78 ವರ್ಷಗಳ ಭವ್ಯ ಇತಿಹಾಸ: ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿಗೆ ಈಗ 'ಡೀಮ್ಡ್ ಯೂನಿವರ್ಸಿಟಿ' ಗರಿ

ಬೆಂಗಳೂರಿನ ಶೈಕ್ಷಣಿಕ ವಲಯದಿಂದ ಒಂದು ಅತ್ಯಂತ ಮಹತ್ವದ ಹಾಗೂ ಹೆಮ್ಮೆಯ ಸುದ್ದಿ ಹೊರಬಿದ್ದಿದೆ. ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, 78 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಅರಮನೆ ರಸ್ತೆಯ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿಗೆ ಇದೀಗ ಕೇಂದ್ರ ಶಿಕ್ಷಣ ಸಚಿವಾಲಯವು 'ಡೀಮ್ಡ್ -ಟು -ಬಿ- ಯೂನಿವರ್ಸಿಟಿ' ಸ್ಥಾನಮಾನವನ್ನು ನೀಡಿದೆ. ಯುಜಿಸಿ ಶಿಫಾರಸಿನ ಮೇರೆಗೆ ಈ ಪ್ರತಿಷ್ಠಿತ ಮಾನ್ಯತೆ ಒಲಿದುಬಂದಿದೆ.

ಜೂನ್ 25, 2026 ರಂದು ನಡೆದ ವಿಶೇಷ ಸಭೆಯಲ್ಲಿ ಕಾರ್ಮೆಲೈಟ್ ಸಿಸ್ಟರ್ಸ್ ಆಫ್ ಸೇಂಟ್ ತೆರೇಸಾ ಸುಪೀರಿಯರ್ ಜನರಲ್ ಮತ್ತು ಮೌಂಟ್ ಕಾರ್ಮೆಲ್ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷರಾದ ಸಿಸ್ಟರ್ ಜೋಸ್ ಲಿನೆಟ್ ಅವರು ಈ ಕುರಿತು ಅಧಿಕೃತ ಘೋಷಣೆ ಮಾಡಿದರು.

Mount Carmel College Bengaluru

ಇದೇ ಐತಿಹಾಸಿಕ ಸಂದರ್ಭದಲ್ಲಿ ಆಡಳಿತ ಮಂಡಳಿಯೊಂದಿಗೆ ಸೇರಿ ವಿಶ್ವವಿದ್ಯಾಲಯದ ಹೊಸ ಲೋಗೋವನ್ನು ಅವರು ಅನಾವರಣಗೊಳಿಸಿದರು. ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ನಿರಂತರ ಹಾಗೂ ಸಂಘಟಿತ ಪ್ರಯತ್ನದ ಫಲವಾಗಿ ಕಾಲೇಜಿನ ಇತಿಹಾಸದಲ್ಲಿ ಈ ಮೈಲಿಗಲ್ಲು ನಿರ್ಮಾಣವಾಗಿದೆ.

'ವಿಕಸಿತ್ ಭಾರತ್ 2047' ಗುರಿಯತ್ತ ಹೆಜ್ಜೆ

ದೇಶದ 'ವಿಕಸಿತ್ ಭಾರತ್ 2047' ಗುರಿಗೆ ಪೂರಕವಾಗಿ, ಗುಣಮಟ್ಟದ, ಎಲ್ಲರನ್ನೂ ಒಳಗೊಳ್ಳುವ, ಸಮಾನತೆಯಿಂದ ಕೂಡಿದ ಮತ್ತು ಕೈಗೆಟುಕುವ ದರದಲ್ಲಿ ಉನ್ನತ ಶಿಕ್ಷಣವನ್ನು ಒದಗಿಸುವ ಸ್ಪಷ್ಟ ಗುರಿಯನ್ನು ಈ ನೂತನ ವಿಶ್ವವಿದ್ಯಾಲಯ ಹೊಂದಿದೆ.

ಬಿಟ್ಸ್ ಪಿಲಾನಿ ಪದವೀಧರೆಗೆ 30 ಲಕ್ಷದ ಕೆಲಸಕ್ಕಿಂತ 'ಡಾಕ್ಟರ್' ಪಟ್ಟವೇ ಹೆಚ್ಚಾಯ್ತು! 30ನೇ ವಯಸ್ಸಿಗೆ NEET ಪಾಸ್ ಮಾಡಿದ ಆಕೃತಿ
ಬಿಟ್ಸ್ ಪಿಲಾನಿ ಪದವೀಧರೆಗೆ 30 ಲಕ್ಷದ ಕೆಲಸಕ್ಕಿಂತ 'ಡಾಕ್ಟರ್' ಪಟ್ಟವೇ ಹೆಚ್ಚಾಯ್ತು! 30ನೇ ವಯಸ್ಸಿಗೆ NEET ಪಾಸ್ ಮಾಡಿದ ಆಕೃತಿ

"ಅತ್ಯಂತ ವೇಗವಾಗಿ ಬದಲಾಗುತ್ತಿರುವ ಇಂದಿನ ಶೈಕ್ಷಣಿಕ ವಾತಾವರಣದಲ್ಲಿ ನಮ್ಮ ಸಂಸ್ಥಾಪಕರಾದ ಮದರ್ ತೆರೇಸಾ ಆಫ್ ಸೇಂಟ್ ರೋಸ್ ಆಫ್ ಲಿಮಾ ಅವರ ದೂರದೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಪಾಲಿನ ಜವಾಬ್ದಾರಿಯೂ ಹೌದು, ಸೌಭಾಗ್ಯವೂ ಹೌದು" ಎಂದು ಸಿಸ್ಟರ್ ಜೋಸ್ ಲಿನೆಟ್ ತಿಳಿಸಿದ್ದಾರೆ. ಸಮಗ್ರ ಬಹುಶಿಸ್ತೀಯ ಶಿಕ್ಷಣ ಮತ್ತು ಸಬಲೀಕರಣದ ತತ್ವಗಳ ಮಾರ್ಗದರ್ಶನದಲ್ಲಿ, ಮುಂದಿನ ಪೀಳಿಗೆಯನ್ನು ಸಮರ್ಥವಾಗಿ ರೂಪಿಸಲು ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡಲು ವಿಶ್ವವಿದ್ಯಾಲಯ ಸಜ್ಜಾಗಿದೆ ಎಂದು ಅವರು ವಿವರಿಸಿದರು.

ಮೌಂಟ್ ಕಾರ್ಮೆಲ್ ಕಾಲೇಜಿನ 78 ವರ್ಷಗಳ ರೋಚಕ ಇತಿಹಾಸ

ವಿದ್ಯಾರ್ಥಿಗಳ ಸಬಲೀಕರಣದ ಗುರಿಯೊಂದಿಗೆ ಮೌಂಟ್ ಕಾರ್ಮೆಲ್ ಶೈಕ್ಷಣಿಕ ಪಯಣ 1944 ರಲ್ಲಿ ಕೇರಳದ ತ್ರಿಶೂರ್‌ನಲ್ಲಿ ಪ್ರಾರಂಭವಾಯಿತು. ಆ ಬಳಿಕ ಮಹಿಳಾ ಶಿಕ್ಷಣದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ 1948 ರಲ್ಲಿ ಈ ಸಂಸ್ಥೆ ಬೆಂಗಳೂರಿಗೆ ಸ್ಥಳಾಂತರ ಗೊಂಡಿತು.

2005 ರಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಬೆಳೆದ ಈ ಕಾಲೇಜಿಗೆ, 2022 ರಲ್ಲಿ ಸ್ವಾಯತ್ತತೆಯ ಸ್ಥಾನಮಾನವನ್ನು ಮುಂದಿನ 10 ವರ್ಷಗಳ ಕಾಲಕ್ಕೆ ವಿಸ್ತರಿಸಲಾಯಿತು. ದೇಶದಲ್ಲಿ ಸತತ 5 ಬಾರಿ ನ್ಯಾಕ್ ಮಾನ್ಯತೆ ಪಡೆದ ಕೆಲವೇ ಕೆಲವು ಸಂಸ್ಥೆಗಳಲ್ಲಿ ಇದು ಕೂಡ ಒಂದಾಗಿದೆ ಎನ್ನುವುದು ವಿಶೇಷ.

ಲಕ್ ಅಂದ್ರೆ ಇದು! ಲೇ-ಆಫ್ ಅನ್ನೇ ಬಂಡವಾಳವಾಗಿಸಿಕೊಂಡ ಟೆಕ್ಕಿ, ಸೂಪರ್ ಮಾರ್ಕೆಟ್ ತೆರೆದು ಈಗ ದಿನಕ್ಕೆ 50,000 ರೂ. ಗಳಿಕೆ
ಲಕ್ ಅಂದ್ರೆ ಇದು! ಲೇ-ಆಫ್ ಅನ್ನೇ ಬಂಡವಾಳವಾಗಿಸಿಕೊಂಡ ಟೆಕ್ಕಿ, ಸೂಪರ್ ಮಾರ್ಕೆಟ್ ತೆರೆದು ಈಗ ದಿನಕ್ಕೆ 50,000 ರೂ. ಗಳಿಕೆ

ದಶಕಗಳ ಕಾಲ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದ ಬೆಂಗಳೂರಿನ ಈ ಮೌಂಟ್ ಕಾರ್ಮೆಲ್ ಕಾಲೇಜು, 2023 ರಲ್ಲಿ ಸಹ-ಶಿಕ್ಷಣ ಸಂಸ್ಥೆಯಾಗಿ ಕಾಲಘಟ್ಟಕ್ಕೆ ತಕ್ಕಂತೆ ಬದಲಾಯಿತು. ಪ್ರಸ್ತುತ, ಈ ಪ್ರತಿಷ್ಠಿತ ಸಂಸ್ಥೆಯು 54 ಸ್ನಾತಕೋತ್ತರ - ಪೂರ್ವ, 18 ಸ್ನಾತಕೋತ್ತರ ಮತ್ತು 11 ಡಾಕ್ಟರೇಟ್ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ.

ಭಾರತದ ಟಾಪ್ 20 ಕಾಲೇಜುಗಳ ಪಟ್ಟಿಯಲ್ಲಿ ಬೆಂಗಳೂರಿನ ಮೌಂಟ್ ಕಾರ್ಮೆಲ್ ನಿರಂತರವಾಗಿ ಸ್ಥಾನ ಪಡೆದುಕೊಂಡು ಬರುತ್ತಿರುವುದು ಇದು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅತ್ಯುತ್ತಮ ಶೈಕ್ಷಣಿಕ ಗುಣಮಟ್ಟವೇ ಸಾಕ್ಷಿಯಾಗಿದೆ ಎನ್ನಬುಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+