Namma Metro: 318 ಬೋಗಿಗಳ ಪೂರೈಕೆಗೆ ಆಸಕ್ತಿ ವಹಿಸಿದ 4 ಕಂಪನಿಗಳು, ಟೆಂಡರ್, ಮಾರ್ಗದ ಬಗ್ಗೆ ತಿಳಿಯಿರಿ.
ಸಿಲಿಕಾನ್ ಸಿಟಿಯ ಬಹುನಿರೀಕ್ಷೆಯ 'ನಮ್ಮ ಮೆಟ್ರೋ' ಮಾರ್ಗ ನಿರ್ಮಾಣ ಕೆಲಸ ಭರದಿಂದ ಸಾಗಿದೆ. ಈ ಯೋಜನೆಯ ಪೂರ್ಣ ನಂತರ ಅಗತ್ಯವಾಗುವ ನೂರಾರು ಮೆಟ್ರೋ ಬೋಗಿ ಪೂರೈಕೆಗೆ ಕೆಲವು ಕಂಪನಿಗಳು ಮುಂದಾಗಿವೆ.
ಬೆಂಗಳೂರು, ಫೆಬ್ರವರಿ 12: ಸಿಲಿಕಾನ್ ಸಿಟಿಯ ಬಹುನಿರೀಕ್ಷೆಯ 'ನಮ್ಮ ಮೆಟ್ರೋ' ಮಾರ್ಗ ನಿರ್ಮಾಣ ಕೆಲಸ ಭರದಿಂದ ಸಾಗಿದೆ. ಈ ಯೋಜನೆಯ ಪೂರ್ಣ ನಂತರ ಅಗತ್ಯವಾಗುವ ನೂರಾರು ಮೆಟ್ರೋ ಬೋಗಿಗಳನ್ನು ಪೂರೈಸಲು ಕೆಲವು ಕಂಪನಿಗಳು ಮುಂದೆ ಬಂದಿವೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ನಿಂದ ನಗರದ ಹೊರ ವರ್ತುಲ ರಸ್ತೆ (ORR) ಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಹಾಗೂ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ (ಪಿಂಕ್ ಲೈನ್) ವರೆಗೆ ಮೆಟ್ರೋ ಮಾರ್ಗ ನಿರ್ಮಾಣ ಹಂತದಲ್ಲಿದೆ. ಈ ಭಾಗದ ಮೆಟ್ರೋ ಕಾರಿಡಾರ್‌ಗಳಿಗೆ ಒಟ್ಟು 318 ಮೆಟ್ರೋ ಕೋಚ್ (ಬೋಗಿ) ಗಳು ಬೇಕಾಗಬಹುದು ಎಂದು ಅಂದಾಜಿಸಿದೆ.
ಈ ನೂತನ ಮೆಟ್ರೋ ಕಾರಿಡಾರ್ ಆರಂಭವಾದ ನಂತರ ಸಾರ್ವಜನಿಕರಿಗೆ ಪ್ರಯಾಣ ಸೇವೆ ನೀಡಲು ಬೇಕಾಗುವ 318 ಮೆಟ್ರೋ ಕೋಚ್ ಪೂರೈಕೆ ಸಂಬಂಧ ಇತ್ತೀಚೆಗಷ್ಟೇ ನಮ್ಮ ಮೆಟ್ರೋ ಬಿಡ್ ಆಹ್ವಾನಿಸಿತ್ತು. ಅದರಲ್ಲಿ ನಾಲ್ಕು ರೋಲಿಂಗ್-ಸ್ಟಾಕ್ ಕಂಪನಿಗಳು ಪಾಲ್ಗೊಂಡವು. ತಾವು ಬೆಂಗಳೂರಿಗೆ ಅಗತ್ಯ ಮೆಟ್ರೋ ಬೋಗಿಗಳನ್ನು ತಯಾರಿಸಿ ಪೂರೈಕೆ ಮಾಡುವುದಾಗಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು ತಿಳಿಸಿದ್ದಾರೆ.

ಬಿಡ್‌ನಲ್ಲಿ ಭಾಗವಹಿಸಿದ ಕಂಪನಿಗಳೆಂದರೆ ಅಲ್‌ಸ್ಟೋಮ್, ಸಿಎಎಫ್ (ಸ್ಪೇನ್), ಬಿಇಎಂಎಲ್ ಲಿಮಿಟೆಡ್ ಮತ್ತು ಟಿಟಗಢ ವ್ಯಾಗನ್ ಲಿಮಿಟೆಡ್ ಭಾಗವಹಿಸಿದ್ದವು ಎಂದು ನಮ್ಮ ಮೆಟ್ರೋ ಮೂಲಗಳು ತಿಳಿಸಿವೆ.
ಹಿಂದಿನ ವರ್ಷ 2022ರ ಸೆಪ್ಟೆಂಬರ್ ತಿಂಗಳಲ್ಲಿ 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಕಾರುಗಳ ವಿನ್ಯಾಸ, ತಯಾರಿಕೆ, ಪೂರೈಕೆ, ಸ್ಥಾಪನೆ, ಪರೀಕ್ಷೆ ಮತ್ತು ಕಾರ್ಯಾರಂಭ ಮತ್ತು 15 ವರ್ಷಗಳವರೆಗೆ ಸಮಗ್ರ ನಿರ್ವಹಣೆ ಸೇರಿದಂತೆ ಸಿಬ್ಬಂದಿಗೆ ತರಬೇತಿ ನೀಡಲು ಟೆಂಡರ್ ಕರೆಯಲಾಗಿತ್ತು.
ಆದರೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳದ ಟೆಂಡರ್ ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಅಂತಿಮಗೊಂಡಿತ್ತು. ಅದರ ಬೆನ್ನಲ್ಲೆ ಹಲವು ಕಾರಣಕ್ಕಾಗಿ ಟೆಂಡರ್ ಪ್ರಕ್ರಿಯೆ ನಿಧಾನವಾಯಿತು. ಸದ್ಯಕ್ಕೀಗ ನಾಲ್ಕು ದೊಡ್ಡ ಕಂಪನಿಗಳು ಯೋಜನೆಗಳಿಗೆ ಮೆಟ್ರೋ ಕೋಚ್‌ಗಳನ್ನು ಪೂರೈಸಲು ಆಸಕ್ತಿ ತೋರಿಸಿವೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ.

ಅಗತ್ಯವಾಗಿರುವ ಒಟ್ಟು 318 ಕೋಚ್‌ಗಳಲ್ಲಿ 06 ಬೋಗಿಗಳಂತೆ 16 ರೈಲು ಸೆಟ್‌ಗಳು (ಒಟ್ಟು 96 ಕೋಚ್‌ಗಳು) ಪಿಂಕ್ ಲೈನ್‌ಗೆ ವ್ಯಾಪ್ತಿಗೆ ಒಳಪಡಲಿವೆ. 16 ಆರು ರೈಲ್ ಸೆಟ್‌ಗಳು (96 ಕೋಚ್‌ಗಳು) ಬೆಂಗಳೂರು ಹೊರ ವರ್ತುಲ ರಸ್ತೆಯ (ORR) ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆಆರ್ ಪುರಂಗಾಗಿ ಕಾರ್ಯ ನಿರ್ವಹಿಸಲಿವೆ. ಹೆಚ್ಚುವರಿಯಾಗಿ, 21 ಆರು ಸೆಟ್‌ಗಳು (126 ಕೋರ್ಚ್‌ಗಳು) ಕೆ.ಆರ್.ಪುರಂ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ಏರ್‌ಪೋರ್ಟ್ ನಿಲ್ದಾಣದ ಪ್ರಯಾಣಕ್ಕೋಸ್ಕರ ಬಳಕೆ ಮಾಡಲು ಉದ್ದೇಶಿಸಲಾಗಿದೆ.












Click it and Unblock the Notifications