ಡಾ.ಮಂಜುನಾಥ್ ನಿಮಗಿದು ಬೇಕಿತ್ತೆ?: ಸಮಾಜ ಕಟ್ಟಲು ಸಾವಿರ ದಾರಿ: ನಾಗತಿಹಳ್ಳಿ ಚಂದ್ರಶೇಖರ್

ಬೆಂಗಳೂರು, ಮಾರ್ಚ್ 16: ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ಅಳಿಯನು ಆಗಿರುವ ಬೆಂಗಳೂರು ಜಯದೇವ ಹೃದ್ರೋಗ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ರಾಜಕೀಯ ಪ್ರವೇಶ ಕುರಿತು ಸಾಹಿತಿ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಡಾ. ಸಿ.ಎನ್. ಮಂಜುನಾಥ್ ಅವರ ರಾಜಕೀಯ ಪ್ರವೇಶ ಕುರಿತು ಇತ್ತೀಚೆಗೆ (ಮಾರ್ಚ್ 14) ಟ್ವೀಟ್ ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು, ಅವರ ರಾಜಕೀಯ ಪ್ರವೇಶ ದುರದೃಷ್ಟಕರ ಎಂದು ವಿಷಾಧಿಸಿ, ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

Nagathihalli Chandrashekhar Reaction About Dr CN Manjunath Contest Lok Sabha Election 2024

ಪೋಸ್ಟ್‌ನಲ್ಲಿ, 'ನಮ್ಮ ಪ್ರೀತಿಯ ವೈದ್ಯ...ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ. ಕಾರಣ ಏನೇ ಇರಲಿ. ಇಲ್ಲಿ ಪಡೆದುದನ್ನು ಅಲ್ಲಿ ಕಳೆದುಕೊಳ್ಳಬಹುದೇನೋ. ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ? ಸಮಾಜವನ್ನು ಕಟ್ಟಲು ಸಾವಿರ ದಾರಿಗಳಿವೆ. ಮಂಜುನಾಥ್ ಇದು ನಿಮಗೆ ಬೇಕಿತ್ತೆ?' ಎಂದು ಬರೆದಿದ್ದಾರೆ.

ರಾಜಕೀಯದಲ್ಲಿ ಎಲ್ಲ ಕಳೆದುಕೊಳ್ಳಬಹುದೆನೋ?

ಈ ಮೂಲಕ ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿಯಲ್ಲ. ಈ ದಾರಿ ನಿಮಗೆ ಬೇಕಿತ್ತೆ? ಎಂದು ಅವರನ್ನು ಪ್ರಶ್ನೆ ಮಾಡಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಅವರು ಅಪಾರ ಹೆಸರು ಮಾಡಿದವರು. ಅವರ ಹೆಸರು ಎಲ್ಲರಿಗೂ ಚಿರಪರಿಚಿತ. ವೈದ್ಯ ಲೋಕದಲ್ಲಿ ತಮ್ಮದೇ ಆದ ಹಾದಿಯಲ್ಲಿ ಸೇವೆಯ ಹೆಗ್ಗುರುತು ಮೂಡಿಸಿದವರು.

Nagathihalli Chandrashekhar Reaction About Dr CN Manjunath Contest Lok Sabha Election 2024

ಡಾ.ಸಿ.ಎನ್ ಮಂಜುನಾಥ್ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣ್ಣಕ್ಕಿಳಿದಿದ್ದಾರೆ. ವೈದ್ಯ ಕ್ಷೇತ್ರದಲ್ಲಿ ಅಪಾರ ಜನಮನ್ನಣೆ, ಹೆಸರು ಪಡೆದ ಇವರು ರಾಜಕೀಯದಲ್ಲಿ ಎಲ್ಲ ಕಳೆದುಕೊಳ್ಳಬಹುದೇನೋ ಎಂಬುದರ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾತನಾಡಿದ್ದಾರೆ.

ರಾಜಕೀಯಕ್ಕೆ ಬರುವುದು ಸರಿಯಲ್ಲ: ಮಾವ ದೇವೇಗೌಡ

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಸ್ಥಾನದಿಂದ ಡಾ.ಸಿ.ಎನ್. ಮಂಜುನಾಥ್ ಅವರು ನಿವೃತ್ತರಾಗುತ್ತಿದ್ದಂತೆ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡಿತು. ಈ ಕುರಿತು ಅವರ ಮಾವನವರಾದ ಹಾಗೂ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರೇ ಸಲಹೆ ನೀಡಿದ್ದರು.

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅಪಾರವಾಗಿ ಹೆಸರು ಮಾಡಿರುವ ಡಾ.ಸಿ.ಎನ್. ಮಂಜುನಾಥ್ ಅವರು ರಾಜಕಾರಣಕ್ಕೆ ಬರುವುದು ಸರಿಯಲ್ಲ ಎಂದು ತಿಳಿಸಿದ್ದರು. ಅವರಿಗೆ ಒಂದೊಳ್ಳೆ ಸ್ಥಾನವಿದೆ. ಅವರಿಗೆ ರಾಜಕಾರಣ ಬೇಡ ಎಂದಿದ್ದರು.

ಮೊದಲ ಮಂಡ್ಯದಿಂದ ಸಿ.ಎನ್. ಮಂಜುನಾಥ್ ಅವರ ಹೆಸರು ಕೇಳಿ ಬಂದಿತ್ತು. ನಂತರ ಅವರನ್ನು ಕಾಂಗ್ರೆಸ್ ಭದ್ರಕೋಟೆಯಾದ ಡಿಕೆ ಸುರೇಶ್ ಅವರು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಬಿಜೆಪಿ ಟಿಕೆಟ್ ನೀಡಲಾಯಿತು. ಈ ಮೂಲಕ ಇಲ್ಲಿನ ಆಕಾಂಕ್ಷಿಗಳಲ್ಲಿ ಉಂಟಾಗಿದ್ದ ಗೊಂದಲಕ್ಕೆ ಬಿಜೆಪಿ ತೆರೆ ಎಳೆಯಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+