ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ವರದಿ: ನಗರೀಕರಣದ ಭರಾಟೆಯಲ್ಲಿ ಕಂಡೂ ಕಾಣದಾದ ನಾಗಲಿಂಗ ವೃಕ್ಷ

ನಗರದ ಇನ್ ಫ್ರಾಂಟ್ರಿ ರಸ್ತೆಯಲ್ಲಿರುವ ಇಂಡಿಯನ್ ಎಕ್ಸ್ ಪ್ರೆಸ್ ಕಟ್ಟಡದ ಮುಂಭಾಗದ ವೃತ್ತ ಬಳಿಯಲ್ಲಿದ್ದರೂ ಕಂಡೂ ಕಾಣದಂತಾಗಿರುವ ಈ ಮರದ ಬಗ್ಗೆ ಶಿವರಾತ್ರಿಯ ಈ ಸಂದರ್ಭದಲ್ಲಿ ಒಂದಿಷ್ಟು.

|
Google Oneindia Kannada News

ಬೆಂಗಳೂರು, ಫೆಬ್ರವರಿ 24: ಶಿವಪೂಜೆಗೆ ಪವಿತ್ರವೆಂದಿನಿಸಿರುವ, ಮಹತ್ವವಾಗಿರುವ ಈ ಶಿವಲಿಂಗ ಪುಷ್ಪದ ಮರ ಯಾವುದಾದರೂ ಶಿವ ಮಂದಿರದ ಬಳಿಯಿದ್ದಿದ್ದರೆ ಇಷ್ಟು ಹೊತ್ತಿಗೆ ಅದು ಅದೆಷ್ಟು ಲಕ್ಷ ಜನರಿಂದ ನಿತ್ಯ ಪೂಜೆಗೊಳಗಾಗುತ್ತಿತ್ತೋ? ಅದೆಷ್ಟು ಜನರು ಈ ಮರಕ್ಕೆ ಪ್ರತಿನಿತ್ಯ ಪ್ರದಕ್ಷಿಣೆ ಹಾಕುತ್ತಿದ್ದರೋ ಗೊತ್ತಿಲ್ಲ.

ಆದರೆ, ಅದೆಲ್ಲಾ ಸಂಭ್ರಮಗಳಿಂದ ದೂರ ಉಳಿದಿರುವ ಈ ಪವಿತ್ರವಾದ ನಾಗಲಿಂಗ ಪುಷ್ಪದ ಮರವೊಂದು ಬೆಂಗಳೂರೆಂಬ ಕಾಂಕ್ರೀಟ್ ಕಾಡಿನ ಹೃದಯ ಭಾಗದಲ್ಲಿದ್ದರೂ ಕಂಡೂ ಕಾಣದಂತಾಗಿದೆ.

ನಿತ್ಯ ಪೂಜೆಗೊಳಗಾಗಬೇಕಿದ್ದ ಈ ಮರಕ್ಕಿಂದು ದಿನನಿತ್ಯದ ಟ್ರಾಫಿಕ್ ದಟ್ಟಣೆಯಿಂದ ಹೊರಬರುವ ಹೊಗೆಯೇ ಧೂಪ. ನಿತ್ಯ ನಾನಾ ಹೂ ಹಾರಗಳಿಂದ ಅಂದವಾಗಿ ಕಾಣಬೇಕಿದ್ದ ಈ ಮರಕ್ಕೆ ಇಂದು ಕೇಬಲ್ ವೈರುಗಳೇ ಹಾರ.

ಜನಸಂಖ್ಯಾ ಸ್ಫೋಟ ಹಾಗೂ ನಗರೀಕರಣದ ಮಾಯಾಜಾಲಕ್ಕೆ ಸಿಲುಕಿದ ಈ ಧಾರ್ಮಿಕ ಹೆಗ್ಗುರುತು ತನ್ನ ಮಹತ್ವವನ್ನೇ ಕಳೆದುಕೊಂಡಿದೆ.

ನಗರದ ಹೃದಯ ಭಾಗದಲ್ಲಿ

ನಗರದ ಹೃದಯ ಭಾಗದಲ್ಲಿ

ಬೆಂಗಳೂರಿನ ಹೃದಯ ಭಾಗವಾದ ವಿಧಾನಸೌಧದ ಹತ್ತಿರವೇ ಇರುವ ಇನ್ ಫ್ಯಾಂಟ್ರಿ ರೋಡಿನ ಇಂಡಿಯನ್ಸ್ ಎಕ್ಸ್ ಪ್ರೆಸ್ ಕಚೇರಿಯ ಸರ್ಕಲ್ ನಿಂದ ಹಳೇ ಕಮೀಷನರ್ ಆಫೀಸ್ ಮಾರ್ಗ ಕ್ಕೆ ಹೋಗುವ ದಾರಿಯ ಬಲಬದಿಯ ಫುಟ್ಬಾತ್ ನಲ್ಲೇ ಇದೆ ಈ ಮರ. ರಿಕೋ ಇನ್ನೋವೇಷನ್ಸ್ ಪ್ರೈವೇಟ್ ಲಿಮಿಟೆಡ್ ನ ಕಚೇರಿಯ ಕಾಂಪೌಂಡ್ ಗೋಡೆಗೆ ಆತುಕೊಂಡೇ ಇದೆ ಈ ಮರ.

ಬಲ್ಲವರೇ ಬಲ್ಲರು ಹೂವಿನ ಬೆಲೆ

ಬಲ್ಲವರೇ ಬಲ್ಲರು ಹೂವಿನ ಬೆಲೆ

ಶಿವಪೂಜೆಗೆ ವಿಶೇಷ ಎನಿಸುವ ಶಿವಲಿಂಗ ಪುಷ್ಪಗಳನ್ನು ಈ ಮರದಲ್ಲಿ ನಾವು ಹೇರಳವಾಗಿ ಕಾಣಬಹುದು. ಆದರಿಲ್ಲಿ, ಈ ಹೂವುಗಳಿಗೆ ಬೆಲೆಯಿಲ್ಲ. ಇಲ್ಲಿ ಸುತ್ತಲೂ ಖಾಸಗಿ ಕಂಪನಿಗಳು, ಸರ್ಕಾರಿ ಕಚೇರಿಗಳೇ ಇರುವುದರಿಂದ ಈ ಹೂವುಗಳನ್ನು ಬಹುತೇಕರು ಅಷ್ಟಾಗಿ ಗಮನಿಸರು. ಹಾಗೆ ಫುಟ್ಬಾತ್ ಗೆ ಬೀಳುವ ಈ ಹೂವುಗಳ ಅಮೂಲ್ಯತೆಯನ್ನು ಬಲ್ಲವರು ಇವನ್ನು ಎತ್ತಿ ಕಣ್ಣಿಗೊತ್ತಿಕೊಂಡು ತಮ್ಮ ಜತೆ ಕೊಂಡೊಯ್ಯುತ್ತಾರೆ. ಆದರೆ, ಇವುಗಳ ಬೆಲೆ ಗೊತ್ತಿಲ್ಲದವರು ಈ ಹೂವುಗಳನ್ನು ತುಳಿದುಕೊಂಡೇ ಸಾಗುತ್ತಾರೆ.

ಕೇಬಲ್ ವೈರ್

ಕೇಬಲ್ ವೈರ್

ಈ ಮರದ ಅಸ್ತಿತ್ವಕ್ಕೆ ಧಕ್ಕೆಯೊದಗುವಂತೆ ಪಕ್ಕದಲ್ಲಿರುವ ರಿಕೋ ಇನ್ನೋವೇಷನ್ಸ್ ಕಂಪನಿಯ ಕಾಂಪೌಂಡ್ ಗೋಡೆಯನ್ನು ಕಟ್ಟಲಾಗಿದೆ. ಈ ಗೋಡೆಯು ಈ ಮರದ ಕಾಂಡದ ಮಧ್ಯದಲ್ಲೇ ಹಾದು ಹೋಗಿರುವುದನ್ನು ನೋಡಿದರೆ ಮನಸ್ಸಿಗೆ ಖೇದವಾಗದಿರದು. ಇನ್ನು, ಈ ಮರಕ್ಕೆ ಟೆಲಿಫೋನ್ ಹಾಗೂ ಕೇಬಲ ಟಿವಿ ಕೇಬಲ್ ಗಳೂ ಸುತ್ತಿಕೊಂಡು ಮರವನ್ನು ಆಧಾರ ಸ್ತಂಭದಂತೆ ಬಳಸಿಕೊಂಡಿವೆ.

ಪರಿತಪಿಸುವ ಶ್ರೀ ಸಾಮಾನ್ಯ

ಪರಿತಪಿಸುವ ಶ್ರೀ ಸಾಮಾನ್ಯ

ಆಧುನಿಕತೆಯ ಮೆರುಗಲ್ಲಿ, ನಗರೀಕರಣದ ಗದ್ದಲದಲ್ಲಿ ಹೀಗೊಂದು ಮರ ತನ್ನ ಅಸ್ತಿತ್ವಕ್ಕೆ ಸಿಗಬೇಕಾದ ಮಾನ್ಯತೆ ಸಿಗದೇ ಅನಾಥ ಪ್ರಜ್ಞೆಯೊಂದಿಗೆ ಜೀವಿಸುತ್ತಿದೆ. ಆದರೆ, ಈ ಮರದ ಬಗ್ಗೆ ಅನುಕಂಪ ತೋರುವರೂ ಇದ್ದಾರೆ. ಈ ಹಾದಿಯಲ್ಲಿ ಓಡಾಡುವ ಕೆಲವಾರು ಆಸ್ತಿಕರು ಈ ಮರ ಕಂಡ ಕೂಡಲೇ ದೂರದಿಂದಲೇ ನಮಸ್ಕರಿಸುತ್ತಾರೆ. ಮತ್ತೂ ಕೆಲವರು ಈ ಮರ ಇಲ್ಲಿದ್ದು ಪ್ರಯೋಜನಕ್ಕೆ ಬಾರದಾಗಿದೆ ಎನ್ನುವವರೂ ಇದ್ದಾರೆ. ಆದರೆ, ಎಲ್ಲರೂ ಅಸಹಾಯಕರು.

ಮೂಲತಃ ಅಮೆರಿಕದ ಮರವಿದು!

ಮೂಲತಃ ಅಮೆರಿಕದ ಮರವಿದು!

ನಾಗಲಿಂಗ ಪುಷ್ಪ ಮರಕ್ಕೆ ಇಂಗ್ಲೀಷ್ ನಲ್ಲಿ Cannon-Ball Tree ಎಂದು ಕರೆಯುತ್ತಾರೆ. ಹೆಸರೇ ಸೂಚಿಸುವಂತೆ ನಾಗಲಿಂಗಾಕಾರದ ಹೂ ಬಿಡುವ ಮರ. ವೈಜ್ಞಾನಿಕವಾಗಿ ಇದು ಲೆಸಿತಿಡೇಸಿ (Lecythidaceace)ಕುಟುಂಬಕ್ಕೆ ಸೇರಿದ್ದು, ಈ ನಿರ್ದಿಷ್ಟ ಸಸ್ಯಪ್ರಕಾರಕ್ಕೆ ಕೌರೌಪಿಟ ಜಿಯನೆಂನ್ಸಿಸ್ (Couroupita guianensis)ಎಂಬ ಹೆಸರಿದೆ. ಮೂಲತಃ ಇದು ದಕ್ಷಿಣ ಅಮೇರಿಕ ಹಾಗೂ ಕೆರೆಬಿಯನ್ ಪ್ರದೇಶದ ಮರ. ತಮಿಳುಭಾಷೆಯಲ್ಲಿ ಇದಕ್ಕೆ 'ಶಿವಲಿಂಗ ಪುಷ್ಪ' ಎಂದೂ ತೆಲುಗುಭಾಷೆಯಲ್ಲಿ 'ಮಲ್ಲಿಕಾರ್ಜುನ ಪುಷ್ಪ' ಎಂಬ ಹೆಸರೂ ಇದೆ. ಕನ್ನಡದಲ್ಲಿ ನಾಗಲಿಂಗ ಪುಷ್ಪವೆಂದು ಹೆಸರು.

English summary
A Nagalinga Pushpa Tree (Scientific name:Couroupita guianensis) which is in heart of the bangalore, has lost its importance as it is surrounded by concrete buildings, cable wires, traffic dust etc. The flowers of Nagalinga pushpa tree are generally considered as 'sanctum' for the shiva pooje in Hindu religion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X