Darshan Case: ಬೇರೆಯವರ ಹೆಸರಿನ 'ಸಿಮ್' ಬಳಸುತ್ತಿದ್ದ ದರ್ಶನ್ & ಪವಿತ್ರಾ: ಸಿಕ್ರೆಟ್ ರಿವೀಲ್, ಕೆಲವರಿಗೆ ನೋಟಿಸ್

ಬೆಂಗಳೂರು, ಜುಲೈ 05: ರೇಣುಕಾಸ್ವಾಮಿ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಮತ್ತು ಗ್ಯಾಂಗ್‌ನ ಸೆರೆವಾಸ ಮತ್ತೆ ಎರಡು ವಾರ ವಿಸ್ತರಣೆ ಆಗಿದೆ. ಇತ್ತ ಕೊಲೆ ಜಾಡು ಬೆನ್ನತ್ತಿರುವ ಪೊಲೀಸರು ಎಲ್ಲ ಆರೋಪಿಗಳ ಮೊಬೈಲ್ ಡಿವೈಸ್ ಜಪ್ತಿ ಮಾಡುತ್ತಿದ್ದಾರೆ. ಈ ವೇಳೆ ದರ್ಶನ್ ಮತ್ತು ಪವಿತ್ರಾ ಗೌಡ ಬಗೆಗಿನ ಹಲವು ಸಿಕ್ರೇಟ್‌ಗಳು ರಿವೀಲ್ ಆಗಿವೆ.

ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವರು ಬೇರೆಯವರ ಹೆಸರಿನಲ್ಲಿದ್ದ ಸಿಮ್ ಕಾರ್ಡ್‌ ಬಳಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಲಿದೆ.

Murder Case Actor Darshan Pavitra Gowda 7 Accused Used Fake SIM Cards Police Issued Notices

ಆರ್‌ಆರ್ ನಗರದ ಶೆಡ್ ನಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಬಗ್ಗೆ ಪಿನ್ ಟು ಪಿನ್ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳ ಮೊಬೈಲ್ ಜಪ್ತಿ ಮಾಡಿರುವ ಪೋಲಿಸ್ ಫೋನ್ ಮೂಲಕ ಅನೇಕ ಮಾಹಿತಿಗಳನ್ನು ಕಲೆ ಸಂಗ್ರಹಿಸಿದ್ದಾರೆ. ಅಲ್ಲದೇ ಸಿಕ್ಕ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದ್ದಾರೆ.

ದರ್ಶನ್ ಸಹವಾಸ, ಸಿಮ್ ಹೆಸರಿನವರಿಗೆ ನೋಟಿಸ್

ಈ ನಡುವೆ ದರ್ಶನ್ ಹಾಗೂ ಪವಿತ್ರಾ ಗೌಡ ಬಳಸಿರುವ ಸಿಮ್ ನೈಜ ಹೆಸರು ಯಾರದ್ದ ಎಂಬುದನ್ನು ಪತ್ತೆ ಮಾಡಿದ್ದು, ಅವರಿಗೆಲ್ಲ ನೋಟಿಸ್ ಜಾರಿ ಮಾಡಿದ್ದಾರೆ.

Murder Case Actor Darshan Pavitra Gowda 7 Accused Used Fake SIM Cards Police Issued Notices

ದರ್ಶನ್ ಬೆಂಗಳೂರಿನ ಪ್ರತಿಷ್ಠಿತ ಶಾಸಕರ ಕಾರು ಚಾಲಕನ ಹೆಸರಿನಲ್ಲಿ ಸಿಮ್ ಪಡೆದಿರುವುದು ಗೊತ್ತಾಗಿದೆ. ಈ ಸಂಬಂದ ಉಪ ಮೇಯರ್ ಮೋಹನ್ ರಾಜ್ ನೋಟೀಸ್ ನೋಟೀಸ್ ಜಾರಿ ಮಾಡಿದ್ದಾರೆ. ಮೊಬೈಲ್ ಸಿಮ್ ವಿಚಾರವಾಗಿ ಪವಿತ್ರಾ ಸ್ನೇಹಿತೆ ಸಮತಾಗೂ ನೋಟೀಸ್ ಜಾರಿ ಮಾಡಲಾಗಿದೆ.

ಬೇರೆಯವರ ಸಿಮ್ ಬಳಸುತ್ತಿದ್ದ ದರ್ಶನ್-ಪವಿತ್ರಾ ಸೇರಿ 7 ಜನ

ಹೇಮಂತ್ ಎಂಬ ಹೆಸರಿನಲ್ಲಿದ್ದ ಮೊಬೈಲ್ ಸಿಮ್ ಅನ್ನು ದರ್ಶನ್ ಬಳಸುತ್ತಿದ್ದರು. ನಟ ದರ್ಶನ್ ಗ್ಯಾಂಗ್‌ನ ಏಳು ಜನ ಬೇರೆಯವರ ಹೆಸರಿನಲ್ಲಿ ಸಿಮ್ ಬಳಕೆ ಮಾಡುತ್ತಿರುವುದು ಪೊಲೀಸರ ತನಿಖೆಯಿಂದ ಸಾಬೀತಾಗಿದೆ.

ಇನ್ನೂ ಚಿತ್ರದುರ್ಗದ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಪ್ರಮುಖರಾದ ನಂದೀಶ್ ಎಂಬುವವರು ಹೇಮಂತ್ ಎಂಬಾತನ ಹೆಸರಿನಲ್ಲಿ ಹಾಗೂ ಪ್ರದೋಶ್ ಎಂಬಾತ ಸುಪರ್ಣ ಹೆಸರಿನಲ್ಲಿ ಸಿಮ್ ಬಳಕೆ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಿಮ್ ಮಾಲೀಕರಿಗೆ ನೋಟಿಸ್, ಶೀಘ್ರವೇ ವಿಚಾರಣೆ?

ಹಾಗಾದರೆ ಬೇರೆಯವರ ಹೆಸರಿನ ಸಿಮ್ ಬಳಕೆ ಅಗತ್ಯವೇನಿತ್ತು? ಯಾವ ಉದ್ದೇಶದಿಂದ ಈ ಡಿ ಗ್ಯಾಂಗ್ ಬೇರೆಯವರ ಹೆಸರಿನ ಸಿಮ್ ಬಳಸಿ, ಇವರ ಪ್ಲಾನ್ ಏನಾಗಿತ್ತು? ಎಂಬೆಲ್ಲ ಆಯಾಮಗಳಲ್ಲಿ ತನಿಖೆ ಸಾಗುತ್ತಿದೆ ಎಂದು ತಿಳಿದು ಬಂದಿದೆ.

ಸದ್ಯ ಯಾರಿಗೆಲ್ಲ ನೋಟಿಸ್ ಜಾರಿ ಮಾಡಿದ್ದಾರೋ ಅವರನ್ನು ಕರೆಯಿಸಿ ನೀಡಿ ವಿಚಾರಣೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ. ಈ ವೇಳೆ ಬೇರೆಯವರ ಸಿಮ್ ಬಳಕೆ ಮಾಡುತ್ತಿದ್ದ ನಟ ದರ್ಶನ್, ಪವಿತ್ರಗೌಡ, ಪ್ರದೂಷ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಕುರಿತು ಹಲವು ಪ್ರಶ್ನೆಗಳು ಪೊಲೀಸರು ಅವರ ಮುಂದಿಡಲಿದ್ದಾರೆ.

ಮನೋಜ್ ಹೆಸರಿನಲ್ಲಿದ್ದ ಸಿಮ್ ಪವಿತ್ರಾ ಬಳಕೆ

ನಟ ದರ್ಶನ್ ಅವರು ಸಿಪಿ ಹೇಮಂತ್, ಬಿನ್. ಎನ್ ಚಂದನ್ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬಳಸುತ್ತಿದ್ದರು ಎನ್ನಲಾಗುತ್ತಿದೆ. ಮನೋಜ್ ಹೆಸರಿನಲ್ಲಿದ್ದ ಸಿಮ್ ಕಾರ್ಡ್ ನನ್ನನ್ನು ನಟಿ ಪವಿತ್ರಾ ಗೌಡ ಬಳಸುತ್ತಿದ್ದಾರೆ ಎನ್ನಲಾಗ್ತಿದೆ.

ಸದ್ಯ ದರ್ಶನ್ ಆಂಡ್ ಗ್ಯಾಂಗ್ ಅನ್ನು ಗುರುವಾರ (ಜುಲೈ 4) ರಂದು ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ಮತ್ತೆ ಎಲ್ಲ ಆರೋಪಿಗಳಿಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+