ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro: ಆರಂಭವಾಗಲಿರುವ ಕೆ.ಆರ್. ಪುರಂ - ವೈಟ್‌ಫೀಲ್ಡ್ ನಡುವೆ 10 ನಿಮಿಷಕ್ಕೆ ಒಂದು ಮೆಟ್ರೋ

ಇನ್ನೇನು ಸಾರ್ವಜನಿಕರ ಸೇವೆಗೆ ಮುಕ್ತವಾಗಲಿರುವ ಕೆ.ಆರ್. ಪುರಂ ಮತ್ತು ವೈಟ್‌ಫೀಲ್ಡ್ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಓಡಾಡಕ್ಕೆ ತಯಾರಾಗಿದ್ದು, ಕೆಲವೇ ನಿಮಿಷಗಳ ಅಂತರದಲ್ಲಿ ಕಾರ್ಯನಿರ್ವಹಿಸಲಿವೆ. ವಿವರಗಳಿಗಾಗಿ ಮುಂದೆ ಓದಿ.

|
Google Oneindia Kannada News

ಬೆಂಗಳೂರು, ಫೆಬ್ರವರಿ. 03: ಮುಂದಿನ ಮಾರ್ಚ್ ತಿಂಗಳಲ್ಲಿ ಆರಂಭವಾಗಲಿರುವ ಕೆ.ಆರ್. ಪುರಂ ಮತ್ತು ವೈಟ್‌ಫೀಲ್ಡ್ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು 10 ನಿಮಿಷಗಳ ಅಂತರದಲ್ಲಿ ಓಡಾಡಲಿವೆ.

ವೈಟ್‌ಫೀಲ್ಡ್ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು 10 ನಿಮಿಷಗಳ ಅಂತರದಲ್ಲಿ ಓಡಾದಲಿದ್ದು, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಎರಡು ನಿಲ್ದಾಣಗಳ ನಡುವೆ ಸೇವೆ ನೀಡಲು ತಲಾ ಆರು ಕೋಚ್‌ಗಳಿರುವ ಐದು ಸೆಟ್ ರೈಲುಗಳನ್ನು ನಿಯೋಜಿಸಲಿದೆ.

Namma metro: ಶೀಘ್ರದಲ್ಲೇ ಮೆಟ್ರೋ ನಿಲ್ದಾಣಕ್ಕೆ ಹೋಗಲು 2 ಕಿಲೋ ಮೀಟರ್ ಒಳಗೆ ಸಾರಿಗೆ ವ್ಯವಸ್ಥೆNamma metro: ಶೀಘ್ರದಲ್ಲೇ ಮೆಟ್ರೋ ನಿಲ್ದಾಣಕ್ಕೆ ಹೋಗಲು 2 ಕಿಲೋ ಮೀಟರ್ ಒಳಗೆ ಸಾರಿಗೆ ವ್ಯವಸ್ಥೆ

ವಿಸ್ತರಿಸಲಾಗಿರುವ ನೇರಳೆ ಮಾರ್ಗವಾದ ವೈಟ್‌ಫೀಲ್ಡ್ ಮೆಟ್ರೋ ಮಾರ್ಗವನ್ನು ಬಿಎಂಆರ್‌ಸಿಎಲ್ ಎರಡು ಹಂತಗಳಲ್ಲಿ ತೆರೆಯಲು ಯೋಜಿಸಿದೆ. ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ವೈಟ್ ಫೀಲ್ಡ್ ನಿಂದ ಕೆ.ಆರ್ ಪುರಂ ವರೆಗಿನ 13 ಕಿ.ಮೀ. ಪುರಂ ಅನ್ನು ಮಾರ್ಚ್ ವೇಳೆಗೆ ವಾಣಿಜ್ಯ ಕಾರ್ಯಾಚರಣೆಗೆ ತೆರೆಯುವ ಸಾಧ್ಯತೆಯಿದೆ.

Namma Metro between KR Puram - Whitefield to run at frequency of 10 min

ಇನ್ನು, ಉಳಿದ ಕೆ.ಆರ್. ಪುರಂ ನಿಂದ ಬೈಯಪ್ಪನಹಳ್ಳಿ ವರೆಗಿನ ಮೆಟ್ರೋ ಮಾರ್ಗವನ್ನು ವರ್ಷದ ಮಧ್ಯದಲ್ಲಿ ತೆರೆಯಲಾಗುವುದು ಎಂದು ನಿರೀಕ್ಷಿಸಲಾಗಿದೆ.

"ನಾವು ಈಗಾಗಲೇ ನಾಲ್ಕು ಮೆಟ್ರೋ ರೈಲುಗಳನ್ನು ವೈಟ್‌ಫೀಲ್ಡ್ ಡಿಪೋಗೆ ಸ್ಥಳಾಂತರಿಸಿದ್ದೇವೆ. ಅವುಗಳನ್ನು ವಾಣಿಜ್ಯ ಕಾರ್ಯಾಚರಣೆ ಪ್ರಾರಂಭಿಸಲು ಬಳಸಲಾಗುವುದು. ಮೆಟ್ರೋ ಸೇವೆ ಪ್ರಾರಂಭಿಸಲು ಐದು ಸೆಟ್ ರೈಲುಗಳು ಸಾಕು. ಅಗತ್ಯವಿದ್ದರೆ, ಹೆಚ್ಚುವರಿ ರೈಲುಗಳನ್ನು ನಿಯೋಜಿಸಲಾಗುವುದು" ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

"ತಡರಾತ್ರಿಯಲ್ಲಿ ರೈಲುಗಳನ್ನು ಓಡಿಸುವ ಯಾವುದೇ ಪ್ರಸ್ತಾಪವಿಲ್ಲ. ನಾವು ಅಸ್ತಿತ್ವದಲ್ಲಿರುವ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತೇವೆ. ಸಂಪೂರ್ಣ ಮಾರ್ಗವು ಕಾರ್ಯಾರಂಭಿಸಿದ ನಂತರ, ಪ್ರಯಾಣಿಕರ ಸಂಖ್ಯೆ ದಿನಕ್ಕೆ 2.5 ಲಕ್ಷದಷ್ಟು ಏರಿಕೆಯಾಗುವ ನಿರೀಕ್ಷೆಯಿದೆ" ಎಂದು ಹೇಳಿದ್ದಾರೆ.

Namma Metro between KR Puram - Whitefield to run at frequency of 10 min

ಸದ್ಯ ಬೈಯಪ್ಪನಹಳ್ಳಿವರೆಗೆ ಮೆಟ್ರೋ ಸೇವೆ ಲಭ್ಯವಿದೆ. ಬೈಯಪ್ಪನಹಳ್ಳಿ ಮತ್ತು ಕೆ.ಆರ್. ಪುರಂ ಮೆಟ್ರೋ ನಿಲ್ದಾಣವು ಸುಮಾರು 2.5 ಕಿ.ಮೀ ಇದೆ. ಬೆನ್ನಿಗಾನಹಳ್ಳಿ ಬಳಿ ರೈಲ್ವೆ ಹಳಿಯಲ್ಲಿ ತೆರೆದ ವೆಬ್ ಗರ್ಡರ್ ಕಾಮಗಾರಿ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ಸಂಪೂರ್ಣ ವಿಸ್ತೃತ ನೇರಳೆ ಮಾರ್ಗವು ಕಾರ್ಯನಿರ್ವಹಿಸುವವರೆಗೆ ಎರಡು ನಿಲ್ದಾಣಗಳ ನಡುವೆ ಫೀಡರ್ ಸೇವೆಯನ್ನು ನಿಯೋಜಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

* ದರ ಪರಿಷ್ಕರಣೆ ಸಾಧ್ಯತೆ*

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯು ಪ್ರಯಾಣ ದರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆ. ಬಿಎಂಆರ್‌ಸಿಎಲ್ ಸಮಿತಿಯ ಅಧ್ಯಕ್ಷರನ್ನು ನೇಮಕ ಮಾಡಿದ ನಂತರ ಅನ್ವಯವಾಗುವ ಗರಿಷ್ಠ ದರದಲ್ಲಿ ಪರಿಷ್ಕರಣೆ ನಡೆಯಲಿದೆ.

''ಸದ್ಯ ನಗರದಲ್ಲಿ ಕನಿಷ್ಠ ದರ 10 ರೂಪಾಯಿ, ಗರಿಷ್ಠ ದರ 60 ರೂಪಾಯಿಯಿದೆ. ನಾವು ಹೆಚ್ಚುವರಿಯಾಗಿ 15 ಕಿಮೀ ಕಾರ್ಯಾಚರಣೆಯನ್ನು ನಡೆಸುತ್ತಿರುವುದರಿಂದ, ಗರಿಷ್ಠ ದರದಲ್ಲಿ ಪರಿಷ್ಕರಣೆ ಅಗತ್ಯವಿದೆ" ಎಂದಿದ್ದಾರೆ.

English summary
Namma Metro: The Bangalore Metro Rail Corporation Limited (BMRCL) informes that Namma Metro train between K.R. Puram and Whitefield to run at frequency of 10 minutes. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X