• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಡಿಎ ರಂಗಮಂದಿರದಲ್ಲಿ ಒಡಿಸ್ಸಿ ನೃತ್ಯವೈಭವ 'ನಮನ್

By Prasad
|

ಬೆಂಗಳೂರು, ಆಗಸ್ಟ್ 24 : ನಗರದ ಒಡಿಸ್ಸಿ ನೃತ್ಯ ಕಲಾ ಪ್ರೇಮಿಗಳಿಗೆ ಒಡಿಸ್ಸಿ ನೃತ್ಯಹಬ್ಬ 'ನಮನ್' ರಸದೌತಣ ಬಡಿಸಲಿದೆ. ಒಡಿಸ್ಸಿ ನೃತ್ಯ ಸಂಸ್ಥೆಯಾದ 'ನೃತ್ಯಾಂತರ' 8ನೇ ವಾರ್ಷಿಕ ಒಡಿಸ್ಸಿ ನೃತ್ಯ ಹಬ್ಬ 'ನಮನ್' ಅನ್ನು ಆಗಸ್ಟ್ 27ರಂದು ಬೆಂಗಳೂರು ಜೆ.ಸಿ. ರಸ್ತೆಯಲ್ಲಿರುವ ಎ.ಡಿ.ಎ. ರಂಗಮಂದಿರದಲ್ಲಿ ಸಾದರಪಡಿಸುತ್ತಿದೆ.

ನಮನ್ ಕಾರ್ಯಕ್ರಮವು 2010ರಲ್ಲಿ ಪ್ರಧಾನ ಒಡಿಸ್ಸಿ ಗುರುಗಳಾದ ಗುರು ಗಂಗಾಧರ ಪ್ರಧಾನ್ ಅವರಿಂದ ಉದ್ಘಾಟಿಸಲ್ಪಟ್ಟಿತ್ತು. ಈ ಕಾರ್ಯಕ್ರಮವು ದೇಶದಾದ್ಯಂತ ಅನೇಕ ಒಡಿಸ್ಸಿ ನೃತ್ಯ ಪ್ರದರ್ಶನಗಳನ್ನು ನೀಡಿದೆ.

ಬೆಂಗಳೂರು ಮೂಲದ ಒಡಿಸ್ಸಿ ನೃತ್ಯ ಸಂಸ್ಥೆಯಾದ 'ನೃತ್ಯಾಂತರ'ವು ಒಡಿಸ್ಸಿ ನೃತ್ಯ ಶಾಲೆಯಲ್ಲಿ ತನ್ನದೇ ಆದ ವಿವಿಧ ಪ್ರಕಾರಗಳನ್ನು ಸಾದರಪಡಿಸಿದೆ. ನಮನ್ ನ ನಿಜವಾದ ಅರ್ಥವೆಂದರೆ ವಂದನೆ ಅಥವಾ ನಮಸ್ಕರಿಸುವುದು, ಅಂದರೆ ಗುರುವಿಗೆ ಸಲ್ಲಿಸುವ ಗೌರವ. ಈ ಹಬ್ಬವು ಒಡಿಸ್ಸಿ ನೃತ್ಯದ ಬೆಳವಣಿಗೆಗೆ, ಪ್ರಚಾರಕ್ಕೆ, ಅಭಿವೃದ್ಧಿಗೆ ಶ್ರಮಿಸಿದ ಗುರುಗಳಿಗೆ ವಿಶೇಷ ಗೌರವ ಸಲ್ಲಿಸುವ ಕಾರ್ಯಕ್ರಮ.

ಈ ಕಾರ್ಯಕ್ರಮವು ಪ್ರೇಕ್ಷಕರಿಗೆ ಒಡಿಸ್ಸಿ ನೃತ್ಯದ ಸೌಂದರ್ಯ, ಶ್ರೀಮಂತಿಕೆ, ವಿವಿಧ ಶೈಲಿಗಳ ವ್ಯತ್ಯಾಸಗಳನ್ನು ಆಸ್ವಾದಿಸುವುದಷ್ಟೇ ಅಲ್ಲದೆ ಒಡಿಸ್ಸಿ ನೃತ್ಯಕ್ಕೆ ಶ್ರೇಷ್ಠ ಗುರುಗಳ ಮೂಲಕ ಸಿಕ್ಕ ಅತ್ಯದ್ಭುತ ಕೊಡುಗೆಗಳನ್ನು ಕಾಣಬಹುದು.

ಬೆಂಗಳೂರಿನ ಕಲಾ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಕಾರ್ಯಕ್ರಮ ಇದಾಗಿದ್ದು, ಒಡಿಸ್ಸಿ ನೃತ್ಯದ ಅನೇಕ ಪ್ರಕಾರಗಳನ್ನು, ಶೈಲಿಗಳನ್ನು ಕಾಣಬಹುದಾಗಿದೆ. ಒಡಿಸ್ಸಿ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ಧ ಗುರುಗಳಾದ ಗುರು ಗಂಗಾಧರ ಪ್ರಧಾನ್, ಸಂಗೀತ ದಾಸ್, ಗುರು ಬಿಜಯಾನಿ ಸತಪತಿ ಮತ್ತು ಗುರು ಮಾಧವಿ ಮುದ್ಗಲ್ ಪ್ರಮುಖರು.

ಒಡಿಸ್ಸಿ ನೃತ್ಯವು ಆಶೀರ್ವಾದದ ಹೊಳೆಯ ಸಾರವಾಗಿದ್ದು, ಸಾಹಿತ್ಯದ ಸೌಂದರ್‍ಯ, ಶಿಲ್ಪದ ನಾಣ್ಯತೆ ಮತ್ತು ಅಧ್ಯಾತ್ಮಿಕತೆಯತ್ತ ಸಾಗುವ, ಶಿಲ್ಪಕಲಾ ಭಂಗಿಗಳ ಮತ್ತು ನಿಷ್ಪಾತವಾದ ಲಯವಾಗಿದೆ. ಇದು ಶತಮಾನಗಳಿಂದ ಪ್ರಚಲಿತದಲ್ಲಿರುವ ಒಡಿಸ್ಸಿ ನೃತ್ಯ ಸಂಪ್ರದಾಯವು ಸರ್ವಕಾಲಿಕ ಮಹರಿ (ಒಡಿಶಾದ ದೇವದಾಸಿಯರು) ಮತ್ತು ಗೋತಿಪುವ (ಹೆಣ್ಣಿನಂತೆ ವೇಷ ಧರಿಸಿ ನೃತ್ಯ ಮಾಡುವ ಯುವಕರು)ರಿಂದ ಕೂಡಿದೆ. ಕವಿ ಜಯದೇವ ವಿರಚಿರ ಗೀತ ಗೋವಿಂದ ಸಾಹಿತ್ಯವು ಒಡಿಸ್ಸಿ ನೃತ್ಯದ ಪ್ರಧಾನ ಅಭಿನಯವಾಗಿದೆ.

ಸಂಜೆ 5.30 ಘಂಟೆಗೆ ಶರ್ಮಿಳಾ ಬಿಸ್ವಾಸ್, ಅರುಣಾ ಮೊಹಾಂತಿ ಮತ್ತು ಸುರುಪಾ ಸೇನ್ ಅವರ ಕಾರ್ಯಕ್ರಮಗಳಿಂದ ಪ್ರಾರಂಭಗೊಳ್ಳುತ್ತದೆ. ಈ ಸಂಜೆಯು ನೃತ್ಯಲೋಕದ ಅನೇಕ ಹಿರಿಯ ನೃತ್ಯಗಾತಿಯರು, ಕಲಾ ನಿಪುಣರು ಮತ್ತು ಹಲವಾರು ಗಣ್ಯರಿಂದ ತುಂಬಿರುತ್ತದೆ. ಬೆಂಗಳೂರಿನ ಕಲಾ ಪ್ರೇಮಿಗಳು ನೋಡಲೇ ಬೇಕಾದ ಕಾರ್ಯಕ್ರಮ. ಎಲ್ಲರಿಗೂ ಸುಸ್ವಾಗತ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Nrityantara Academy of Performing Arts is presenting 'Naman' - festival of Odissi dance at ADA Rangamandira, JC Road, Bengaluru on 27th August, Sunday. Well known dancers like Sharmila Biswas, Aruna Mohanti, Surup Sen will be presenting Odissi dance. All are welcome.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more