Namma Metro: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇನ್ನೂ ದಾರಿ ಸುಲಭ

ಉತ್ತರ ಬೆಂಗಳೂರಿನ ಕಹಳೆ ಟೋಲ್ ಪ್ಲಾಜಾ ಬಳಿ ಬಳ್ಳಾರಿ ರಸ್ತೆಯ ಬಲಭಾಗದಲ್ಲಿ ಡಿಪೋ ವರ್ಕ್‌ಶಾಪ್‌ಗೆ ಅಗತ್ಯವಿರುವ ಅಂತಿಮ ಐದು ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳುತ್ತಿದೆ.

ಬೆಂಗಳೂರು, ಫೆಬ್ರವರಿ 13: ಶೆಟ್ಟಿಗೆರೆ ಬಳಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಒದಗಿಸುವ 38.44 ಕಿ.ಮೀ ಉದ್ದದ ಮೆಟ್ರೊ ಕೊನೆಯ ಭೂಸ್ವಾಧೀನ ಅಡಚಣೆಯನ್ನು ನಿವಾರಿಸಲು ಸಜ್ಜಾಗಿದೆ.

ಉತ್ತರ ಬೆಂಗಳೂರಿನ ಕಹಳೆ ಟೋಲ್ ಪ್ಲಾಜಾ ಬಳಿ ಬಳ್ಳಾರಿ ರಸ್ತೆಯ ಬಲಭಾಗದಲ್ಲಿ ಡಿಪೋ ವರ್ಕ್‌ಶಾಪ್‌ಗೆ ಅಗತ್ಯವಿರುವ ಅಂತಿಮ ಐದು ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳುತ್ತಿದೆ.

ಶೆಟ್ಟಿಗೆರೆ ಡಿಪೋಗಾಗಿ ಬಿಎಂಆರ್‌ಸಿಎಲ್‌ಗೆ 91,532 ಚದರ ಮೀಟರ್ (22.62 ಎಕರೆ) ಭೂಮಿ ಅಗತ್ಯವಿದೆ. ಈ ಭೂಮಿ ರಾಜ್ಯ ಸರ್ಕಾರಕ್ಕೆ ಸೇರಿದ್ದ ಕಾರಣ ಶೀಘ್ರವಾಗಿ ಸುಮಾರು 18 ಎಕರೆ ಸಿಕ್ಕಿತು. ಆದಾಗ್ಯೂ, ಉಳಿದ ಐದು ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಕಷ್ಟವಾಗಿತ್ತು. ಭೂಸ್ವಾಧೀನ ಸಂಬಂಧ ಅನೇಕ ಗೊಂದಲಗಳು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದವು. ಸರ್ಕಾರಿ ದಾಖಲೆಗಳು ಗೋಮಾಳ (ಹುಲ್ಲುಗಾವಲು ಭೂಮಿ) ಎಂದು ತೋರಿಸಿದರೆ, 11 ವ್ಯಕ್ತಿಗಳು ಸದರಿ ಜಾಗಕ್ಕೆ ತಮ್ಮ ಮಾಲೀಕತ್ವವನ್ನು ಹೊಂದಿದ್ದರು. ಈ ಹಗ್ಗಜಗ್ಗಾಟ ತಿಂಗಳುಗಟ್ಟಲೆ ಮುಂದುವರೆದಿತ್ತು.

ವಿವಾದದ ಕಾರಣ ಕೆಐಎಡಿಬಿ ಎರಡು ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲು ಹಣವನ್ನು ನ್ಯಾಯಾಲಯಕ್ಕೆ ಕಳುಹಿಸಿದೆ. ಇನ್ನೂ ಎರಡು ಎಕರೆ ಸ್ವಾಧೀನಪಡಿಸಿಕೊಳ್ಳಲು ಬಿಎಂಆರ್‌ಸಿಎಲ್‌ನಿಂದ ಹಣ ಪಡೆದಿದ್ದು, ಶೀಘ್ರದಲ್ಲೇ ನ್ಯಾಯಾಲಯದಲ್ಲಿ ಠೇವಣಿ ಇಡಲಿದೆ ಎಂದು ಕೆಐಎಡಿಬಿಯಲ್ಲಿನ ಮೂಲಗಳು ತಿಳಿಸಿವೆ ಎಂದು ಡಿಎಚ್‌ ವರದಿ ಮಾಡಿದೆ.

ಉಳಿದ 4,498.609 ಚದರ ಅಡಿ (1.11 ಎಕರೆ) ಜಾಗವನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಸ್ವಾಧೀನಪಡಿಸಿಕೊಳ್ಳಲಾಗುವುದು. ಇನ್ನೆರಡು ತಿಂಗಳಲ್ಲಿ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ನ ಪ್ರಧಾನ ವ್ಯವಸ್ಥಾಪಕ (ಭೂಸ್ವಾಧೀನ) ಎಂ ಎಸ್ ಚನ್ನಪ್ಪಗೌಡರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯದಲ್ಲಿ ಹಣ ಜಮೆಯಾದ ಕೂಡಲೇ ಬಿಎಂಆರ್‌ಸಿಎಲ್‌ಗೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುವುದು. ಜಮೀನು ನೀಡಲು ಯಾವುದೇ ಭೂಮಾಲೀಕರಿಗೆ ಸಮಸ್ಯೆ ಇಲ್ಲ. ಸಮಸ್ಯೆಯು ಪರಿಹಾರವನ್ನು ಹಂಚುವಲ್ಲಿ ಮಾತ್ರ, ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ ಅಲ್ಲ ಎಂದು ಅವರು ತಿಳಿಸಿದರು.

ಬೈಯಪ್ಪನಹಳ್ಳಿ ಡಿಪೋದಿಂದ ಸೇವೆ

ಬೈಯಪ್ಪನಹಳ್ಳಿ ಡಿಪೋದಿಂದ ಸೇವೆ

ಬಿಎಂಆರ್‌ಸಿಎಲ್ ಕಳೆದ ವರ್ಷ ಶೆಟ್ಟಿಗೆರೆ ಡಿಪೋಗೆ ತಾಂತ್ರಿಕ ಬಿಡ್‌ಗಳನ್ನು ತೆರೆದು ಯೋಜನೆಗೆ ಹಣ ನೀಡುತ್ತಿರುವ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ಗೆ ಕಳುಹಿಸಿದೆ. ಇದು ಶೀಘ್ರದಲ್ಲೇ ಹಣಕಾಸು ಬಿಡ್‌ಗಳನ್ನು ಕರೆಯಲಿದೆ. ಶೆಟ್ಟಿಗೆರೆ ಡಿಪೋ ಸಿದ್ಧಗೊಳ್ಳುವವರೆಗೆ ವಿಮಾನ ನಿಲ್ದಾಣದ ಮಾರ್ಗವನ್ನು ಮರುರೂಪಿಸುತ್ತಿರುವ ಬೈಯಪ್ಪನಹಳ್ಳಿ ಡಿಪೋದಿಂದ ಸೇವೆ ಒದಗಿಸಲಾಗುವುದು ಎನ್ನಲಾಗಿದೆ.

ವಯಡಕ್ಟ್‌ಗಳ ನಿರ್ಮಾಣ ಪ್ರಾರಂಭ

ವಯಡಕ್ಟ್‌ಗಳ ನಿರ್ಮಾಣ ಪ್ರಾರಂಭ

ಕಳೆದ ತಿಂಗಳು ಸಂಭವಿಸಿದ ಮೆಟ್ರೋ ಫಿಲ್ಲರ್‌ ಅಪಘಾತದಿಂದ ಹಾನಿಗೊಳಗಾದ ವಿಮಾನ ನಿಲ್ದಾಣದ ಮಾರ್ಗದಲ್ಲಿ ವಯಡಕ್ಟ್‌ಗಳ ನಿರ್ಮಾಣವು ನಿಧಾನವಾಗಿ ಪುನರಾರಂಭಗೊಳ್ಳುತ್ತಿದೆ. ಕೆಐಎಡಿಬಿಯು ವಿಮಾನ ನಿಲ್ದಾಣದ ಮೆಟ್ರೋ ಮಾರ್ಗಕ್ಕಾಗಿ ನಿಲ್ದಾಣವನ್ನು ನಿರ್ಮಿಸಲು ನಾಗವಾರ ಸಮೀಪದ ವೀರಣ್ಣಪಾಳ್ಯದಲ್ಲಿ 4,182.63 ಚದರ ಮೀಟರ್ (45,021.45 ಚದರ ಅಡಿ) ಅಳತೆಯ ಮೂರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಜ್ಜಾಗಿದೆ.

2.762.93 ಚದರ ಮೀಟರ್ ಜಾಗ

2.762.93 ಚದರ ಮೀಟರ್ ಜಾಗ

ಈ ಎರಡು ಆಸ್ತಿಗಳು 2.762.93 ಚದರ ಮೀಟರ್ ಆಗಿದ್ದು, ದವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರರಾದ ಬಿ ವೈ ರಾಘವೇಂದ್ರ ಮತ್ತು ಬಿ ವೈ ವಿಜಯೇಂದ್ರ ಮತ್ತು ಅವರ ಅಳಿಯ ಆರ್ ಎನ್ ಸೋಹನ್ ಕುಮಾರ್ ಅವರು ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ವಿಚಾರಣೆ ಪ್ರಕ್ರಿಯೆಯನ್ನು ಪೂರ್ಣ

ವಿಚಾರಣೆ ಪ್ರಕ್ರಿಯೆಯನ್ನು ಪೂರ್ಣ

ಕೆಐಎಡಿಬಿ ಇತ್ತೀಚೆಗೆ ವಿಚಾರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಸಂಸ್ಥೆಯು ಭೂಸ್ವಾಧೀನಕ್ಕೆ ಯಾವುದೇ ಆಕ್ಷೇಪಣೆಯನ್ನು ವ್ಯಕ್ತಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪ್ರಸ್ತುತ ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಪಾವತಿಸಲಾಗುವುದು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+