Namma Metro Blue Line update: ಚುರುಕಾದ ನೀಲಿ ಮಾರ್ಗದ ಕಾಮಗಾರಿ, 31ಮೀ. ಗಿರ್ಡರ್ ನಿರ್ಮಾಣ
ಬೆಂಗಳೂರು, ನವೆಂಬರ್ 15: ಬೆಂಗಳೂರು ನಮ್ಮ ಮೆಟ್ರೋ 55 ಕಿಲೋ ಮೀಟರ್ ಉದ್ದದ ನೀಲಿ ಮಾರ್ಗದ (namma metro blue line) ನಿರ್ಮಾಣ ಕಾಮಗಾರಿ ಚುರುಕುಗೊಂಡಿದೆ. ವಿವಿಧ ಹಂತದ ಕೆಲಸಗಳು ಪೂರ್ಣಗೊಂಡಿವೆ. ಈ ಮಾರ್ಗವು ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಸಂಪರ್ಕ ಕಲ್ಪಿಸುತ್ತದೆ.
ಲಕ್ಷಾಂತರ ಪ್ರಯಾಣಿಕರಿಗೆ ನೆರವಾಗಲಿರುವ ನಮ್ಮ ಮೆಟ್ರೋ ಹೊಸ ಮಾರ್ಗಗಳ ಪೈಕಿ ಈ ನೀಲಿ ಮಾರ್ಗವು ಪ್ರಮುಖವಾದದ್ದು. ನಮ್ಮ ಮೆಟ್ರೋ ಹಂತ 2A ಯೋಜನೆಯಡಿ ಈ ಮಾರ್ಗದಲ್ಲಿ ಭಾರತದ ಪ್ರಮುಖ ನಿರ್ಮಾಣ ಕಂಪನಿಯಾದ ಅಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂ (ಹೊರ ವರ್ತುಲ ರಸ್ತೆ ಮಾರ್ಗ) 31 ಮೀಟರ್ ಸಂಯೋಜಿತ ಗಿರ್ಡರ್ ನಿರ್ಮಾಣ ಪೂರ್ಣಗೊಳಿಸಿದೆ.

ಕಳೆದ ಅಕ್ಟೋಬರ್ 23ರಂದು ನಗರದ ಎಚ್‌ಎಸ್ಆರ್ ಬಡಾವಣೆಯ ಹೊರ ವರ್ತುಲ ರಸ್ತೆಯಲ್ಲಿ (ORR) ಗಿರ್ಡರ್ ಅಳವಡಿಕೆ ಕೆಲಸ ನಡೆಯಿತು. ಸಂಯೋಜಿತ ಗಿರ್ಡರ್‌ಗಳು ವಿಭಿನ್ನ ವಸ್ತುಗಳಿಂದ ಸ್ಥಾಪಿಸಲಾಗಿದೆ. ಹೀಗಾಗಿ ಇದೊಂದು ವಿಭಿನ್ನ ನಿರ್ಮಾಣವಾಗಿದೆ.
ಸಂಕೀರ್ಣ ಗಿರ್ಡರ್ ನಿರ್ಮಾಣ ಕಾರ್ಯಾಚರಣೆ
ಈ ಗಿರ್ಡರ್ ಅನ್ನು ಉಕ್ಕು ಮತ್ತು ಕಾಂಕ್ರೀಟ್ ನಿಂದ ನಿರ್ಮಿಸಲಾಗಿದೆ. ಉಕ್ಕು ಶಕ್ತಿ ಮತ್ತು ಬಿಗಿತವನ್ನು ಒದಗಿಸುತ್ತದೆ, ಅದಕ್ಕೆ ಪೂರಕವಾಗಿ ಹಾಕಲಾಗಿರುವ ಕಾಂಕ್ರೀಟ್ ಹೆಚ್ಚಿನ ಬಾಳಿಕೆಯನ್ನು ನೀಡುತ್ತದೆ. ಅಲ್ಲದೇ ಇವೆರಡು ಗಿರ್ಡರ್‌ನ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಕ್ರೇನ್ ಮತ್ತು ಇತರ ವಿಶೇಷ ಉಪಕರಣಗಳ ಬಳಸಿ ಈ ಗಿರ್ಡರ್ ನಿರ್ಮಾಣದ ಸಂಕೀರ್ಣ ಕಾರ್ಯಾಚರಣೆ ಯಶಸ್ವಿಯಾಗಿ ಮಾಡಲಾಗಿದೆ. ನಿರ್ಮಿತ ಗಿರ್ಡ್‌ರ್ ಕ್ರೇನ್ ಮೂಲಕ ಉದ್ದೇಶಿತ ಸ್ಥಳದಲ್ಲಿ ಅಳವಡಿಸಲಾಯಿತು. ಇದೇ ರೀತಿ ಸೇತುವೆ, ಇತರ ಗಿರ್ಡರ್‌ಗಳನ್ನು ಡೆಕ್ ರೂಪಿಸಲಾಗುವುದು ಎಂದು ಕಂಪನಿ ತಿಳಿಸಿದೆ.

17 ನಿಲ್ದಾಣಗಳ ನೀಲಿ ಮಾರ್ಗ 2026ರಲ್ಲಿ ಪೂರ್ಣ?
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸದ್ಯ 73 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿದೆ. ಈ ವ್ಯಾಪ್ತಿಗೆ ಆರ್‌ವಿ ರಸ್ತೆ-ಬೊಮ್ಮಸಂದ್ರ ನಂತರ ನೀಲಿ ಮಾರ್ಗ ಸೇರ್ಪಡೆಯಾಗುವ ಸಾಧ್ಯತೆ ಇದೆ. ನಮ್ಮ ಮೆಟ್ರೋ ಹಂತ 2ಅ ಯೋಜನೆ ಕಾರ್ಯಗತಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) 56,000 ಕೋಟಿ ರೂಪಾಯಿ ವ್ಯೆಯಿಸುತ್ತಿದೆ.
BMRCL ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಸಂಪರ್ಕಿಸುವ ಈ ಮಾರ್ಗದಲ್ಲಿ ನಾಗವಾರ ಮತ್ತು ಹೆಬ್ಬಾಳ ಸೇರಿದಂತೆ ಒಟ್ಟು 17 ನಿಲ್ದಾಣಗಳನ್ನು ಒಳಗೊಂಡಿದೆ. ಇದು 2026ರ ಮಧ್ಯದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಕೆಲವೆಡೆ ಕೆಲಸ ಪೂರ್ಣ: ಸಾಕಷ್ಟು ಅನುಕೂಲ
ಈ ನೀಲಿ ಮಾರ್ಗವನ್ನು ಆರಂಭಿಸಿದಾಗ ಮೊದಲು ಜನನಿಬಿಡ ಸ್ಥಳವಾದ ಸಿಲ್ಕ್ ಬೋರ್ಡ್-ಕೆಆರ್ ವರೆಗಿನ ಕಾಮಗಾರಿ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸಲಾಗಿತ್ತು. ಅದರ ಜೊತೆ ಜೊತೆಗೆ ನಂತರದ ದಿನಗಳಲ್ಲಿ ಕೆಆರ್ ಪುರ ನಿಂದ ವಿಮಾನ ನಿಲ್ದಾಣವರೆಗೆ ಮಾರ್ಗ ವಿಸ್ತರಣೆ ಕೆಲಸಗಳನ್ನು ಕೈಗೊಳ್ಳಲಾಯಿತು. ಮೊದಲು ಕಂಬಗಳನ್ನು ನಿಲ್ಲಿಸುವ ಗುರಿ ತಲುಪಿದರೆ, ಇದೀಗ ಅಗತ್ಯವಿದ್ದಲ್ಲಿ ಗಿರ್ಡರ್ ನಿರ್ಮಾಣ ಮಾಡಲಾಗುತ್ತಿದೆ. ಕೆಲವೆಡೆ ಕೆಲಸ ಪೂರ್ಣಗೊಂಡಿದೆ.
ಸಿಲ್ ಬೋರ್ಡ್-ಕೆ.ಆರ್‌ಪುರಂ- ಕೆಐಎ ಮೆಟ್ರೋ ಮಾರ್ಗವು ಪೂರ್ಣಗೊಂಡ ಬಳಿಕ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಮಟ್ಟ ನಿಯಂತ್ರಣಗೊಳ್ಳಲಿದೆ. ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರಿಗೆ ಈ ಮಾರ್ಗ ಹೆಚ್ಚು ಅನುಕೂಲವಾಗಲಿದೆ. ನಿತ್ಯ ಈ ಟ್ರಾಫಿಕ್‌ನಿಂದ ಕಿರಿ ಕಿರಿ ಅನುಭವಿಸುತ್ತಿರುವ ಜನರ ಜೀವನಮಟ್ಟವು ಸುಧಾರಿಸಲಿದೆ.












Click it and Unblock the Notifications