ದೇವೇಗೌಡರ ಹೇಳಿಕೆಯಿಂದ ಚಂದ್ರಬಾಬು ನಾಯ್ಡುಗೆ ಶಾಕ್

Recommended Video

      ಬಿಜೆಪಿಯೇತರ ಪಕ್ಷಕ್ಕೆ ಶಾಕ್ ಕೊಟ್ಟ ದೇವೇಗೌಡ್ರು

      ಬೆಂಗಳೂರು, ಮೇ 22:ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸಬೇಕು ಎಂದು ಹಠ ಹೊತ್ತು ತಿರುಗಾಡುತ್ತಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡುಗೆ ಜೆಡಿಎಸ್ ಶಾಕ್ ನೀಡಿದೆ.

      ಈ ಮೂಲಕ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮೈತ್ರಿ ಧರ್ಮದಲ್ಲಿ ಹೊಸ ದಾಳ ಉರು ಉಳಿಸುವ ಸೂಚನೆ ನೀಡಿದ್ದಾರೆ. ನಾಯ್ಡು ಜೊತೆಗಿನ ಸಭೆ ಬಳಿಕ ಮಾತನಾಡಿದ ದೇವೇಗೌಡ ಫಲಿತಾಂಶ ಬರಲಿ ಅಲ್ಲಿಯವರೆಗೆ ಮೈತ್ರಿ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

      ಇಲ್ಲಿಯವರೆಗೆ ಬಿಜೆಪಿಯೇತರ ಸರ್ಕಾರ ರಚನೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೊಸ ಸರ್ಕಾರ ಎಂಬ ವಿಚಾರವನ್ನು ನೇರವಾಗಿ ಹೇಳುತ್ತಿದ್ದ ದೇವೇಗೌಡರು ಈಗ ತಮ್ಮ ನಡೆ ಬದಲಾಯಿಸುತ್ತಿರುವ ಮುನ್ಸೂಚನೆ ನೀಡಿದ್ದಾರೆ.

      ದೇವೇಗೌಡರ ಹೇಳಿಕೆ ಹಿಂದೆ ಮೈತ್ರಿಯನ್ನೇ ಬದಲಿಸುವ ಇರಾದೆ ಇದೆಯೇ ಎಂಬ ಮಾತುಗಳೂ ಕೇಳಿಬರುತ್ತಿವೆ.

      ಭೇಟಿ ಬಳಿಕ ಚಂದ್ರಬಾಬು ನಾಯ್ಡು ಕೂಡ ಜೆಡಿಎಸ್ ನಡೆ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ನೀಡಿಲ್ಲ, ಈಗಾಗಲೇ ಮಾಯಾವತಿ, ಅಖಿಲೇಶ್ ಕಡೆಯಿಂದಲೂ ಧನಾತ್ಮಕ ಪ್ರತಿಕ್ರಿಯೆ ಪಡೆಯದಿರುವ ನಾಯ್ಡುಗೆ ಜೆಡಿಎಸ್ ನ ಈ ಪ್ರತಿಕ್ರಿಯೆ ಹಿನ್ನಡೆ ನೀಡಿದೆ ಎನ್ನಲಾಗತ್ತಿದೆ.

      ಆದರೆ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಜೆಡಿಎಸ್‌ನ ಹಿಂದಿನ ನಿಲುವನ್ನು ಪ್ರಶ್ನಿಸಿದಾಗ ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

      ಎನ್‌ಡಿಎಯಿಂದ ಹೊರಬಿದ್ದ ಬಳಿಕ ಭೇಟಿ

      ಎನ್‌ಡಿಎಯಿಂದ ಹೊರಬಿದ್ದ ಬಳಿಕ ಭೇಟಿ

      ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಮುನಿಸಿಕೊಂಡು ಎನ್‌ಡಿಎ ಯಿಂದ ಹೊರಬಿದ್ದಿದ್ದ ಚಂದ್ರಬಾಬು ನಾಯ್ಡು ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಬಂದು ಚರ್ಚೆ ನಡೆಸಿದ್ದಾರೆ, ಬಿಜೆಪಿಯೇತರ ಸರ್ಕಾರ ರಚನೆಗೆ , ಕಾಂಗ್ರೆಸ್ ಜೊತೆಗಿರಬೇಕು ಎಂದು ಆಗ ನಾಯ್ಡು ಮನವಿ ಮಾಡಿದ್ದರು. ಇದಕ್ಕೆ ದೊಡ್ಡಗೌಡರು ಕೂಡ ಸಮ್ಮತಿ ವ್ಯಕ್ತಪಡಿಸಿ, ಆಂಧ್ರಕ್ಕೆ ವಿಶೇಷ ಸ್ಥಾನ ಮಾನ ನೀಡುವುದಕ್ಕೆ ಬೆಂಬಲ ಸೂಚಿಸಿದ್ದರು.

      ವಿಧಾನಸೌಧದ ಮುಂದೆ ಒಗ್ಗಟ್ಟು ಪ್ರದರ್ಶನ

      ವಿಧಾನಸೌಧದ ಮುಂದೆ ಒಗ್ಗಟ್ಟು ಪ್ರದರ್ಶನ

      ಮಹಾಮೈತ್ರಿಯ ಮುಂದುವರೆದ ಭಾಗವಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ವಿಧಾನಸೌಧ ಮುಂದೆ ಚಂದ್ರಬಾಬು ನಾಯ್ಡು ಸೇರಿ ಇತರೆ ಪ್ರತಿಪಕ್ಷ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದರು ಈ ಚಿತ್ರವು ದೇಶದ ರಾಜಕೀಯ ಚಿತ್ರಣವನ್ನು ಬದಲಿಸಲಿದೆ ಎಂಬ ಮಾತುಗಳೂ ಕೇಳಿಬಂದಿತ್ತು.

      ದೆಹಲಿಯ ಪ್ರತಿಪಕ್ಷ ನಾಯಕರ ಸಭೆಗೆ ಗೈರಾದ ಎಚ್‌ಡಿಕೆ

      ದೆಹಲಿಯ ಪ್ರತಿಪಕ್ಷ ನಾಯಕರ ಸಭೆಗೆ ಗೈರಾದ ಎಚ್‌ಡಿಕೆ

      ಇವಿಎಂ ದುರ್ಬಳಕೆ ಸಂಬಂಧಿಸಿ ಪ್ರತಿಪಕ್ಷಗಳ ಸಭೆಯನ್ನು ಚಂದ್ರಬಾಬು ನಾಯ್ಡು ಮಂಗಳವಾರ ಕರೆದಿದ್ದರು. ಆ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೂಡ ಭಾಗಿಯಾಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪ್ರವಾಸ ರದ್ದುಗೊಳಿಸಿದ ಕುಮಾರಸ್ವಾಮಿ ದೆಹಲಿಗೆ ಹೋಗಲೇ ಇಲ್ಲ.

      ದೇವೇಗೌಡರ ಭೇಟಿಗೆ ಬೆಂಗಳೂರಿಗೆ ದೌಡಾಯಿಸಿದ ನಾಯ್ಡು

      ದೇವೇಗೌಡರ ಭೇಟಿಗೆ ಬೆಂಗಳೂರಿಗೆ ದೌಡಾಯಿಸಿದ ನಾಯ್ಡು

      ಪ್ರತಿಪಕ್ಷಗಳ ಸಭೆಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಗೈರಾದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಬೆಂಗಳೂರಿಗೆ ದೌಡಾಯಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ನಾಯ್ಡು ಈ ಭೇಟಿ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+