ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮುನಾವರ್ ಫಾರುಕಿ ಕಾರ್ಯಕ್ರಮ ಮತ್ತೆ ರದ್ದು!

|
Google Oneindia Kannada News

ಬೆಂಗಳೂರು, ಆಗಸ್ಟ್‌ 20: ಶನಿವಾರ ನಡೆಯಬೇಕಿದ್ದ ಸ್ಟಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಅವರ 'ಡೋಂಗ್ರಿ ಟು ನೋವೇರ್' ಶೋಗೆ ಬೆಂಗಳೂರು ಪೊಲೀಸರು ಮತ್ತೊಮ್ಮೆ ಅನುಮತಿ ನಿರಾಕರಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಆಯೋಜಿಸಲು ಆಯೋಜಕರು ಅನುಮತಿ ಪಡೆಯದ ಕಾರಣ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೊದಲು ಜೈ ಶ್ರೀರಾಮ ಸೇನೆಯು ಹಾಸ್ಯನಟ ಮತ್ತು ಸಂಘಟಕರ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತ ಸಿ ಹೆಚ್ ಪ್ರತಾಪ್ ರೆಡ್ಡಿ ಅವರಿಗೆ ದೂರು ನೀಡಿತ್ತು.

ತನ್ನ ಶೋಗಳಲ್ಲಿ ಭಗವಾನ್ ರಾಮ ಮತ್ತು ಸೀತಾ ದೇವಿಯ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಫಾರುಕಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಸಂಘಟನೆಯು ತನ್ನ ದೂರಿನಲ್ಲಿ ಆರೋಪಿಸಿದೆ. ನವೆಂಬರ್ 2021ರಲ್ಲಿ ಇಲ್ಲಿ ಪ್ರದರ್ಶನ ನೀಡಲು ಹಾಸ್ಯನಟನಿಗೆ ಅನುಮತಿ ನಿರಾಕರಿಸಲಾಗಿತ್ತು.

ಸಖತ್ ಜೋಕ್ಸ್: ನನ್ ಸಿನಿಮಾದಲ್ಲಿ ನಟಿಸ್ತೀಯಾ? ಹೆಂಡ್ತಿಗೆ ಗಂಡ ಕೊಟ್ಟ ಆಫರ್!ಸಖತ್ ಜೋಕ್ಸ್: ನನ್ ಸಿನಿಮಾದಲ್ಲಿ ನಟಿಸ್ತೀಯಾ? ಹೆಂಡ್ತಿಗೆ ಗಂಡ ಕೊಟ್ಟ ಆಫರ್!

ಇದೇ ಬೆಳವಣಿಗೆಯಲ್ಲಿ ಹೈದರಾಬಾದ್‌ನಲ್ಲಿ ಶನಿವಾರ ನಡೆಯಲಿರುವ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಮುನಾವರ್ ಫರುಕಿ ಅವರ ಕಾರ್ಯಕ್ರಮದ ಮುನ್ನ ಪೊಲೀಸರನ್ನು ಬಲವಾಗಿ ನಿಯೋಜಿಸಲಾಗಿದೆ. ಇಲ್ಲಿನ ಮಾದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೈಟೆಕ್ ಸಿಟಿಯ ಶಿಲ್ಪಕಲಾದಲ್ಲಿ ಪ್ರದರ್ಶನಕ್ಕೆ ಟಿಕೆಟ್ ತಂದಿದ್ದ ಜನರನ್ನು ಬಿಗಿ ಭದ್ರತೆಯ ನಡುವೆ ಸ್ಥಳಕ್ಕೆ ಕರೆತರಲಾಯಿತು. ಜನರು ತಮ್ಮ ಫೋನ್ ಮತ್ತು ವ್ಯಾಲೆಟ್‌ಗಳನ್ನು ಸ್ಥಳದೊಳಗೆ ತರಬೇಡಿ ಎಂದು ಹೇಳಲಾಯಿತು.

 ಹಿಂದೂ ದೇವರುಗಳನ್ನು ಅಪಹಾಸ್ಯ ಕಾರಣ

ಹಿಂದೂ ದೇವರುಗಳನ್ನು ಅಪಹಾಸ್ಯ ಕಾರಣ

ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಅವರು ಫಾರೂಕಿ ಅವರ ಕಾರ್ಯಕ್ರಮವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು. ಶುಕ್ರವಾರ ಜನಗಾಂವ್ ಜಿಲ್ಲೆಯ ಖಿಲಾ ಶಾಪುರ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಫಾರುಕಿ ಅವರು ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡಿದ ಕಾರಣ ಅವರನ್ನು ಬಹಿಷ್ಕರಿಸಬೇಕು ಎಂದು ಅವರು ಹೇಳಿದ್ದರು.

 ನಾವು ಮುನಾವರ್‌ ಅವರನ್ನು ಬಹಿಷ್ಕರಿಸುತ್ತೇವೆ

ನಾವು ಮುನಾವರ್‌ ಅವರನ್ನು ಬಹಿಷ್ಕರಿಸುತ್ತೇವೆ

"ನಾವೆಲ್ಲರೂ ಸೀತಾದೇವಿಯನ್ನು ಪೂಜಿಸುವೆವು, ನೀರು, ಗಾಳಿ, ಬೆಂಕಿ, ಭೂಮಿ ಎಲ್ಲೆಲ್ಲೂ ಆಕೆಯನ್ನು ಕಾಣುತ್ತೇವೆ. ನಮ್ಮ ಸೀತಾದೇವಿ ಹಾಗೂ ನಮ್ಮ ಪ್ರಭು ರಾಮನನ್ನು ಅವರು ಅವಮಾನಿಸಿದ್ದಾರೆ. ಟಿಆರ್‌ಎಸ್ ಪಕ್ಷದವರು ಅವರನ್ನು ಹೈದ್ರಾಬಾದ್‌ಗೆ ಮುಖ್ಯ ಅತಿಥಿಯಾಗಿ ಕರೆದಿದ್ದಾರೆ. ನಮಗೆ ಅವರ ಅಗತ್ಯವಿಲ್ಲ, ನಾವು ಅವರನ್ನು ಬಹಿಷ್ಕರಿಸುತ್ತೇವೆ ಎಂದು ಬಂಡಿ ಸಂಜಯ್ ಕುಮಾರ್ ಹೇಳಿದರು.

 ಕಲಾವಿದನ ವಿರುದ್ಧ ಪ್ರತಿಭಟನೆಗೆ ಯೋಜನೆ

ಕಲಾವಿದನ ವಿರುದ್ಧ ಪ್ರತಿಭಟನೆಗೆ ಯೋಜನೆ

ಮೂಲಗಳ ಪ್ರಕಾರ, ಭಾರತೀಯ ಜನತಾ ಪಕ್ಷದ ಹಲವಾರು ಕಾರ್ಯಕರ್ತರು ಮತ್ತು ಮುಖಂಡರು ಕಾರ್ಯಕ್ರಮಕ್ಕಾಗಿ ಆನ್‌ಲೈನ್ ಟಿಕೆಟ್‌ಗಳನ್ನು ಖರೀದಿಸಿದ್ದು, ಇಲ್ಲಿ ಸ್ಟ್ಯಾಂಡ್ ಅಪ್ ಕಲಾವಿದನ ವಿರುದ್ಧ ಪ್ರತಿಭಟನೆ ನಡೆಸಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಮೊನ್ನೆ ಶುಕ್ರವಾರ ಬಿಜೆಪಿ ಪಕ್ಷದ ಶಾಸಕ ರಾಜಾ ಸಿಂಗ್ ಅವರು ಹೈಟೆಕ್ ಸಿಟಿಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಲು ಪ್ರಯತ್ನಿಸಿದಾಗ ಅವರು ಬಂಧನಕ್ಕೆ ಒಳಗಾಗಿದ್ದರು.

 ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ

ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ

ಮಾದಾಪುರ ಇನ್ಸ್‌ಪೆಕ್ಟರ್ ರವೀಂದ್ರ ಪ್ರಸಾದ್ ಪ್ರಕಾರ, ಫರೂಕಿ ಹೈದರಾಬಾದ್‌ನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದಾರೆ. ಬಿಜೆಪಿ ಶಾಸಕಿ ಮಾಲಿನಿ ಲಕ್ಷ್ಮಣ್ ಸಿಂಗ್ ಗೌಡ್ ಅವರ ಪುತ್ರ ಏಕಲವ್ಯ ಸಿಂಗ್ ಗೌಡ್ ಅವರು ಮುನಾವರ್ ಅವರ ಹಾಸ್ಯ ಕಾರ್ಯಕ್ರಮದ ವೇಳೆ ಹಿಂದೂ ದೇವತೆಗಳು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನ ಮೇರೆಗೆ ಮುನಾವರ್ ಮತ್ತು ಇತರ ನಾಲ್ವರನ್ನು ಮಧ್ಯಪ್ರದೇಶ ಪೊಲೀಸರು ಜನವರಿ 1 ಹೊಸ ವರ್ಷದ ದಿನದಂದು ಇಂದೋರ್‌ನಲ್ಲಿರುವ ಕೆಫೆ ಬಳಿ ಬಂಧಿಸಿದ್ದರು. ಬಳಿಕ ಮುನಾವರ್‌ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ನಂತರ ಫರೂಕಿ ಟೀಕೆಗಳನ್ನು ಎದುರಿಸಿದರು ಮತ್ತು ಹಲವಾರು ಸ್ಥಳಗಳಲ್ಲಿ ಅವರ ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು.

English summary
Stand-up comedian Munawar Farooqui's Dongri to Nowhere show, which was scheduled to take place on Saturday, has again been denied permission by the Bengaluru police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X