Namma Metro: ದೆಹಲಿ ಬಳಿಕ ಬೆಂಗಳೂರಿನ ಮೆಟ್ರೋನಲ್ಲಿ ಮದ್ಯ ಸಾಗಾಣೆಗೆ ಅವಕಾಶ? BMRCL ಹೇಳಿದ್ದೇನು?

ಬೆಂಗಳೂರು, ಜುಲೈ 03: ರಾಷ್ಟ್ರ ರಾಜಧಾನಿ ನವದೆಹಲಿ ಮೆಟ್ರೋ ರೈಲುಗಳಲ್ಲಿ ಅವಕಾಶ ನೀಡಿರುವಂತೆ, ರಾಜ್ಯ ರಾಜಧಾನಿ ಬೆಂಗಳೂರಿನ ಮೆಟ್ರೋ ರೈಲುಗಳಲ್ಲಿ ಸಹ ನಿರ್ದಿಷ್ಟ ಮಿತಿಯಲ್ಲಿ ಮದ್ಯ ಕೊಂಡೊಯ್ಯಲು ಅವಕಾಶ ಸಿಗಲಿದೆ. ಈ ಕುರಿತು ನಮ್ಮ ಮೆಟ್ರೋ ಆದಷ್ಟು ಶೀಘ್ರವೇ ನಿರ್ಧಾರ ಪ್ರಕಟಿಸುವ ಮೂಲಕ ಮದ್ಯಪ್ರಿಯರಿಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.

ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರು ಮದ್ಯದ ಬಾಟಲಿಗಳನ್ನು ಸಾಗಿಸಲು ಪ್ರಯಾಣಿಕರಿಗೆ ಅವಕಾಶ ನೀಡಿದೆ. ದೆಹಲಿಯಲ್ಲಿ ಪ್ರಯಾಣಿಕರು ಸೀಲ್ಡ್ ಮಾಡಿದ ಎರಡು ಮಧ್ಯದ ಬಾಟಲಿಗಳನ್ನು ಕೊಂಡೊಯ್ಯಲು/ಸಾಗಿಸಲು ಅವಕಾಶ ನೀಡಲಾಗಿದೆ.

Bengaluru Metro Rail Corporation Limited (BMRCL)

ಇದರ ಬೆನ್ನಲ್ಲೆ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಸಹ ಪ್ರಯಾಣಿಕರಿಗೆ ಈ ಹಿಂದೆ ನೀಡಿದಂತೆ ಮದ್ಯದ ಬಾಟಲಿ ಸಾಗಾಣೆಗೆ ಅವಕಾಶ ನೀಡುತ್ತದೆಯೇ ಎಂಬ ಚರ್ಚೆಗಳು ಹೆಚ್ಚಾಗಿವೆ. ಇದರ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು, ಈ ಬಗ್ಗೆ ನಮ್ಮ ಮೆಟ್ರೋ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದರು.

ಸಾಧಕ-ಬಾಧಕ ಬಗ್ಗೆ ನಮ್ಮ ಮೆಟ್ರೋ ಚರ್ಚೆ

ದೆಹಲಿ ಮೆಟ್ರೋ ಸಂಸ್ಥೆ ರೈಲುಗಳಲ್ಲಿ ಪ್ರಯಾಣಿಕರಿಗೆ ಎರಡು ಮದ್ಯದ ಸೀಲ್ಡ್ ಬಾಟಲಿಗಳನ್ನು ಸಾಗಿಸಲು ಅನುಮತಿ ನೀಡಿದೆ. ಆದರೆ ಮೆಟ್ರೋ ನಿಲ್ದಾಣದಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಿಲ್ಲ. ಈ ಬಗ್ಗೆ ನಾವು ಸಹ ಪರಿಶೀಲಿಸುತ್ತೇವೆ. ಮದ್ಯ ಸಾಗಿಸಲು ಅವಕಾಶ ಕೊಟ್ಟರೆ ಅದರಿಂದಾಗು ಸಾಧಕ-ಬಾಧಕಗಳ ಕುರಿತು ಚರ್ಚಿಸುತ್ತೇವೆ. ಅವಕಾಶ ನೀಡುವ ಸಾಧ್ಯತೆಗಳು ಇದೆಯೋ ಇಲ್ಲವೋ ಎಂದು ಮೊದಲು ಪರಿಶೀಲಿಸುತ್ತೇವೆ ಎಂದು ತಿಳಿಸಿದ್ದಾರೆ.

ದೆಹಲಿ ಮೆಟ್ರೋ ಸಂಸ್ಥೆ ಪ್ರಯಾಣಿಕರಿಗೆ ಒಂದಷ್ಟು ಷರತ್ತುಗಳನ್ನು ವಿಧಿಸಿ ಇಂತಿಷ್ಟು ಬಾಟಲಿ ಮದ್ಯೆ ಸಾಗಾಣೆ ಮಾಡಬಹುದೆಂದು ಅನುಮತಿ ನೀಡಿದೆ. ಅಲ್ಲಿ ಹಾಕಿರುವ ಷರತ್ತುಗಳು ಏನು, ಪ್ರಯಾಣಿಕರ ಪಾಲನೆ, ಷರತ್ತು ಉಲ್ಲಂಘನೆ ಸಾಧ್ಯತೆಗಳು ಇವೆಯಾ? ಎಂದೆಲ್ಲ ನಾವು ಸಹ ಒಮ್ಮೆ ಪರಿಶೀಲಿಸುತ್ತೆ. ಅದರ ಆಧಾರದಲ್ಲಿ ಅವಕಾಶ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಟೈಮ್ಸ್​ ಆಫ್ ಇಂಡಿಯಾ ಪ್ರತಿಕ್ರಿಯಿಸಿದರು.

Bengaluru Metro Rail Corporation Limited (BMRCL)

ಹಾಲಿ ಇರುವ ನಿಯಮದ ಪ್ರಕಾರ, ಬೆಂಗಳೂರಿನಲ್ಲಿ ಪ್ರಯಾಣಿಕರು ಮೆಟ್ರೋ ರೈಲುಗಳಲ್ಲಿ ಅಥವಾ ರೈಲು ನಿಲ್ದಾಣದ ಒಳಗೆ ಮದ್ಯದ ಬಾಟಲಿಗಳನ್ನು ಕೊಂಡೊಯ್ಯುವಂತಿಲ್ಲ. ಒಂದು ವೇಳೆ ಅವಕಾಶ ನೀಡಿದರೆ ಮದ್ಯ ಸೇವಿಸಿ ಸಹ ಪ್ರಯಾಣಿಕರಿಗೆ ತೊಂದರೆ ನೀಡುವ ಸಾಧ್ಯತೆ ಇದೆ. ಅಲ್ಲದೇ ಮದ್ಯಕ್ಕೆ ಬೇಗನೇ ಬೆಂಕಿ ಹೊತ್ತಿಕೊಳ್ಳುತ್ತದೆ. ಈ ಕಾರಣದಿಂದಲೇ ಹಿಂದೊಮ್ಮೆ ಮದ್ಯ ಸಾಗಾಣೆಗೆ ನೀಡಿದ್ದ ಅವಕಾಶವನ್ನು ನಮ್ಮ ಮೆಟ್ರೋ ನಿಷೇಧಿಸಿತು. ಅದು ಇಂದಿವರೆಗೆ ನಡೆದುಕೊಂಡು ಬರುತ್ತಿದೆ.

ಬೆಂಗಳೂರು: ಹಿಂದಿದ್ದ ಮದ್ಯ ಸಾಗಾಣೆ ಅವಕಾಶ ರದ್ದಾಗಿದ್ದು ಏಕೆ?

ಬೆಂಗಳೂರಿನಲ್ಲಿ ಮೆಟ್ರೋ ಆರಂಭವಾಗಿ ಒಂದು ದಶಕ ಕಳೆದಿದೆ. ಅಂದಿನಿಂದಲೂ ಸಾರಿಗೆ ನೀಡುತ್ತಿರುವ ನಮ್ಮ ಮೆಟ್ರೋ ಈ ಹಿಂದೆ ಪ್ರಯಾಣಿಕರಿಗೆ ಮದ್ಯ ಬಾಟಲಿ ಸಾಗಾಣೆಗೆ/ಕೊಂಡೊಯ್ಯಲು ಅನುಮತಿ ನೀಡಿತ್ತು. ಆದರೆ ಮೆಟ್ರೋ ನಿಲ್ದಾಣದ ವಾಶ್ ರೂಮಿನಲ್ಲಿ ಪ್ರಯಾಣಿಕರೊಬ್ಬರು ಮದ್ಯ ಸೇವಿಸುತ್ತಿರುವುದು ಕಂಡು ಬಂತು.

ಹೀಗೆ ಮದ್ಯ ಸೇವಿಸಿ ಇತರರಿಗೆ ತೊಂದರೆ ಮಾಡುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೇ ಪ್ರಯಾಣಿಕರ ಹಿತ ದೃಷ್ಟಿಯಿಂದ ಬಿಎಂಆರ್‌ಸಿಎಲ್ 2019 ರಲ್ಲಿ ಮದ್ಯ ಸಾಗಾಣೆ ಅವಕಾಶ ಹಿಂಪಡೆದಿತ್ತು. ದೆಹಲಿಯಲ್ಲಿ ಅವಕಾಶ ನೀಡಿದ ಬಳಿಕ ಮತ್ತೆ ಬೆಂಗಳೂರಿನಲ್ಲು ಅವಕಾಶ ನೀಡುವ ಕುರಿತು ಚರ್ಚೆಗಳು ಆಗುತ್ತಿವೆ ಎಂದು ತಿಳಿದು ಬಂದಿದೆ. ಕೇವಲ ನಮ್ಮ ಮೆಟ್ರೋ ರೈಲಿ ನಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕೂಡ ಮದ್ಯದ ಬಾಟಲಿಗಳನ್ನು ಸಾಗಿಸುವಂತಿಲ್ಲ ಎಂಬ ನಿಯಮವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+