ಮೈತ್ರಿ ಸರಕಾರ ಪರ ಕೆಲಸ, ಅಧಿಕಾರಿಗಳ ವಿರುದ್ಧ ರಾಜೀವ್ ದೂರು

ಬೆಂಗಳೂರು, ಮಾರ್ಚ್ 28: ಈ ಬಾರಿ ಲೋಕಸಭಾ ಚುನಾವಣೆಯು ರಾಜ್ಯದಲ್ಲಿ ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ನಡೆಯಲು ಕೆಲವು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಅವರನ್ನು ವರ್ಗಾವಣೆ ಮಾಡಬೇಕು ಎಂದು ಕೋರಿ ರಾಜ್ಯಸಭಾ ಸದಸ್ಯ- ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕ ರಾಜೀವ್ ಚಂದ್ರಶೇಖರ್ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅವರ ಜತೆಗೆ ಶಾಸಕ ಹಾಗೂ ಬಿಜೆಪಿ ವಕ್ತಾರರಾದ ಸುರೇಶ್ ಕುಮಾರ್ ಸಹ ಇದ್ದರು. ಚುನಾವಣೆಯ ವೇಳೆ ಪಕ್ಷಪಾತ ಮಾಡುತ್ತಿರುವ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ಬೆಂಗಳೂರು ಗ್ರಾಮಾಂತರ ಡಿಸಿ ಕರಿಗೌಡ, ಬೆಂಗಳೂರು ಡಿಸಿ ವಿಜಯಶಂಕರ್, ಹಾಸನ ಡೆಪ್ಯೂಟಿ ಕಮಿಷನರ್ ಆಲಂ ಪಾಷಾ, ಹಾಸನ ಎಸ್ಪಿ ಪ್ರಕಾಶ್ ಗೌಡ, ಮಂಡ್ಯ ಎಸ್ಪಿ,

ಅಬಕಾರಿ ಡಿಸಿಗಳಾದ ತುಮಕೂರು, ಮಂಡ್ಯ, ಹಾಸನ ಹಾಗೂ ರಾಮನಗರ, ಬೀದರ್ ಡಿಸಿ ಎಚ್.ಸಿ.ಮಹದೇವ್, ಬಲಭೀಮ ಕಾಂಬ್ಳೆ, ಕಲಬುರಗಿ ಡೆಪ್ಯೂಟಿ ಕಮಿಷನರ್ ವೆಂಕಟೇಶ್ ಕುಮಾರ್, ಕಲಬುರಗಿ ಎಸ್ಪಿ ಲಾಡಾ ಮಾರ್ಟಿನ್ ಮರ್ಬನ್ ಜಂಗ್, ಕಲಬುರಗಿ ಎಡಿಸಿ ಟಿ.ಯೋಗೇಶ್, ಬೆಂಗಳೂರು ಉತ್ತರ ಡಿಸಿಪಿ ಶಶಿಕಾಂತ್ ಮತ್ತು ಕಳೆದ ಮೂರು ತಿಂಗಳಲ್ಲಿ ವರ್ಗಾವಣೆ ಆಗಿರುವ ಈ ರೀತಿ ಪೊಲೀಸರು/ ಸರಕಾರಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

MP Rajeev Chandrasekhar submitted a memorandum to EC seeking transfer of biased official

ಮೇಲ್ಕಂಡ ಹಲವು ಅಧಿಕಾರಿಗಳು ತಮ್ಮ ಸ್ಥಾನಕ್ಕೆ ಚುನಾವಣೆ ಘೋಷಣೆಗೆ ಮುನ್ನ ಕಳೆದ ಎರಡು- ಮೂರು ತಿಂಗಳಲ್ಲಿ ವರ್ಗಾವಣೆ ಆದವರು. ಕೆಲವರಿಗೆ ರಾಜಕೀಯ ಪಕ್ಷಗಳ ಜತೆ ನಂಟಿದೆ ಎಂದು ಆರೋಪ ಮಾಡಲಾಗಿದೆ. ಜತೆಗೆ ಆಡಳಿತಾರೂಢ ಮೈತ್ರಿ ಸರಕಾರದ ಪರವಾಗಿ ಈ ಕಾರಣಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕೂಡ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+