀ ಉದ್ದದ ವೈಟ್‌ಫೀಲ್ಡ್-ಕೆಆರ್ ಪುರಂ ಮೆಟ್ರೋ ವಿಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಬೈಯಪ್ಪನಹಳ್ಳಿ - ಕೆಆರ್ ಪುರ ನಡುವಿನ ಫೀಡರ್ ಬಸ್ ಗಳನ್ನು ಪ್ರಯಾಣಿಕರು ಅವಲಂಬಿಸಬೇಕಾದ ಅನಿವಾರ್ಯತೆ ಇಲ್ಲವಾಗುತ್ತದೆ.

Namma Metro

"ಸದ್ಯ ಬೈಯಪ್ಪನಹಳ್ಳಿ ಮತ್ತು ಜ್ಯೋತಿಪುರ (ಬೆಣ್ಣಿಗನಹಳ್ಳಿ) ಎರಡೂ ಕಡೆಯಿಂದ ಟ್ರ್ಯಾಕ್ ಲೇಯಿಂಗ್ ಪ್ರಗತಿಯಲ್ಲಿದೆ. ಈ ತಿಂಗಳ ಅಂತ್ಯದ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ" ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

"ಟ್ರಾಕ್ಷನ್, ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕೆಲಸಗಳನ್ನು ಜೂನ್ 15 ರೊಳಗೆ ಪೂರ್ಣಗೊಳಿಸಲಾಗುವುದು ಮತ್ತು ಪ್ರಾಯೋಗಿಕ ರನ್‌ಗಳು ನಡೆಯಲಿವೆ. ದೂರವು ಕಡಿಮೆ ಇರುವುದರಿಂದ, ಪ್ರಾಯೋಗಿಕ ರನ್‌ಗಳನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು. ಇದರ ಕೊನೆಯಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರನ್ನು ಪರಿಶೀಲನೆಗೆ ಆಹ್ವಾನಿಸಲಾಗುತ್ತದೆ. ಜೂನ್ ತಿಂಗಳಿನಿಂದ ಕೆಆರ್ ಪುರ - ಬೈಯಪ್ಪನಹಳ್ಳಿ ವಿಭಾಗದ ವಾಣಿಜ್ಯ ಕಾರ್ಯಾಚರಣೆಯನ್ನು ಜುಲೈ 15 ರೊಳಗೆ ಪ್ರಾರಂಭಿಸಲಾಗುವುದು" ಎಂದು ಅವರು ಮಾಹಿತಿ ನೀಡಿದ್ದಾರೆ.

Namma Metro

"ನಾವು ಜ್ಯೋತಿಪುರದಲ್ಲಿ (ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ) ನಿಲ್ದಾಣದ ಕೆಲಸವನ್ನು ಪೂರ್ಣಗೊಳಿಸಲು ಅಸ್ತಿತ್ವದಲ್ಲಿರುವ ಸಂಸ್ಥೆಯ ಸ್ಟಾರ್‌ವರ್ತ್ ಜೊತೆಗೆ ಹೊಸ ಗುತ್ತಿಗೆದಾರ ಗೋದ್ರೇಜ್ ಅನ್ನು ಸಹ ನೇಮಿಸಿಕೊಂಡಿದ್ದೇವೆ. ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ನಿಲ್ದಾಣದ ಕೆಲಸವನ್ನು ರಸ್ತೆಯ ಎರಡೂ ಬದಿಗಳಲ್ಲಿ ಏಕಕಾಲದಲ್ಲಿ ನಡೆಸಲಾಗುತ್ತಿದೆ ಮತ್ತು ಇಂಟೀರಿಯರ್ ಕೆಲಸವು ಮುಕ್ತಾಯದ ಹಂತದಲ್ಲಿದೆ" ಎಂದು ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಮೆಟ್ರೋ ಮುಖ್ಯಸ್ಥರ ಪ್ರಕಾರ, "ನಿಲ್ದಾಣದ ಮುಂಭಾಗ ಕಾಮಗಾರಿ ಪೂರ್ಣಗೊಳಿಸಲು ಸಂಚಾರ ಪೊಲೀಸರಿಂದ ಅನುಮತಿ ಪಡೆಯುವಲ್ಲಿ ವಿಳಂಬವಾಗಿದೆ. ಟಿನ್ ಫ್ಯಾಕ್ಟರಿ ಪ್ರದೇಶವು ಜನದಟ್ಟಣೆಯ ಪ್ರದೇಶವಾಗಿದೆ. ಆದರೆ, ಈ ವಾರದೊಳಗೆ ನಾವು ಪೊಲೀಸ್ ಅನುಮತಿಯನ್ನು ಪಡೆಯುವ ನಿರೀಕ್ಷೆಯಿದೆ. ಇದು ಹೆಚ್ಚಿನ ವಿಳಂಬವಿಲ್ಲದೆ ನಿಲ್ದಾಣದ ಕೆಲಸವನ್ನು ಪೂರ್ಣಗೊಳಿಸಲು ನಮಗೆ ಸಹಾಯ ಮಾಡುತ್ತದೆ" ಎಂದು ಮಾಹಿತಿ ನೀಡಿದ್ದಾರೆ.

2 ಕಿಮೀ ವಿಭಾಗವನ್ನು ಪೂರ್ಣಗೊಳಿಸುವುದರಿಂದ ಬೆಂಗಳೂರು ಮೆಟ್ರೋದ ದೈನಂದಿನ ಪ್ರಯಾಣಿಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚುತ್ತದೆ ಎಂದುನಿರೀಕ್ಷಿಸಲಾಗಿದೆ. ಬೈಯಪ್ಪನಹಳ್ಳಿ - ಕೆಆರ್ ಪುರ ವಿಭಾಗವು ವಿಶೇಷವಾಗಿ ವೈಟ್‌ಫೀಲ್ಡ್/ಐಟಿಪಿಬಿ ಟೆಕ್ ಕಾರಿಡಾರ್‌ಗೆ ಪ್ರಯಾಣಿಸುವ ಟೆಕ್ಕಿಗಳಿಗೆ ಪ್ರಯೋಜನವನ್ನು ನೀಡುತ್ತದೆ.

"ಈ ಮಿಸ್ಸಿಂಗ್ ಲಿಂಕ್ ಪೂರ್ಣಗೊಂಡ ನಂತರ ಬೆಂಗಳೂರು ಮೆಟ್ರೋದ ಪ್ರಸ್ತುತ 5.9 ರಿಂದ 6 ಲಕ್ಷ ಪ್ರಯಾಣಿಕರ ಸಂಖ್ಯೆ 6.7 ಲಕ್ಷಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಸ್ತುತ, ಕೆಆರ್ ಪುರ-ವೈಟ್‌ಫೀಲ್ಡ್ ವಿಭಾಗದ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 26,000-27,000 ಆಗಿದೆ. ಇದು ವಾರಾಂತ್ಯ ಮತ್ತು ರಜಾದಿನಗಳಲ್ಲಿ ಮುಖ್ಯವಾಗಿ ಶಾಪಿಂಗ್ ಮಾಲ್‌ಗಳಿಗೆ ಹೋಗುವವರಿಂದ ಸುಮಾರು 28,000 ಕ್ಕೆ ಹೆಚ್ಚಾಗುತ್ತದೆ" ಎಂದು ಅಂಜುಮ್ ಪರ್ವೇಜ್ ಹೇಳಿದ್ದಾರೆ.

ವೈಟ್‌ಫೀಲ್ಡ್ ಬೆಂಗಳೂರಿನ ಮೊದಲ ಟೆಕ್ ಕಾರಿಡಾರ್ ಆಗಿದ್ದು, ಮೆಟ್ರೋ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಕೆಆರ್ ಪುರ-ಬೈಯ್ಯಪ್ಪನಹಳ್ಳಿ ವಿಭಾಗ ಇನ್ನೂ ಸಂಪರ್ಕ ಹೊಂದಿಲ್ಲ. ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವಿನ ಸಂಪರ್ಕ ಕಳೆದುಕೊಂಡಿರುವುದರಿಂದ ನಗರದ ಇತರ ಭಾಗಗಳಲ್ಲಿ ಉಳಿದುಕೊಂಡು ವೈಟ್‌ಫೀಲ್ಡ್‌ಗೆ ಕೆಲಸ ಮಾಡಲು ಪ್ರಯಾಣಿಸುವವರಿಗೆ ಹೆಚ್ಚಿನ ಅನಾನುಕೂಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+