ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ಬಳಕೆದಾರರ ಪ್ರಮಾಣ ಶೇ.59ರಷ್ಟು ಹೆಚ್ಚಳ!

By Nayana
|
Google Oneindia Kannada News

ಬೆಂಗಳೂರು, ಮೇ 17: ನಮ್ಮ ಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಮಾರ್ಟ್‌ ಕಾರ್ಡ್‌ ಕೊಂಡೆ ಶೇ.15ರಷ್ಟು ರಿಯಾಯಿತಿ ನೀಡುವುದಾಗಿ ಬಿಎಂಆರ್‌ಸಿಎಲ್‌ ಮೊದಲೇ ತಿಳಿಸಿದೆ.

ಆದರೂ ಟೋಕನ್‌ ಪಡೆದು ಪ್ರಯಾಣ ಮಾಡುವವರ ಸಂಖ್ಯೆಯೂ ಸಮಸಮವಾಗಿತ್ತು, ಆದರೆ ಒಂದೆರೆಡು ತಿಂಗಳಿನಿಂದ ನಮ್ಮ ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ಬಳಕೆದಾರರ ಸಂಖ್ಯೆ ನೇರಳೆ ಮಾರ್ಗದಲ್ಲಿ ಶೇ.59 ಹಾಗೂ ಹಸಿರು ಮಾರ್ಗದಲ್ಲಿ ಶೇ. 51 ಕ್ಕೆ ಏರಿದೆ.

ಮೆಟ್ರೋ, ಬಿಎಂಟಿಸಿ, ಉಪನಗರ ರೈಲಿಗೆ ಒಂದೇ ಸ್ಮಾರ್ಟ್‌ಕಾರ್ಡ್!ಮೆಟ್ರೋ, ಬಿಎಂಟಿಸಿ, ಉಪನಗರ ರೈಲಿಗೆ ಒಂದೇ ಸ್ಮಾರ್ಟ್‌ಕಾರ್ಡ್!

ಪ್ರತಿ ಮೆಟ್ರೋದಲ್ಲಿ ಪ್ರಯಾಣಿಸುವವರು ಟಿಕೆಟ್ ಪಡೆಯಲು ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿಕೊಳ್ಳಲು ಸ್ಮಾರ್ಟ್‌ ಕಾರ್ಡ್ ಖರೀದಿಸುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಪ್ರಯಾಣಿಸುವವರು ಕೂಡ ಸ್ಮಾರ್ಟ್‌ ಕಾರ್ಡ್‌ ಖರೀದಿಗೆ ಮುಂದಾಗಿದ್ದಾರೆ.

More metro commuters smart now!

ಸ್ಮಾರ್ಟ್‌ ಕಾರ್ಡ್ ಬಳಕೆ ಹೆಚ್ಚಲು ಬಿಎಂಆರ್‌ಸಿಎಲ್‌ ಹಲವು ಪ್ರಯತ್ನಗಳನ್ನೂ ಮಾಡಿದೆ. ಇವೆಲ್ಲ ಕಾರಣಗಳಿಂದ ಟೋಕನ್‌ಗಿಂತ ಸ್ಮಾರ್ಟ್‌ ಕಾರ್ಡ್‌ ಬಳಕೆ ಹೆಚ್ಚಿದೆ.

ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿ 2012ರಲ್ಲಿ ಶೇ.21ರಷ್ಟಿದ್ದ ಸ್ಮಾರ್ಟ್‌ಕಾರ್ಡ್‌ ಬಳಕೆ 2018ರಲ್ಲಿ ಶೇ.21ಕ್ಕೆ ಏರಿಕೆಯಾಗಿದೆ. ಮೈಸೂರು ರಸ್ತೆ- ಬೈಯಪ್ಪನಹಳ್ಳಿ ಮಾರ್ಗದಲ್ಲಿ 2012ರಲ್ಲಿ ಶೇ.15ರಷ್ಟಿದ್ದ ಸ್ಮಾರ್ಟ್‌ಕಾರ್ಡ್‌ ಬಳಕೆ 2018ರಲ್ಲಿ ಶೇ.59ಕ್ಕೆ ಏರಿದೆ. ಪ್ರತಿನಿತ್ಯ ಹಸಿರು ಮಾರ್ಗದಲ್ಲಿ 1.65 ಲಕ್ಷ ಹಾಗೂ ನೇರಳೆ ಮಾರ್ಗದಲ್ಲಿ 1.90 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ದಿನಕ್ಕೆ ಒಟ್ಟು ಸರಾಸರಿ 3.55 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ.

English summary
Average of 55 percent growth of using smart card recorded in both the routes of Namma Metro this year, BMRCL said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X