ಜೈಲಿನಲ್ಲಿದ್ದ ಮಗನಿಗೆ ಡ್ರಗ್ಸ್ ಕೊಡಲು ಹೋದ ತಾಯಿ ಅಂದರ್

ಬೆಂಗಳೂರು, ಜೂನ್ 17: ತಾಯಿ ಮಗನಿಗಾಗಿ ಯಾವ ತ್ಯಾಗಕ್ಕೂ ಸಿದ್ದ. ಮಗನ ಖುಷಿಗಾಗಿ ತಾಯಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ. ತಾಯಿ ಮಗನ ಸಂಬಂಧ ಜನ್ಮ ಜನ್ಮ ತೀರಿಸಲಾದ ಅನುಬಂಧ ಅಂತೆಲ್ಲಾ ಹೇಳುತ್ತೇವೆ. ಮಗನ ಒಳಿತಿಗಾಗಿ ಇವೆಲ್ಲಾ ಮಾಡಿದ್ರೆ ತಾಯಿಯೊಬ್ಬಳು ಜೈಲು ಸೇರುವ ಸನ್ನಿವೇಶವೇ ಬರ್ತಾ ಇರಲಿಲ್ಲ. ಜೈಲಿನಲ್ಲಿರುವ ಮಗನಿಗೆ ಮಾದಕ ವಸ್ತು ನೀಡಲು ಹೋದ ತಾಯಿಯು ಜೈಲು ಸೇರಿರುವ ವಿಚಿತ್ರ ಕಥೆಯಿದು.

ತನ್ನ ಮಗ ಜೈಲು ಹಕ್ಕಿಯಾಗಿದ್ದ. ಮಗನನ್ನು ಭೇಟಿಯಾಗಿ ಬಟ್ಟೆ ಕೊಡುವ ನೆಪದಲ್ಲಿ ಮಾದಕ ವಸ್ತುವಾದ ಹ್ಯಾಶಿಷ್ ಆಯಿಲ್ ನೀಡಲು ಯತ್ನಿಸಿದ್ದ ತಾಯಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಪರ್ವೀನ್ ತಾಜ್ ಬಂಧಿತ ಮಹಿಳೆಯಾಗಿದ್ದಾಳೆ. ಈಕೆಯ ಮಗ ಮೊಹಮ್ಮದ್ ಬಿಲಾಲ್ ಎಂಬಾತ ರಾಬರಿ ಸೇರಿದಂತೆ 11 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕೋಣನಕುಂಟೆ ಪೊಲೀಸರು ಬಿಲಾನ್‌ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು.

ತಾಯಿ-ಮಗ ಶಿಕಾರಿಪಾಳ್ಯದಲ್ಲಿ ವಾಸವಾಗಿದ್ದರು‌. ಮಗನನ್ನು ನೋಡಲು ಆಗಾಗ ಪರ್ವೀನ್ ಜೈಲಿಗೆ ಬರುತ್ತಿದ್ದಳು. ಆದರೆ ಕಳೆದ ಜೂನ್ 13ರಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಈಕೆ ಮಗನಿಗೆ ಬಟ್ಟೆ ಕೊಡುವ ನೆಪದಲ್ಲಿ ಊಟದ ಬಾಕ್ಸ್‌ನಲ್ಲಿ 5 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್ ತಂದಿದ್ದಳು.

Mother Try to supply Drugs to Son in Central jail, Police Arrested her with Drugs

ಜೈಲು ಸಿಬ್ಬಂದಿ ಪರಿಶೀಲನೆ ವೇಳೆ ಹ್ಯಾಶಿಷ್ ಆಯಿಲ್ ಪತ್ತೆ

ಜೈಲು ಸಿಬ್ಬಂದಿ ಈಕೆಯನ್ನು ಪರಿಶೀಲಿಸಿದ ವೇಳೆ ಬಟ್ಟೆಯ ಜೊತೆಯಲ್ಲಿ ಮಾದಕ ವಸ್ತು ಪತ್ತೆಯಾಗಿತ್ತು. ತಕ್ಷಣ ಜೈಲು ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ತಾಯಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ಮೇಲೆ ಕೇಸ್ ದಾಖಲಿಸಿರುವ ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಬಟ್ಟೆ ಜೊತೆ ಡ್ರಗ್ಸ್ ಇರೋದು ಗೊತ್ತಿರಲಿಲ್ಲ ಎಂದ ತಾಯಿ

ನನಗೆ ಯಾರೋ ಪೋನ್ ಮಾಡಿ ಜೈಲಿನಲ್ಲಿರುವ ವ್ಯಕ್ತಿಗೆ ಮಗನ ಮುಖಾಂತರ ಬಟ್ಟೆ‌ಯ ಬ್ಯಾಗ್ ನೀಡಬೇಕೆಂದು ಎಂದು ಪೋನ್‌ ಮಾಡಿದ್ದರು.‌ ಇದರಂತೆ ನಾನು ಬ್ಯಾಗ್ ನೀಡಲು ಒಪ್ಪಿಕೊಂಡೆ. ಬ್ಯಾಗ್‌ನಲ್ಲಿ ಡ್ರಗ್ಸ್ ಇರುವುದು ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.‌‌ ಈಕೆ‌ ಹೇಳಿಕೆ ಮೇರೆಗೆ ಫೋನ್‌ ಬಂದಿದ್ದ ಮೊಬೈಲ್‌‌ ನಂಬರ್ ಆಧರಿಸಿ ಪೊಲೀಸರು ತನಿಖೆ‌‌ ನಡೆಸುತ್ತಿದ್ದಾರೆ.

Mother Try to supply Drugs to Son in Central jail, Police Arrested her with Drugs

ಮಗನ ಮೇಲಿನ ಅಪಾರ ಪ್ರೀತಿಯಿಂದಲೋ.. ಮಗನಿಗಾಗಿ ಹ್ಯಾಶಿಷ್ ಆಯಿಲ್ ತಂದಿದ್ದ ತಪ್ಪಿಗೆ ತಾಯಿ ಮಗ ಇಬ್ಬರು ಪರಪ್ಪನ ಜೈಲಿನಲ್ಲಿ ಕಂಬಿ ಎಣಿಸುತ್ತಿರುವುದು ವಿಚಿತ್ರವಾದರು ಸತ್ಯವಾದ ವಿಚಾರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+