Namma Metro: ಮೆಟ್ರೋ ರೈಲಿನಲ್ಲಿ 'ಗೋಬಿ ತಿಂದ' ವ್ಯಕ್ತಿಗೆ ಬಿತ್ತು ಭಾರೀ ದಂಡ, ಕ್ರಮ
ಬೆಂಗಳೂರು, ಅಕ್ಟೋಬರ್ 06: ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ನಿಯಮ ಮಿರಿ 'ಗೋಬಿ ಮಂಚೂರಿ' ತಿಂದ ವ್ಯಕ್ತಿ ವಿಡಿಯೋ ಆತನ ಸ್ನೇಹಿತರಿಂದಲೇ ವೈರಲ್ ಆಗಿದೆ. ಈ ವ್ಯಕ್ತಿ ವಿರುದ್ಧ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಪ್ರಕರಣ ದಾಖಲಿಸಿ ಅವರಿಂದ ದಂಡ ಕಟ್ಟಿಸಿಕೊಂಡಿದೆ.
ಬೆಂಗಳೂರು ನಮ್ಮ ಮೆಟ್ರೋ (Namma Metro) ರೈಲಿನೊಳಗೆ ಆಹಾರ ತಿಂದ ಘಟನೆ ಮತ್ತು ಆ ವಿಚಾರವಾಗಿ ದಂಡ ವಿಧಿಸಿರುವುದು ಇದೇ ಮೊದಲು ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.

ಕೆಲವು ದಿನಗಳ ಹಿಂದೆ ಸುನೀಲ್ ಕುಮಾರ್ ಮತ್ತು ಅವರ ಸ್ನೇಹಿತರು ಜಯನಗರದ ಪ್ರಮುಖ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನಿತ್ಯದಂತೆ ಮೊನ್ನೆ ಮಂಗಳವಾರವು ಸಹ ಕೆಲಸಕ್ಕೆ ತೆರಳಲು ಸಂಪಿಗೆ ರಸ್ತೆ ನಿಲ್ದಾಣದಲ್ಲಿ ಮೆಟ್ರೋ ಏರಿದ್ದಾರೆ. ಈ ವೇಳೆ ಪಾರ್ಸೆಲ್ ತಂದಿದ್ದ ಗೋಬಿ ಮಂಚೂರಿಯನ್ನು ಸುನೀಲ್ ತಿಂದಿದ್ದಾರೆ. ಇದನ್ನು ಅವರ ಸ್ನೇಹಿತರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಆಧರಿಸಿ ಪ್ರಕರಣ ದಾಖಲಾಗಿದೆ.
ವೈರಲ್ ಆದ ಈ ವಿಡಿಯೋದಲ್ಲಿ ಸುನೀಲ್ ಅವರಿಗೆ ಮೆಟ್ರೋದಲ್ಲಿ ಆಹಾರ ತಿನ್ನಬಾರದು ಎಂದು ಸಲಹೆ ನೀಡುವುದು ಸಹ ಕೇಳುತ್ತದೆ. ಅವರ ಮಾತನ್ನು ಕೇಳಿಸಿಕೊಳ್ಳುತ್ತಲೆ ಗೋಬಿ ತಿಂದ ಸುನೀಲ್ ವಿರುದ್ಧ ನಿಯಮ ಉಲ್ಲಂಘನೆ ಅಡಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜೊತೆಗೆ ಅವರ ಮೇಲೆ 500 ರೂಪಾಯಿ ದಂಡ ವಿಧಿಸಲಾಗಿದೆ.
ನಮ್ಮ ಮೆಟ್ರೋಗೆ ಓಡಾಡುವ ಎಲ್ಲ ಪ್ರಯಾಣಿಕರು ನಿಯಮಗಳನ್ನು ಪಾಲಿಸುತ್ತಾರೆ. ಆದರೆ ಸುನೀಲ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಮನಿಸಿದ ಮೆಟ್ರೋ ನಿಗಮದ ಸಿಬ್ಬಂದಿ ಅವರಿಗಾಗಿ ಜಯನಗರದಲ್ಲಿ ಕಾಯುತ್ತಿದ್ದರು. ಅವರು ಬರುತ್ತಿದ್ದಂತೆ ಹಿಡಿದು ಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ತಪ್ಪಿತಸ್ಥರ ಸುನೀಲ್ ಮತ್ತು ಅವರ ಸ್ನೇಹಿತರನ್ನು ಅರ್ಧ ದಿನ ಪೊಲೀಸ್ ಠಾಣೆಯಲ್ಲಿಯೆ ಇರಿಸಿಕೊಂಡು ಬುದ್ಧಿ ಹೇಳಿ ಕಳುಹಿಸಿದ್ಆರೆ ಎಂದು ತಿಳಿದು ಬಂದಿದೆ.












Click it and Unblock the Notifications