ಬೆಂಗಳೂರಿನ 100 ವರ್ಷಗಳ ಹಳೆಯ ಮಾವಳ್ಳಿ ಟಿಫಿನ್ ರೂಮ್ಸ್ ರುಚಿಗೆ ಮನಸೋತ ಆಸ್ಟ್ರೇಲಿಯಾ ಸಚಿವ

Mavalli Tiffin Rooms: ಕರುನಾಡು ಕರ್ನಾಟಕ ರಾಜ್ಯದ ಸ್ವಾದಿಷ್ಟ ಮಸಾಲೆ ದೋಸೆ, ವಡೆ ಮತ್ತು ಘಮಘಮಿಸುವ ಫಿಲ್ಟರ್ ಕಾಫಿಯ ಚಟ ಈಗ ಆಸ್ಟ್ರೇಲಿಯನ್ನರಿಗೂ ತಗುಲುವ ಸಮೀಪದಲ್ಲಿದೆ. ನೂರು ವರ್ಷಗಳ ಸುದೀರ್ಘ ಇತಿಹಾಸವಿರುವ ಬೆಂಗಳೂರಿನ ಪ್ರಸಿದ್ಧ 'ಮಾವಳ್ಳಿ ಟಿಫಿನ್ ರೂಮ್ಸ್' ತನ್ನ ವಿಶ್ವಪ್ರಸಿದ್ಧ ದಕ್ಷಿಣ ಭಾರತೀಯ ಖಾದ್ಯಗಳ ಮೂಲಕ ಸಿಡ್ನಿಗೆ ಗ್ರ್ಯಾಂಡ್‌ ಎಂಟ್ರಿ ಕೊಡಲು ಸಜ್ಜಾಗಿದೆ. ಹಾಗಾದ್ರೆ ಇದು ಅಲ್ಲಿಯವರೆಗೂ ತನ್ನ ವ್ಯಾಪ್ತಿಯನ್ನ ವಿಸ್ತರಿಸಲು ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೆಂಗಳೂರಿನ ಪ್ರಸಿದ್ಧ ಬ್ರ್ಯಾಂಡ್ ಹಾಗೂ ನೂರಕ್ಕೂ ಹೆಚ್ಚು ವರ್ಷ ಇತಿಹಾಸ ಹೊಂದಿರುವ 'ಮಾವಳ್ಳಿ ಟಿಫಿನ್ ರೂಮ್ಸ್' (MTR) ತನ್ನ ಜಾಲವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಣೆ ಮಾಡಲು ಮುಂದಾಗಿದೆ. ದೊಸೆ, ರವೆ ಇಡ್ಲಿ ಹಾಗೂ ಫಿಲ್ಟರ್ ಕಾಫಿಗೆ ಹೆಸರಾಗಿರುವ ಈ ಸಂಸ್ಥೆಯು ಈಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ತನ್ನ ನೂತನ ಫ್ರಾಂಚೈಸಿ ಶೋರೂಮ್ ತೆರೆಯಲು ಮುಂದಾಗಿದೆ.

MTR Expands to Australia Bengaluru s Iconic Mavalli Tiffin Rooms Opens New Franchise in Sydney

ಆಸ್ಟ್ರೇಲಿಯಾ ಸಚಿವರ ಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್

ಆಸ್ಟ್ರೇಲಿಯಾದ ಪೌರತ್ವ, ಕಸ್ಟಮ್ಸ್ ಮತ್ತು ಬಹುಸಂಸ್ಕೃತಿ ವ್ಯವಹಾರಗಳ ಸಹಾಯಕ ಸಚಿವರಾದ ಜೂಲಿಯನ್ ಹಿಲ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾಗ ಎಂಟಿಆರ್‌ಗೆ ತೆರಳಿ ಮಸಾಲೆ ದೋಸೆ, ವಡೆ ಹಾಗೂ ಫಿಲ್ಟರ್ ಕಾಫಿ ಸವಿದಿದ್ದರು. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಅವರು, 'ಎಂಟಿಆರ್ ಆಸ್ಟ್ರೇಲಿಯಾಗೆ ಬರುತ್ತಿದೆ. 100 ವರ್ಷಕ್ಕೂ ಹೆಚ್ಚು ಹಳೆಯದಾದ ಬೆಂಗಳೂರಿನ ಐತಿಹಾಸಿಕ ಎಂಟಿಆರ್ ರೆಸ್ಟೋರೆಂಟ್ ಸಿಡ್ನಿಯಲ್ಲಿ ಫ್ರಾಂಚೈಸಿ ತೆರೆಯುತ್ತಿದೆ. ನಾನು ತಿಂದ ಅತ್ಯುತ್ತಮ ದೋಸೆ ಇದಾಗಿದೆ,' ಎಂದು ಬರೆದುಕೊಂಡಿದ್ದಾರೆ.

ಶತಮಾನದ ಇತಿಹಾಸ ಇರುವ ಎಂಟಿಆರ್

ಎಂಟಿಆರ್‌ನ ಪ್ರಯಾಣ 1924ರಲ್ಲಿ ಲಾಲ್‌ಬಾಗ್ ಫೋರ್ಟ್ ರಸ್ತೆಯಲ್ಲಿ 'ಬ್ರಾಹ್ಮಿನ್ಸ್ ಕಾಫಿ ಕ್ಲಬ್' ಹೆಸರಿನಲ್ಲಿ ಆರಂಭ ಆಯಿತು. ಗಣಪಯ್ಯ ಮಯ್ಯ ಹಾಗೂ ಪರಮೇಶ್ವರ ಮಯ್ಯ ಸಹೋದರರು ಆರಂಭಿಸಿದ ಈ ಸಂಸ್ಥೆಗೆ ನಂತರ ವೈ.ಎನ್.ಮಯ್ಯ ಅವರು ಹೊಸ ರೂಪುರೇಷೆ ನೀಡಿ 'ಮಾವಳ್ಳಿ ಟಿಫಿನ್ ರೂಮ್ಸ್' ಎಂದು ಮರುನಾಮಕರಣ ಮಾಡಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಅಕ್ಕಿಯ ಅಭಾವ ಎದುರಾದಾಗ ಅಕ್ಕಿಯ ಬದಲಾಗಿ ರವೆಯನ್ನು ಬಳಸಿ ರವೆ ಇಡ್ಲಿಯನ್ನು ಸಂಶೋಧಿಸಿದ್ದು ಇದೇ ಎಂಟಿಆರ್ ಎಂಬುದು ವಿಶೇಷ.

ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಎಂಟಿಆರ್

ಪ್ರಸ್ತುತ ಮೂರನೇ ತಲೆಮಾರಿನ ನಾಯಕತ್ವದಲ್ಲಿ ಬೆಳೆಯುತ್ತಿರುವ ಎಂಟಿಆರ್ ಈಗಾಗಲೇ ಭಾರತದ ಹಲವು ನಗರಗಳಲ್ಲಿ ಅಷ್ಟೇ ಅಲ್ಲದೆ, ಸಿಂಗಾಪುರ್, ದುಬೈ, ಕೌಲಾಲಂಪುರ್, ಬ್ಯಾಂಕಾಕ್, ಸ್ಯಾಟಲ್, ಟೊರೊಂಟೋ, ಬ್ರಿಸ್ಟಲ್ ಸೇರಿದಂತೆ ಜಗತ್ತಿನ ಪ್ರಮುಖ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. ಇದೀಗ ಆ ಸಾಲಿಗೆ ಸಿಡ್ನಿ ಸೇರ್ಪಡೆಯಾಗುತ್ತಿದ್ದು, ಆಸ್ಟ್ರೇಲಿಯಾದಲ್ಲಿರುವ ಭಾರತೀಯರು ಹಾಗೂ ಸ್ಥಳೀಯ ಆಹಾರಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ಇದೀಗ ಎಂಟಿಆರ್‌ ತನ್ನ ವ್ಯಾಪ್ತಿಯನ್ನು ಸಿಡ್ನಿವರೆಗೂ ವಿಸ್ತರಿಸಿರುವುದೇ ಕರ್ನಾಟಕಕ್ಕೆ ಹೆಮ್ಮೆಯ ವಿಚಾರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+