Bengaluru Metro Green Line: ಪ್ರಯಾಣಿಕರಿಗೆ ಗುಡ್‌ನ್ಯೂಸ್! ಹಸಿರು ಮಾರ್ಗಕ್ಕೆ ಹೊಸ DTG ರೈಲು ಸೇರ್ಪಡೆ
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿನ ಮೆಟ್ರೋ ಜಾಲ ವಿಸ್ತರಣೆ ಆಗುತ್ತಿದ್ದಂತೆ ಜನ ದಟ್ಟಣೆ ಸಹ ಹೆಚ್ಚಾಗುತ್ತಿದೆ. ಈ ಸಂಬಂಧ ಹಾಲಿ ಹಸಿರು ಮಾರ್ಗ ಮತ್ತು ನೇರಳೆ ಮಾರ್ಗದಲ್ಲಿ ಟ್ರಾಫಿಕ್ ನಿಯಂತ್ರಿಸಿ, ಜನರಿಗೆ ಹೆಚ್ಚುವರಿ ರೈಲು ಒದಗಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಡಿಟಿಜಿ ಪ್ರೊಟೋ ಟೈಪ್ ಮಾದರಿ ರೈಲನ್ನು ಯಶಸ್ವಿಯಾಗಿ ಸೇರ್ಪಡೆ ಮಾಡಿದೆ.
ಹೌದು, ಮಾದವರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವಿನ 33 ಕಿಮೀ ಹಸಿರು ಮಾರ್ಗದಲ್ಲಿ ಉದ್ದೇಶಿದ 21 ಹೊಸ ರೈಲುಗಳ ಪೂರೈಕೆ ಪ್ರಗತಿಯಲ್ಲಿದೆ. ಈಗಾಗಲೇ ಮೂರು ರೈಲುಗಳ ಬೆಂಗಳೂರಿಗೆ ಬಂದಿದ್ದು, ಸದ್ಯ ಅದರಲ್ಲಿ ಒಂದು ಡಿಸ್ಟೆಸ್ ಟು ಗೋ (ಡಿಟಿಜಿ) ರೈಲನ್ನು ಅಂತಿಮ ಅನುಮೋದನೆ, ರೈಲ್ವೆ ಮಂಡಳಿ ಒಪ್ಪಿಗೆ ಬಳಿಕ ಸೇರ್ಪಡೆಗೊಳಿಸಲಾಗಿದೆ.

ಮೂರು ಡಿಟಿಜಿ ರೈಲುಗಳು ತಿತಾಘರ್-ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (CRRC) ರೋಲಿಂಗ್ ಸ್ಟಾಕ್ ಒಪ್ಪಂದದಡಿಯಲ್ಲಿ ತಯಾರಿಸಲಾಗಿದೆ. 06 ಬೋಗಿಗಳ ಒಂದು ರೈಲು ಹಸಿರು ಮಾರ್ಗಕ್ಕೆ ಸೇರಿದ್ದು, ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಿದೆ. ಇದರಿಂದ ಅಸ್ತಿತ್ವದಲ್ಲಿರುವ ರೈಲುಗಳೊಂದಿಗೆ ಹೊಸ ರೈಲು ಕಳೆದ ಸೋಮವಾರ ಸೇರಿದಂತಾಗಿದೆ. ಶೀಘ್ರವೇ ಎರಡು ರೈಲುಗಳನ್ನು ಸೇರಿಸುವ ನಿರೀಕ್ಷೆ ಇದೆ. ಅವುಗಳ ಪರೀಕ್ಷೆ, ಸಿಗ್ನಲಿಂಗ್ ಟೆಸ್ಟ್ ಸೇರಿದಂತೆ ಅನೇಕ ಪರೀಕ್ಷೆಗಳು ನಡೆಯುತ್ತಿವೆ. ಅವುಗಳು ಪೂರ್ಣಗೊಳ್ಳುತ್ತಿದ್ದಂತೆ ಅವೆರಡು ರೈಲು ಹಸಿರು ಮಾರ್ಗದಲ್ಲಿ ಅಧಿಕೃತ ಸೇವೆಗೆ ಸಜ್ಜಾಗಲಿವೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ದಟ್ಟಣೆ ನಿವಾರಣೆ, ಕಾಯುವಿಕೆ ತಪ್ಪಲಿದೆ
ನಮ್ಮ ಮೆಟ್ರೋ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದಲ್ಲಿ ಒಟ್ಟು ಸುಮಾರು 55 ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ಹಳದಿ ಮಾರ್ಗದ ಪ್ರಯಾಣಿಕರು ಸೇರಿ ಒಟ್ಟು 10 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಇದರಿಂದ ಪ್ರಮುಖ ನೇರಳೆ, ಹಸಿರು ಮಾರ್ಗದಲ್ಲಿ ದಟ್ಟಣೆ ಹೆಚ್ಚಾಗಿದೆ. ಹಾಲಿ ರೈಲುಗಳ ಮೇಲೆ ಒತ್ತಡ, ಹೆಚ್ಚು ಸಮಯ ನಿಲ್ದಾಣಗಳಲ್ಲಿ ಪ್ರಯಾಣಿಕರು ಕಾಯುತ್ತಿದ್ದಾರೆ. ಹೊಸ ರೈಲುಗಳ ಸೇರ್ಪಡೆಯಿಂದ ಪ್ರಯಾಣಿಕರ ಕಾಯುವಿಕೆ ಅಂತ್ಯಗೊಳ್ಳಲಿದೆ. ರೈಲುಗಳು ಹೆಚ್ಚಿದಂತೆಲ್ಲ ಸಂಚಾರ ಸುಗಮವಾಗುತ್ತದೆ.
ಹಂತ ಹಂತವಾಗಿ 21 ರೈಲು ಪೂರೈಕೆ
ಈ ಪ್ರೊಟೋಟೈಪ್ ಮಾದರಿಯ ಡಿಟಿಜಿ ರೈಲುಗಳನ್ನು ಚೀನಾದ ಸಿಆರ್‌ಆರ್‌ಸಿ ನಾಂಜಿಂಗ್ ಪುಝೆನ್ ಲಿಮಿಟೆಡ್ ಕಂಪನಿಯಿಂದ ತಯಾರಿಸಲಾಗುತ್ತದೆ. ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗೆ ಹೊಂದಿಕೆಯಾಗುವ 21 ರೈಲುಗಳನ್ನು ಬೆಂಗಳೂರಿಗೆ ಒದಗಿಸಲಿದೆ. ಇನ್ನುಳಿದ ರೈಲುಗಳನ್ನು ಕೋಲ್ಕೊತ್ತಾ ಮೂಲದ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ತಯಾರಿಸಲಾಗುತ್ತದೆ. ಹಸಿರು ಮಾರ್ಗದೊಂದಿಗೆ ಭವಿಷ್ಯದಲ್ಲಿ ನೇರಳೆ ಮಾರ್ಗಕ್ಕೂ ಹೊಸದಾಗಿ ರೈಲುಗಳು ಬರಲಿವೆ. ಸದ್ಯ ಹಳದಿ ಮಾರ್ಗದಲ್ಲಿ ಹತ್ತು ರೈಲುಗಳು ಸಂಚಾರ ಮಾಡುತ್ತಿವೆ. ಈ ಮಾರ್ಗದಲ್ಲಿ 15 ರೈಲುಗಳ ಸಂಚಾರ ಮಾಡಲು ಬಿಎಂಆರ್ ಸಿ ಎಲ್ ಮುಂದಾಗಿದೆ.


Click it and Unblock the Notifications
