ದಿನೇಶ್ ಗುಂಡೂರಾವ್-ಸಿದ್ದರಾಮಯ್ಯ ಬಗ್ಗೆ ಎಂಟಿಬಿ ತೀವ್ರ ವಾಗ್ದಾಳಿ

ಬೆಂಗಳೂರು, ಸೆಪ್ಟೆಂಬರ್ 28: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಅವರ ಚೇಲಾ ಹೌದು ನಾನು ಈ ಮಾತನ್ನು ಒಪ್ಪಿಕೊಳ್ಳುತ್ತೇನೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಶುಕ್ರವಾರವಷ್ಟೇ ಎಸ್‌ಟಿ ಸೋಮಶೇಖರ್ ಅವರು ದಿನೇಶ್ ಗುಂಡೂರಾವ್ ಸಿದ್ದರಾಮಯ್ಯರ ಚೇಲಾ ಎಂದು ಹೇಳಿಕೆಯನ್ನು ನೀಡಿದ್ದರು. ಇದನ್ನು ಸಮರ್ಥಿಸಿದ ಎಂಟಿಬಿ ನಾಗೃಆಜ್ ಹೌದು ಸೋಮಶೇಖರ್ ಅವರ ಮಾತನ್ನು ನಾನು ಬೆಂಬಲಿಸುತ್ತೇನೆ ಎಂದು ಎಂದರು.

ಇದರಿಂದ ಎಂಟಿಬಿ ನಾಗರಾಜ್‌ಗೆ ಕಾಂಗ್ರೆಸ್ ಮೇಲಿದ್ದ ಅಸಮಾಧಾನ ಬಹಿರಂಗಗೊಂಡಂತಾಗಿದೆ. ಕೇಂದ್ರ ಚುನಾವಣೆ ಆಯೋಗವೂ ಕರ್ನಾಟಕದ ಉಪಚುನಾವಣೆಗೆ ಮತ್ತೆ ದಿನಾಂಕ ಘೋಷಿಸಿದೆ.

MTB Nagaraj Supported ST Somashekhar Over Dinesh Gundurao Issue

ಮಾಜಿ ಸಂಸದ ಕೆ.ಎಚ್​​ ಮುನಿಯಪ್ಪರನ್ನು ಸೋಲಿಸಲು ಯಾರೆಲ್ಲಾ ಕೆಲಸ ಮಾಡಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಮಾಜಿ ಸ್ಪೀಕರ್​​ ರಮೇಶ್​​ ಕುಮಾರ್​​ ಅವರನ್ನು ಸೋಲಿಗೆ ಕಾರಣವಾಗಿದ್ದಾರೆ. ಹಾಗಾಗಿ ಮುನಿಯಪ್ಪರ ಮಾತುಗಳು ಅಕ್ಷರಶಃ ನಿಜ. ಈ ಕುರಿತಂತೆ ಕೆ.ಎಚ್​​ ಮುನಿಯಪ್ಪ ಕಾಂಗ್ರೆಸ್​​ ಹೈಕಮಾಂಡ್​​ಗೆ ದೂರು ನೀಡಿದ್ದರೂ, ರಮೇಶ್​​ ಕುಮಾರ್​​ ವಿರುದ್ಧ ಯಾಕೆ? ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.

ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್​​​, ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪರನ್ನು ಭೇಟಿಯಾಗಿದ್ದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತನಗೆ ಟಿಕೆಟ್​​ ನೀಡಬೇಕೆಂದು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಉಪಚುನಾವಣೆ ಮುಂದೂಡಿಕೆ ಮಾಡಿದ ಸುಪ್ರೀಂಕೋರ್ಟ್​​ ಆದೇಶವನ್ನು ಸ್ವಾಗತಿಸುತ್ತೇವೆ. ಈ ಬೆನ್ನಲ್ಲೇ ಮತ್ತೆ ಆಯೋಗ ಉಪಚುನಾವಣೆಗೆ ದಿನಾಂಕ ಘೋಷಿಸಿದೆ.

ಸುಪ್ರೀಂಕೋರ್ಟ್​ ತೀರ್ಪು ಬಂದ ಬಳಿಕ ಬಿಜೆಪಿ ಸೇರ್ಪಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಶರತ್​​ ಬಚ್ಚೇಗೌಡ ಸ್ಪರ್ಧೆ ಬಗ್ಗೆ ಬಿಜೆಪಿ ಹೈಕಮಾಂಡ್​​ ನಿರ್ಧರಿಸುತ್ತದೆ. ನಾನಂತೂ ಉಪಚುನಾವಣೆ ಎದುರಿಸುತ್ತೇವೆ ಎಂದರು. ಸಿದ್ದರಾಮಯ್ಯ ಮತ್ತು ಕೆ.ಎಚ್​​ ಮುನಿಯಪ್ಪ ಜಗಳ ಎಲ್ಲರಿಗೂ ಗೊತ್ತಿರುವ ಸಂಗತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+