ಬೆಂಗಳೂರಿಗೆ ಮೋನೋರೈಲು ಅಗತ್ಯವಿಗೆ : ಜಾರ್ಜ್

kj george
ಬೆಂಗಳೂರು, ಸೆ.14 : ಮಹಾನಗರ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆ ತಪ್ಪಿಸಲು ಮೆಟ್ರೋ ರೈಲು ಜೊತೆಗೆ ಮೋನೋ ರೈಲು ಸೇವೆ ಆರಂಭಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಲಿದೆ. ಆದ್ದರಿಂದ ಮೆಟ್ರೋ ರೈಲು ಜೊತೆಗೆ ಮೋನೋ ರೈಲು ಸೇವೆ ಆರಂಭಿಸುವುದು ಅನಿವಾರ್ಯವಾಗಿಗೆ ಎಂದು ಹೇಳಿದರು.

ನಗರದಲ್ಲಿ ಮೋನೋ ರೈಲು ಯೋಜನೆ ಪ್ರಾರಂಭವಾದರೆ, ನಗರದ ಶೇ 50ರಷ್ಟು ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವರುವ ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮೋನೋ ರೈಲು ಯೋಜನೆ ಕುರಿತು ಚರ್ಚಿಸಲಾಗುವುದು ಎಂದರು.

ಬಳ್ಳಾರಿ ರಸ್ತೆಯಲ್ಲಿನ ಟ್ರಾಫಿಲ್ ಸಮಸ್ಯೆ ಬಗೆಹರಿಸಲು ಶಾಶ್ವತ ಕಾರ್ಯ ಯೋಜನೆಯನ್ನು ಸರ್ಕಾರ ತಯಾರಿಸುತ್ತಿದೆ. ಅರಮನೆ ಮೈದಾನದಲ್ಲಿನ ಕಾರ್ಯಕ್ರಮಗಳಿಂದಾಗಿ ಬಳ್ಳಾರಿ ರಸ್ತೆಯಲ್ಲಿ ಸದಾ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದರು.

ಯೋಜನೆಯಂತೆ ಅರಮನೆ ಮೈದಾನಕ್ಕೆ ಬಳ್ಳಾರಿ ರಸ್ತೆಯಿಂದ ಆಗಮನ ಮತ್ತು ಜಯಮಹಲ್ ರಸ್ತೆಯಿಂದ ನಿರ್ಗಮನ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಜಯಮಹಲ್ ರಸ್ತೆಯ ಅಕ್ಕಪಕ್ಕದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಸರ್ಕಾರ ಈ ಯೋಜನೆ ಕಾರ್ಯಗತಗೊಳ್ಳುವ ತನಕ ಅರಮನೆ ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ನೀಡಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+