Namma Metro: 15 ವರ್ಷದ ಬಳಿಕ ಮೆಟ್ರೋಗಳಿಗೆ ಮೊದಲ ಬಿಗ್ ಸರ್ವಿಸಿಂಗ್; ಹಸಿರು-ನೇರಳೆ 57ರೈಲುಗಳ ನವೀಕರಣ

ಬೆಂಗಳೂರು: ಬೆಂಗಳೂರಿಗರ ಸಾರಿಗೆ ಜೀವನಾಡಿಯಾಗಿರುವ ' ನಮ್ಮ ಮೆಟ್ರೋ' ಇದೇ ಮೊದಲ ಬಾರಿಗೆ ಎಲ್ಲ 'ರೈಲುಗಳ ಮಧ್ಯಾವಧಿ ಸಮಗ್ರ ನವೀಕರಣ' ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಸಜ್ಜಾಗುತ್ತಿದೆ. ಹಾಲಿ ಹಳೆಯ ರೈಲುಗಳಿಂದ ಪದೇ ಪದೇ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವ ಕಾರಣಕ್ಕೆ ಆ ರೈಲುಗಳ ಲೋಪದೋಷ ಪರಿಹರಿಸಲು BMRCL ಮುಂದಾಗಿದೆ. 'ನೇರಳೆ ಮಾರ್ಗ ಮತ್ತು ಹಸಿರು ಮಾರ್ಗ'ದ ಎಲ್ಲ 57 ರೈಲುಗಳು ನವೀಕರಣಗೊಳ್ಳಲಿವೆ. ಹಾಗಾದರೆ ಮೆಟ್ರೋ ಸಂಚಾರ ಇರಲ್ವಾ? ಪ್ರಯಾಣಿಕರು ಮತ್ತೆ ಸಂಚಾರ ಅಡಚರಣೆ ಎದುರಿಸಬೇಕಾ? ಎಂಬ ನಿಮ್ಮ ಗೊಂದಲಗಳಿಗೆ, ಭವಿಷ್ಯದಲ್ಲಿ ತಡೆ ರಹಿತ ಮೆಟ್ರೋ ಸೇವೆ ಕುರಿತು ಮಹತ್ವದ ಅಪ್ಡೇಟ್ ಇಲ್ಲಿದೆ

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 2011ರಲ್ಲಿ ನೇರಳೆ ಮಾರ್ಗದೊಂದಿಗೆ ತನ್ನ ಸೇವೆ ಆರಂಭಿಸಿತು. ನಂತರ ಈ ಮಾರ್ಗವು ವಿಸ್ತರಣೆ ಆಗುವುದರೊಂದಿಗೆ ಹಸಿರು ಮಾರ್ಗವು ನಿರ್ಮಾಣವಾಯಿತು. ಅಲ್ಲಿಂದ ಈ ಎರಡು ಮಾರ್ಗದಲ್ಲಿ ಇವತ್ತಿನವರೆಗೆ 57 ಮೆಟ್ರೋಗಳು ದೈನಂದಿನ ಸೇವೆ ನೀಡುತ್ತಿವೆ. ಒಟ್ಟಾರೆ 15 ವರ್ಷಗಳಲ್ಲಿ ಲಕ್ಷಾಂತರ ಕಿಲೋ ಮೀಟರ್ ಕ್ರಮಿಸಿವೆ. ಇತ್ತೀಚೆಗೆ ರೈಲುಗಳಲ್ಲಿ ಸಣ್ಣ ಸಣ್ಣ ಲೋಪದಿಂದ ಸೇವಾ ವ್ಯತ್ಯಯವಾಗುತ್ತಿದೆ. ಈ ಹಿನ್ನೆಲೆ ಈ ಎಲ್ಲ ರೈಲುಗಳ ರೈಲುಗಳ ವಿವರವಾದ ತಾಂತ್ರಿಕ ಪರಿಶೀಲನೆ ಮತ್ತು ಬಿಡಿಭಾಗಗಳ ಬದಲಾವಣೆಯೊಂದಿಗೆ ನಮ್ಮ ಮೆಟ್ರೋ ತನ್ನ ಮೊದಲ ಪ್ರಮುಖ 'ಮಧ್ಯಾವಧಿ ನವೀಕರಣ'ಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Namma Metro

ಬರಲಿವೆ 21 ಹೊಸ ರೈಲುಗಳು

ಹೊಸ ಸಿಆರ್‌ಆರ್‌ಸಿ-ಟಿಟಾಗಡ್ ರೈಲುಗಳು ಹಂತ ಹಂತವಾಗಿ ಬೆಂಗಳೂರಿಗೆ ಆಗಮಿಸುತ್ತಿವೆ. ಈಗಾಗಲೇ ಹಸಿರು ಮಾರ್ಗಕ್ಕೆ ಬಂದ 4 ರೈಲುಗಳ ಪೈಕಿ ಒಂದು ಸೇವೆಗೆ ಸೇರ್ಪಡೆಯಾಗಿದ್ದು, ಉಳಿದವುಗಳ ಸೇರ್ಪಡೆ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ರೈಲು ಸೇವೆಯಲ್ಲಿ ಮತ್ತಷ್ಟು ವಿಶ್ವಾಸಾರ್ಹತೆ ಮೂಡುತ್ತಿದೆ.

10 ಲಕ್ಷ ಕಿ.ಮೀ ಕ್ರಮಿಸಿದ ಮೆಟ್ರೋಗಳು

2011ರಿಂದ ಈವರೆಗೆ ಸೇವೆ ನೀಡಿದ 57 ರೈಲುಗಳ ಪೈಕಿ ಹಲವು ರೈಲುಗಳು 10 ಲಕ್ಷ ಕಿ.ಮೀ ಗಿಂತ ಹೆಚ್ಚು ಸಂಚರಿಸಿವೆ. ಅವುಗಳಿಗೆ ತಾಂತ್ರಿಕ ತಪಾಸಣೆ ಅಗತ್ಯವಿದೆ. ಈ ಹಿನ್ನೆಲೆ ಉದ್ದೇಶಿದ ನವೀಕರಣ ( ನಿರ್ವಹಣೆ) ಕಾರ್ಯವು ಮೊದಲಿಗೆ 'ನೇರಳೆ ಮತ್ತು ಹಸಿರು' ಮಾರ್ಗದ ರೈಲುಗಳಿಗೆ ಮಾತ್ರವೇ ಅನ್ವಯಿಸುತ್ತದೆ. ಯಾಂತ್ರಿಕ, ವಿದ್ಯುತ್ ಮತ್ತು ಸುರಕ್ಷತಾ ವ್ಯವಸ್ಥೆಗಳ ತಪಾಸಣೆ, ಅಗತ್ಯವಿದ್ದಲ್ಲಿ ದುರಸ್ತಿ, ರೈಲಿನ ಇಂಜಿನ್‌ನಲ್ಲಿ ಬಿಡಿಭಾಗಗಳು ಸವೆದು ಹಾಳಾಗಿದ್ದಲ್ಲಿ ಬದಲಾವಣೆಯಂತಹ ಕಾರ್ಯಗಳು, ಪರಿಶೀಲನೆ ಸೇರಿ BMRCL ನಿಂದ 'ಮೊದಲ ಪ್ರಮುಖ ಮಧ್ಯಾವಧಿ ಸಮಗ್ರ ನವೀಕರಣ' ಶೀಘ್ರದಲ್ಲೇ ಆರಂಭವಾಗಲಿದೆ. ಯಾವತ್ತಿನಿಂದ ಈ ಕಾರ್ಯ ಆರಂಭಗೊಳ್ಳಲಿದೆ ಎಂಬುದು ಸಂಸ್ಥೆಯಿಂದ ತಿಳಿಯಬೇಕಿದೆ.

ನವೀಕರಣ ವೇಳೆ ಸಂಚಾರಕ್ಕೆ ತೊಂದರೆ ಆಗುತ್ತಾ?

ಚೀನಾದಿಂದ ಬರುವ 21 ಹೊಸ ರೈಲುಗಳು ಹಸಿರು ಮಾರ್ಗದೊಂದಿಗೆ ಹಂತ ಹಂತವಾಗಿ ಸೇರ್ಪಡೆಗೊಳ್ಳುತ್ತಾ ಹೋದಂತೆ ಹಳೇಯ ರೈಲುಗಳನ್ನು ಹಂತ ಹಂತವಾಗಿ ಕಾರ್ಯಾಚರಣೆಯಿಂದ ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗುತ್ತದೆ. ಹೊಸ ರೋಲಿಂಗ್ ಸ್ಟಾಕ್ ಆಗಮನವು ಹಾಲಿ ರೈಲುಗಳ ಜಾಗ ತುಂಬಲಿವೆ. ಇದರಿಂದ ದೈನಂದಿನ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಪ್ಲ್ಯಾನ್ ಮಾಡಿದ್ದಾರೆ.

ಒಂದು ರೈಲಿನ ಸಮಗ್ರ ನವೀಕರಣಕ್ಕೆ ಬೇಕು 15 ದಿನ?

ದೈನಂದಿನ ಸೇವೆಗೆ ಮೇಲೆ ಪರಿಣಾಮವಾಗದಂತೆ 'ಪ್ರತಿಯೊಂದು ರೈಲಿನ ವಿವರವಾದ ಪರಿಶೀಲನೆ ನಡೆಸಿ, ಬಿಡಿಭಾಗಗಳ ಸ್ಥಿತಿಯನ್ನು ಅವಲಂಬಿಸಿ ದುರಸ್ತಿ ಅಥವಾ ಬದಲಾವಣೆ ಮಾಡಲಾಗುವುದು. ಟ್ರಾಕ್ಷನ್ ಮೋಟಾರುಗಳು ಮತ್ತು ಚಾಲನಾ ವ್ಯವಸ್ಥೆಗಳು, ವಿದ್ಯುತ್ ಉಪಕರಣಗಳು, ಕೇಬಲ್ ಗಳು ಮತ್ತು ಬ್ಯಾಟರಿಗಳು, ಚಕ್ರಗಳು, ಆಕ್ಸೆಲ್‌ಗಳು ಮತ್ತು ಬ್ರೇಕಿಂಗ್ ವ್ಯವಸ್ಥೆಗಳು, ಬಾಗಿಲುಗಳು ಮತ್ತು ಪ್ರಯಾಣಿಕರ ಸುರಕ್ಷತಾ ವ್ಯವಸ್ಥೆಗಳು.

ಹವಾನಿಯಂತ್ರಣ ಮತ್ತು ವಾತಾಯನ ಘಟಕಗಳು, ಸಿಗ್ನಲಿಂಗ್, ನಿಯಂತ್ರಣ ಮತ್ತು ರೈಲಿನಲ್ಲಿರುವ ಎಲೆಕ್ಟ್ರಾನಿಕ್ ವ್ಯವಸ್ಥೆಗಳು, ಪ್ರಯಾಣಿಕರ ಆಸನಗಳು, ಒಳಾಂಗಣ ಮತ್ತು ಇತರ ಬೋಗಿ ಉಪಕರಣಗಳು, ಪ್ರಮುಖ ರೈಲು ಸುರಕ್ಷತಾ ವ್ಯವಸ್ಥೆಗಳು' ಈ ಕಾರ್ಯಕ್ರಮದಲ್ಲಿ ಸೇರಿವೆ. ಇವೆಲ್ಲ ಮುಗಿಯಲು 15 ದಿನ ಬೇಕಾಗುತ್ತದೆ ಎಂದು ಬಿಎಂಆರ್ ಸಿಎಲ್ ಅಂದಾಜಿಸಿದೆ. ಒಂದು ಬಾರಿಗೆ ಎಷ್ಟು ರೈಲುಗಳ ನವೀಕರಣ ಆರಂಭಿಸಿದರೂ ಎರಡು ವಾರಗಳ ಬಳಿಕ ಅವುಗಳು ಸೇವೆಗೆ ಮರಳುವ ನಿರೀಕ್ಷೆ ಇದೆ.

ನವೀಕೃತಗೊಂಡ ರೈಲುಗಳು ಮತ್ತು ಹೊಸ ರೈಲುಗಳು ಸೇವೆ ಸಂಪೂರ್ಣವಾಗಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಆರಂಭವಾಗುತ್ತಿದ್ದಂತೆ ಮೆಟ್ರೋ ಸೇವೆ ದಕ್ಷತೆ ಹೆಚ್ಚಾಗಲಿದೆ. ತಡೆರಹಿತ ಸೇವೆ ಖಚಿತವಾಗಲಿದೆ. ಇನ್ನೂ ನವೀಕರಣ ವೇಳೆ ಹಸಿರು ಮಾರ್ಗದ ರೈಲುಗಳು ನೇರಳೆ ಮಾರ್ಗಕ್ಕೆ ವರ್ಗಾಹಿಸುವ ಸಾಧ್ಯತೆ ಇದೆ. ಒಟ್ಟಾರೆ ಈ ಕಾರ್ಯಕ್ರಮ ಹಂತ ಹಂತವಾಗಿ, ನಿರಂತರವಾಗಿ ನಡೆಯಲಿದೆ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+