Get Updates
Get notified of breaking news, exclusive insights, and must-see stories!

ಇನ್ನೂ ಬೆಂಗಳೂರಿನಲ್ಲಿ ಮಳೆಗೆ ಅಂಡರ್‌ಪಾಸ್‌ನಲ್ಲಿ ನಿಂತರೂ 500 ರು. ದಂಡ

ಬೆಂಗಳೂರು, ಸೆಪ್ಟೆಂಬರ್‌ 01: ನಗರದಲ್ಲಿ ಮಳೆಯು ಬಂದಾಗೆಲ್ಲಾ ಅಂಡರ್‌ಪಾಸ್‌ನ ಕೆಳಸೇತುವೆಯಲ್ಲಿ ಬೈಕ್ ಸವಾರರು ತಾತ್ಕಾಲಿಕವಾಗಿ ಆಶ್ರಯ ಪಡೆಯುವುದು ಸಾಮಾನ್ಯ. ಮಳೆ ನಿಂತ ಮೇಲೆ ಅವರು ಹೊರಡುತ್ತಾರೆ. ಆದರೆ ಮುಂದೆ ಕೆಳಸೇತುವೆಯಲ್ಲಿ ನಿಲ್ಲಲು ನಿಮಗೆ ಅನುಮತಿಸಲಾಗುವುದಿಲ್ಲ.

ಇನ್ನು ಮುಂದೆ ಬೆಂಗಳೂರು ನಗರದಲ್ಲಿ ಭಾರಿ ಮಳೆಯ ಸಂದರ್ಭದಲ್ಲಿ ಅಂಡರ್‌ಪಾಸ್‌ಗಳಲ್ಲಿ ವಾಹನ ನಿಲುಗಡೆ ಮಾಡುವ ಮತ್ತು ಆಶ್ರಯ ಪಡೆಯುವ ಪ್ರಯಾಣಿಕರಿಗೆ ನಗರ ಸಂಚಾರ ಪೊಲೀಸರು ದಂಡ ವಿಧಿಸಲಿದ್ದಾರೆ. ಮೊದಲ ಬಾರಿ ತಪ್ಪಿತಸ್ಥರಿಗೆ 500 ರೂಪಾಯಿ ಮತ್ತು ಎರಡನೇ ಬಾರಿಗೆ 1000 ರೂ. ದಂಡ ವಿಧಿಸಲಾಗುತ್ತದೆ.

ಈ ಬಗ್ಗೆ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ರವಿಕಾಂತೇಗೌಡ ಅವರು, ನಗರದಲ್ಲಿ ಇತ್ತೀಚೆಗೆ ಅಂಡರ್‌ಪಾಸ್‌ಗಳಲ್ಲಿ ಅಪಘಾತಗಳು ಸಂಭವಿಸಿದ ಕಾರಣ ಈ ಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ಅಂಡರ್‌ಪಾಸ್‌ಗಳಲ್ಲಿ ನಾಲ್ಕು ಅಪಘಾತಗಳು ಸಂಭವಿಸಿವೆ. ಪೂರ್ವ ಮತ್ತು ಮಧ್ಯ ಬೆಂಗಳೂರು - ವಿಂಡ್ಸರ್ ಮ್ಯಾನರ್ ಅಂಡರ್‌ಪಾಸ್ ಮತ್ತು ಶಿವಾನಂದ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಅಪಘಾತಗಳು ಸಂಭವಿಸಿವೆ. ಸಾಮಾನ್ಯವಾಗಿ, ಅಂಡರ್‌ಪಾಸ್‌ಗಳು ಕತ್ತಲೆಯಾಗಿರುತ್ತವೆ. ಮಳೆಯ ಸಮಯದಲ್ಲಿ ತುಂಬಾ ಕಡಿಮೆ ಗೋಚರತೆ ಇರುತ್ತದೆ. ಇದು ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.

 ಅಂಡರ್‌ಪಾಸ್‌ಗಳಲ್ಲಿ ವಾಹನ ನಿಲ್ಲಿಸುವುದು ಅಪರಾಧ

ಅಂಡರ್‌ಪಾಸ್‌ಗಳಲ್ಲಿ ವಾಹನ ನಿಲ್ಲಿಸುವುದು ಅಪರಾಧ

ತಮ್ಮ ಸುರಕ್ಷತೆಯ ದೃಷ್ಟಿಯಿಂದ ಅಂಡರ್‌ಪಾಸ್‌ಗಳಲ್ಲಿ ವಾಹನಗಳನ್ನು ನಿಲ್ಲಿಸದಂತೆ ಹಿರಿಯ ಪೊಲೀಸ್ ಅಧಿಕಾರಿ ವಾಹನ ಸವಾರರರಲ್ಲಿ ಮನವಿ ಮಾಡಿದ್ದಾರೆ. ಮಳೆಯಿಂದಾಗಿ ಜನರು ಅಲ್ಲಿ ಆಶ್ರಯ ಪಡೆಯುತ್ತಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ನಾವು ಅವರಲ್ಲಿ ವಿನಂತಿಸುವುದೇನೆಂದರೆ ಮಳೆಗಾಲದಲ್ಲಿ ನೀವು ಕೆಲವು ಅಂಗಡಿ ಮುಂಗಟ್ಟುಗಳ ಬಳಿ ವಾಹನ ನಿಲ್ಲಿಸಿ ಆಶ್ರಯ ಪಡೆದರೆ ತೊಂದರೆಯಿಲ್ಲ. ಆದರೆ ದಯವಿಟ್ಟು ಅಂಡರ್‌ಪಾಸ್‌ಗಳಲ್ಲಿ ನಿಲುಗಡೆ ಮಾಡಬೇಡಿ. ಏಕೆಂದರೆ ಇದು ತುಂಬಾ ಅಪಾಯಕಾರಿ ಎಂದು ಅವರು ಹೇಳಿದರು.

 ದಂಡವನ್ನು ಪಾವತಿಸುವಂತೆ ನೋಟಿಸ್

ದಂಡವನ್ನು ಪಾವತಿಸುವಂತೆ ನೋಟಿಸ್

ಅಕ್ರಮ ಎಸಗುವವರಿಂದ ಸಂಚಾರಿ ಪೊಲೀಸ್ ಅಧಿಕಾರಿಗಳು ದಂಡ ವಸೂಲಿ ಮಾಡಲಿದ್ದಾರೆ. ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಅಂಡರ್‌ಪಾಸ್‌ಗಳಲ್ಲಿ ನಿಲ್ಲಿಸಿರುವ ವಾಹನಗಳ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ದಂಡವನ್ನು ಪಾವತಿಸುವಂತೆ ನೋಟಿಸ್ ಕಳುಹಿಸಲಾಗುವುದು. ಕಳೆದ ವರ್ಷದಿಂದ ನಾವು ಈ ಬಗ್ಗೆ ಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದೇವೆ. ಅಂಡರ್‌ಪಾಸ್‌ಗಳಲ್ಲಿ ಆಶ್ರಯ ಪಡೆಯಲು ನಮ್ಮ ಅಧಿಕಾರಿಗಳು ಜನರಿಗೆ ಹೇಳುತ್ತಿಲ್ಲ. ಒಂದೇ ವಿಷಯ ನಾವು ಅವರನ್ನು ಖಾಲಿ ಮಾಡಲು ಕೇಳುವ ಮೊದಲು ವಾಹನಗಳು ಇಲ್ಲದಿದ್ದರೆ ಅದು ಅಪಘಾತಗಳು ಸಂಭವಿಸುವುದನ್ನು ತಡೆಯುತ್ತದೆ ಎಂದು ಹೇಳಿದರು.

 ರಸ್ತೆಗಳನ್ನು ನಿರ್ವಹಿಸಲು ಬಿಬಿಎಂಪಿ ವಿಫಲ

ರಸ್ತೆಗಳನ್ನು ನಿರ್ವಹಿಸಲು ಬಿಬಿಎಂಪಿ ವಿಫಲ

ಇದಕ್ಕೆ ಸಂಚಾರ ತಜ್ಞ ಎಂ.ಎನ್.ಶ್ರೀಹರಿ ಅವರ ಪ್ರಕಾರ, "ಇಲ್ಲಿ ತಪ್ಪಿರುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯದ್ದು. ಇದು ಮಳೆಯ ಸಮಯದಲ್ಲಿ ರಸ್ತೆಗಳನ್ನು ನಿರ್ವಹಿಸಲು ಮತ್ತು ತಾತ್ಕಾಲಿಕ ಆಶ್ರಯವನ್ನು ಒದಗಿಸಲು ವಿಫಲವಾಗಿದೆ. ಇಲ್ಲಿ ಮೊದಲ ಅಪರಾಧಿ ಬಿಬಿಎಂಪಿ. ಇದು ನೀರು ಹಾದುಹೋಗಲು ಚರಂಡಿಗಳನ್ನು ನಿರ್ಮಿಸಲು ವಿಫಲವಾಗಿದೆ. ಅಂಡರ್‌ಪಾಸ್‌ಗಳು ಜಲಾವೃತವಾದಾಗ, ಕೆಲವೊಮ್ಮೆ ವಾಹನಗಳು ಸಹ ಪ್ರಾರಂಭವಾಗದೇ ಟ್ರಾಫಿಕ್ ಜಮಾವಣೆಗೆ ಕಾರಣವಾಗುತ್ತವೆ. ಇಲ್ಲಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಲು ಸಾಧ್ಯವಿಲ್ಲ. ಬಿಬಿಎಂಪಿ ಅಲ್ಲಿ ವಾಹನ ನಿಲ್ಲಿಸುವವರಿಗೆ ದಂಡ ವಿಧಿಸುವುದು ಸುಲಭ ಮಾರ್ಗವಾಗಿದೆ ಎಂದು ತಿಳಿಸಿದರು.

 ಶೆಲ್ಟರ್‌ ಹಾಕುವುದು ಪೊಲೀಸರ ಕೆಲಸವಲ್ಲ

ಶೆಲ್ಟರ್‌ ಹಾಕುವುದು ಪೊಲೀಸರ ಕೆಲಸವಲ್ಲ

ಆದರೆ, ಡಿಸಿಪಿ ಮಾತಿಗೆ ಸಮ್ಮತಿಸಿದ ಶ್ರೀಹರಿ, "ಅಂಡರ್‌ಪಾಸ್‌ಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತು ಅಪಘಾತಗಳು ಉಂಟಾಗುತ್ತವೆ. ಅಂಡರ್‌ಪಾಸ್‌ಗಳಲ್ಲಿ ಮಳೆಯಿಂದ ಆಶ್ರಯ ಪಡೆಯುತ್ತಿರುವ ಜನರ ಮೇಲೆ ಅಲ್ಪಾವಧಿ ಕ್ರಮ ಕೈಗೊಳ್ಳಲು ಪೊಲೀಸರು ಬಯಸುತ್ತಾರೆ. ಶೆಲ್ಟರ್‌ಗಳನ್ನು ಹಾಕುವುದು ಪೊಲೀಸರ ಕೆಲಸವಲ್ಲ. ಬಿಬಿಎಂಪಿಯು ಮಳೆಗಾಲದಲ್ಲಾದರೂ ವಾಹನ ಸವಾರರಿಗೆ ಸುರಕ್ಷಿತ ತಾತ್ಕಾಲಿಕ ಶೆಲ್ಟರ್‌ಗಳನ್ನು ಮಾಡಬೇಕು. ಹೀಗಾಗಿ ಸುರಕ್ಷಿತವಾಗಿರಿ ಮತ್ತು ಅಂಡರ್‌ಪಾಸ್‌ಗಳಲ್ಲಿ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು," ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+