Namma Metro Skywalk: ಈ 2 ಮಾರ್ಗದ ನಿಲ್ದಾಣಗಳ ಮಧ್ಯೆ 250 ಮೀಟರ್ ಸ್ಕೈವಾಕ್ ನಿರ್ಮಾಣ ಯೋಜನೆ
ಬೆಂಗಳೂರು, ಮಾರ್ಚ್ 18: ಬೆಂಗಳೂರು 'ನಮ್ಮ ಮೆಟ್ರೋ' ರೈಲು ನಿಗಮವು (BMRCL) ಪ್ರಮುಖ ಜಂಕ್ಷನ್‌ನಲ್ಲಿ 250 ಮೀಟರ್ ಸ್ಕೈವಾಕ್ ಅನ್ನು ನಿರ್ಮಿಸುವ ಯೋಜನೆಗೆ ಕೈಹಾಕಿದೆ ಎಂದು 'ಟೈಮ್ಸ್ ನೌ' ವರದಿ ಮಾಡಿದೆ.
BMRCL ಕೈಗೊಂಡ ಈ ಮೂಲಸೌಕರ್ಯ ಯೋಜನೆಯಿಂದ ಹಳದಿ ಮಾರ್ಗದ ಮೆಟ್ರೋ ನಿಲ್ದಾಣ (ಆರ್‌ವಿ ರಸ್ತೆ - ಬೊಮ್ಮಸಂದ್ರ) ಮತ್ತು ನೀಲಿ ಮಾರ್ಗದ ನಿಲ್ದಾಣ (ಕೆಆರ್ ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಮಧ್ಯೆ ಸಂಪರ್ಕ ಸೇವೆ ಕಲ್ಪಿಸಲಿದೆ.

ಇದು ನಮ್ಮ ಮೆಟ್ರೋದಲ್ಲಿ ವ್ಯಾಪ್ತಿಯಲ್ಲಿ ಇಂತದ್ದೊಂದು ಟ್ರಾವೆಲೇಟರ್ ಸ್ಕೈವಾಕ್ ಸ್ಥಾಪನೆಯ ಮೊದಲ ಯೋಜನೆ ಇದಾಗಿದೆ. ಬೆಂಗಳೂರು ಮೆಟ್ರೋ ಜಾಲದ ಎರಡು ಪ್ರಮುಖ ಮಾರ್ಗಗಳ ಮಧ್ಯೆ ಸಂಪರ್ಕವನ್ನು ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಸಾರ್ವಜನಿಕ ಚಾಲನೆ ಸುಲಭ
ಈ ಯೋಜನೆಯಿಂದ ಎರಡು ಮೆಟ್ರೋ ಮಾರ್ಗಗಳ ಇಂಟರ್‌ಚೇಂಜ್ ಮೆಟ್ರೊ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಿದೆ. ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಮೆಟ್ರೋ ಜಾಲದಲ್ಲಿ ಎರಡು ಪ್ರಮುಖ ನಿಲ್ದಾಣಗಳ ಮಧ್ಯೆ ಈ ಸ್ಕೈವಾಕ್ ತ್ವರಿತ ಮತ್ತು ಪರಿಣಾಮಕಾರಿ ಚಲನೆ ಸುಗಮಗೊಳಿಸುತ್ತದೆ ಎಂದು ಬಿಎಂಆರ್‌ಸಿಎಲ್ ವಿಶ್ವಾಸ ವ್ಯಕ್ತಪಡಿಸಿದೆ.
ಟ್ರಾವೆಲೇಟರ್‌ನ ಸ್ಕೈವಾಕ್ ಪರಿಚಯವು ನಮ್ಮ ಮೆಟ್ರೋಗೆ ಮಹತ್ವದ ಮೈಲಿಗಲ್ಲು ಯೋಜನೆಗಳಲ್ಲಿ ಒಂದಾಗಿದೆ. ಬೆಂಗಳೂರಿನ ನಗರದ ಮೆಟ್ರೋ ಚೌಕಟ್ಟಿನೊಳಗೆ ಅಂತಹ ವ್ಯವಸ್ಥೆ ಮೊದಲ ಬಾರಿಗೆ ಅನುಷ್ಠಾನಗೊಳಿಸಲಾಗುತ್ತಿದೆ.

ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್
ವರ್ಷಗಳಿಂದ ಪ್ರಯಾಣಿಕರಿಗೆ ಕುಖ್ಯಾತವಾಗಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಬಾಧಿಸುವ ದೀರ್ಘಕಾಲದ ಟ್ರಾಫಿಕ್ ತೊಂದರೆಗಳನ್ನು ಪರಿಹರಿಸಲು BMRCL ನಿರಂತರ ಪ್ರಯತ್ನಗಳ ಭಾಗವಾಗಿ ಮೇಲ್ಸೇತುವೆ ನಿರ್ಮಿಸುತ್ತಿದೆ.
ಟ್ರಾಫಿಕ್ ಹೆಚ್ಚಿರುವ ಪ್ರಮುಖ ಜಂಕ್ಷನ್‌ನಲ್ಲಿ ನಿರ್ಮಿಸಲಾಗುತ್ತಿರುವ ಐದು ರ‍್ಯಾಂಪ್‌ಗಳ ಪೈಕಿ ಮೂರು ಮುಕ್ತಾಯದ ಹಂತದಲ್ಲಿವೆ.
ಇದೇ ವರ್ಷ ಮೇ ಅಂತ್ಯದ ವೇಳೆಗೆ ಪ್ರದೇಶದ ಜನದಟ್ಟಣೆಯನ್ನು ಕಡಿಮೆ ಮಾಡಲು ಈ ಫ್ಲೈಓವರ್ ಕಾರ್ಯ ಮುಗಿಯಲಿದೆ.
ಇತ್ತೀಚೆಗೆ ಬಿಎಂಆರ್‌ಸಿಎಲ್ ರ ್ಯಾಂಪ್ ನಿರ್ಮಾಣ ಪ್ರಯತ್ನದ ಭಾಗವಾಗಿ 50 ಗಂಟೆಗಳ ತಡೆರಹಿತ ಕಾಂಕ್ರೀಟ್ ಕೆಲಸ ಮಾಡಿರುವುದು ಸುದ್ದಿಯಾಗಿತ್ತು.
ಟ್ರಾಫಿಕ್ ಕಿರಿಕಿರಿ ಶೀಘ್ರವೇ ಅಂತ್ಯ
ಸದ್ಯ ಮೇಲ್ಸೇತುವೆ ಮುಕ್ತಾಯದ ಹಂತದಲ್ಲಿದೆ. ಎಲ್ಲವು ಅಂದುಕೊಂಡಂತೆ ಆದರೆ ಮುಂದಿನ ದಿನಗಳಲ್ಲಿ ಜಯನಗರ-ಬಿಟಿಎಂ ಲೇಔಟ್‌ನಿಂದ ಎಚ್‌ಎಸ್‌ಆರ್ ಲೇಔಟ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಕಡೆಗೆ ಪ್ರಯಾಣಿಸುವ ವಾಹನಗಳಿಗೆ ಸಂಚಾರ ಅಡತಡೆ, ದಟ್ಟಣೆ ಇಲ್ಲದೇ ಮುಕ್ತ ಸಂಚಾರಕ್ಕೆ ಅನುಕೂಲ ಕಲ್ಪಿಸಲಿದೆ.
ದೇಶದ ಅತಿ ಎತ್ತರದ ಸ್ಕೈ ಡೆಕ್ ನಿರ್ಮಾಣ
ಕರ್ನಾಟಕ ರಾಜಧಾನಿಯಲ್ಲಿ ದೇಶದ ಅತೀ ಎತ್ತರದ ಸ್ಕೈಡೆಕ್ ನಿರ್ಮಿಸುವ ಯೋಜನೆ ಸರ್ಕಾರಕ್ಕೆ ಇದೆ. 250 ಮೀಟರ್ ಉದ್ದದ ಮಹತ್ವಾಕಾಂಕ್ಷೆಯ ಸ್ಕೈ ಡೆಕ್‌ನ ನಿರ್ಮಾಣಕ್ಕೆ ಎಷ್ಟು ವೆಚ್ಚ ತಗುಲಬಹುದೆಂದು ಅಂದಾಜಿಸಲಾಗುತ್ತಿದೆ. ಈ ಸಂಬಂದ ಯೋಜನಾ ವರದಿಗಳಿಗೆ (ಡಿಪಿಆರ್) ಸಿದ್ಧಪಡಿಸಿ ಟೆಂಡರ್ ಕರೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿದ್ಧತೆ ನಡೆದಿದೆ.
ಈಸ್ಕೈಡೆಕ್ ಅನ್ನು ನಿರ್ಮಿಸಲು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಮ ಮತ್ತು ಯಶವಂತಪುರದ ಸೋಪ್ ಫ್ಯಾಕ್ಟರಿಗಾಗಿ ಎರಡು ಜಾಗ ಗುರುತಿಸಲಾಗಿದೆ. ಆದರೆ ಸ್ಥಳ ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ.
ಇಂತಹ ಸ್ಕೈಡೆಕ್ ಜಪಾನ್ ದೇಶದಲ್ಲಿದೆ. ಇದರಿಂದ ಪ್ರವಾಸಿಗರನ್ನು ಸೆಳೆಯಲು, ಇಲ್ಲಿನ ಅಭಿವೃದ್ಧಿಗೆ ಸಹಾಯವಾಗಲಿದೆ. ಭವಿಷ್ಯದಲ್ಲಿ ಬೆಂಗಳೂರನ್ನು ಮುಗಿಲೆತ್ತದ ಸ್ಕೈಡೆಕ್ ಮೇಲಿಂದ ಕಣ್ತುಂಬಿಕೊಳ್ಳಬಹುದಾಗಿದೆ.












Click it and Unblock the Notifications