ಗಾಂಧೀಜಿ ಆದರ್ಶಗಳ ಪಾಲಿಸುವಂತೆ ಮಾಡಿದ ಪ್ರಧಾನಿ ಮೋದಿ: ರವಿಸುಬ್ರಮಣ್ಯ
ಬೆಂಗಳೂರು, ಅಕ್ಟೋಬರ್ 02: ಮಹಾತ್ಮ ಗಾಂಧೀಜಿ ಅವರು ಕಂಡಿದ್ದ ರಾಮರಾಜ್ಯ, ಗ್ರಾಮ ಸ್ವರಾಜ್ಯ, ಸ್ವಚ್ಚತೆ ಹಾಗೂ ಅಂತ್ಯೋದಯದಂತಹ ಕನಸುಗಳನ್ನು ನನಸು ಮಾಡುವತ್ತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಬಸವನಗುಡಿ ಶಾಸಕ ರವಿಸುಬ್ರಮಣ್ಯ ಹೇಳಿದರು.
ಮಹಾತ್ಮಾಗಾಂಧಿ ಅವರ 150 ನೇ ಜಯಂತ್ಯೋತ್ಸವ ಕಾರ್ಯಕ್ರಮ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ 115 ನೇ ಜನ್ಮ ಜಯಂತಿ ಅಂಗವಾಗಿ ಜಯನಗರದ ಕೇಂದ್ರ ಸಚಿವ ಅನಂತಕುಮಾರ್ ಅವರ ಕಚೇರಿಯಲ್ಲಿ ಆಯೋಜಿಸಿದ್ದ 'ಸ್ವಚ್ಚತಾ ಹೀ ಸೇವಾ' ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಶ್ವದೆಲ್ಲೆಡೆ ಮಾನ್ಯತೆ ಪಡೆದಿರುವ ಮಹಾತ್ಮಾಗಾಂಧೀಜಿ ಅವರ ಆದರ್ಶಗಳನ್ನು ಪ್ರತಿನಿತ್ಯ ಜನಸಾಮಾನ್ಯರು ಅಳವಡಿಸಿಕೊಳ್ಳುವಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಕೇಂದ್ರ ಸರಕಾರ ಪ್ರಾರಂಭಿಸಿದೆ. ಪಕ್ಷಭೇಧವಿಲ್ಲದೆ ಎಲ್ಲರೂ ಸ್ವಚ್ಚತಾ ಆಂದೋಲನದಲ್ಲಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರಪಿತ ಮಹತ್ಮಾ ಗಾಂಧೀಜಿ ಅವರ ಮಹತ್ವದ ಅಂದೋಲನವನ್ನು ಅನುಷ್ಠಾನಗೊಳಿಸುವಲ್ಲಿ ತಮ್ಮ ಪಾಲನ್ನು ನೀಡುತ್ತಿದ್ದಾರೆ ಎಂದರು.

ಗಾಂಧೀಜಿ ಕನಸು ನನಸು ಮಾಡುತ್ತಿರುವ ಮೋದಿ
ತುಳಿತಕ್ಕೊಳಗಾದ, ದುರ್ಬಲ ಜನರ ಸೇವೆಯನ್ನು ಮಾಡಬೇಕು ಎನ್ನುವುದು ಗಾಂಧೀಜಿ ಅವರ ಕನಸಾಗಿತ್ತು. ಅಂತೆಯೇ ಬಾಹ್ಯ ಅಷ್ಟೇ ಅಲ್ಲದೆ ಆಂತರಿಕ ಸ್ವಚ್ಚತೆಯನ್ನೂ ಕೈಗೊಳ್ಳಬೇಕು ಎನ್ನುವುದು ಅವರ ಅಭಿಲಾಷೆಯಾಗಿತ್ತು. ಇದೇ ವೇಳೆ, 'ಜೈ ಜವಾನ್ ಜೈ ಕಿಸಾನ್' ಎನ್ನುವ ಘೋಷಣೆಯನ್ನು ನೀಡಿದ ಲಾಲ್ ಬಹಾದ್ದೂರ್ ಶಾಂತಿಯ ದೂತ ಅವರ ಜನ್ಮದಿನವನ್ನೂ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಇಂತಹ ಮಹತ್ವದ ಸ್ವಚ್ಚತಾ ಆಂದೋಲನವನ್ನು ಪ್ರಾರಂಭಿಸಿದ್ದಾರೆ ಎಂದರು.

ಹಲವು ಬಡವರ ಪರ ಯೋಜನೆಗಳು ಜಾರಿ
ಫಸಲ್ ಭಿಮಾ ಯೋಜನೆ, ಜನಧನ್ ಯೋಜನೆ, ರೈತಸ್ನೇಹೀ ಯೋಜನೆಗಳನ್ನು ಪ್ರಾರಂಭಿಸುವ ಮೂಲಕ ಕೇಂದ್ರ ಸರಕಾರ ಗಾಂಧೀಜಿ ಅವರ ಕನಸನ್ನು ನನಸಾಗಿಸುವತ್ತ ದಾಪುಗಾಲಿಟ್ಟಿದೆ. ಇದೇ ವೇಳೆ ಕೇಂದ್ರ ರಸಗೊಬ್ಬರ ಖಾತೆಯನ್ನು ನಿರ್ವಹಿಸುವ ಸಚಿವ ಅನಂತಕುಮಾರ್ ಅವರ ಬೇವು ಲೇಪಿತ ಯೂರಿಯಾ ದಿಂದ ಲಕ್ಷಾಂತರ ರೈತರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ ಎಂದರು.

'ಗ್ರಾಮಸ್ವರಾಜ್ಯವನನ್ನು ಮೋದಿ ನನಸು ಮಾಡ್ತಿದ್ದಾರೆ'
ವಿಧಾನಪರಿಷತ್ ಸದಸ್ಯ ಅ ದೇವೇಗೌಡ ಮಾತನಾಡಿ, ಗಾಂಧೀಜಿ ಅವರು ಕಂಡಿದ್ದ ಅಂತ್ಯೋದಯ ಹಾಗೂ ಗ್ರಾಮಸ್ವರಾಜ್ಯದಂತಹ ಹಲವಾರು ಕನಸುಗಳನ್ನು ಈಗಿನ ಕೇಂದ್ರ ಸರಕಾರ ನನಸು ಮಾಡುತ್ತಿದೆ ಎಂದರು. ಕೇಂದ್ರ ಸರಕಾರ ಕೈಗೊಂಡಿರುವ ಹಲವಾರು ಯೋಜನೆಗಳಾದ ಆಯುಷ್‍ಮಾನ್ ಭಾರತ, ಪಸಲ್ ಬಿಮಾದಂತಹ ಯೋಜನೆಗಳು ದೇಶದ ಜನಸಾಮಾನ್ಯರನ್ನು ತಲುಪಿವೆ, ಸಚಿವ ಅನಂತಕುಮಾರ್ ಅವರ ಮುಂದಾಳತ್ವದಿಂದ ಕಡಿಮೆ ಬೆಲೆಗೆ ದೊರಕುತ್ತಿರುವ ಹೃದ್ರೋಗದ ಸ್ಟಂಟ್‍ಗಳು, ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಇನ್ ಪ್ಲಾಂಟ್ ಗಳು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿವೆ ಎಂದರು.

ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ
ಇದೇ ವೇಳೆ, ಸ್ವಚ್ಚತಾ ಹೀ ಸೇವಾ ಅಭಿಯಾನದ ಅಂಗವಾಗಿ ಸ್ವಚ್ಚತೆಯಲ್ಲಿ ಭಾಗಿಯಾದರು. ಅಲ್ಲದೆ, ಮೂವರೂ ಶಾಸಕರು ಕೇಂದ್ರ ಸಚಿವ ಅನಂತಕುಮಾರ್ ಜಯನಗರದ ಕಚೇರಿ ಬಳಿಯ ವಿಜಯಾ ಕಾಲೇಜಿನ ಸಮೀಪದ ಪಾದಚಾರಿ ಮಾರ್ಗವನ್ನು ಸ್ವಚ್ಚಗೊಳಿಸುವ ಮೂಲಕ ಈ ಆಂದೋಲನದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಇದ್ದವರು
ಕಾರ್ಯಕ್ರಮದಲ್ಲಿ ಚಿಕ್ಕಪೇಟೆ ಶಾಸಕ ಉದಯ ಗರುಢಾಚಾರ್, ರಾಜ್ಯ ಬಿಜೆಪಿ ಖಜಾಂಚಿ ಸುಬ್ಬಣ್ಣ, ಬಿಬಿಎಂಪಿ ಸದಸ್ಯರಾದ ಪ್ರತಿಭಾ ಧನರಾಜ್, ವಾಣಿ ರಾವ್, ಬಿ ಎನ್ ರಮೇಶ್, ನಂದಿನಿ ವಿಜಯವಿಠ್ಠಲ, ಶ್ಯಾಮಲಾ ಕುಮಾರ್, ಬಿಜೆಪಿ ಮುಖಂಡರಾದ ಅನಿಲ್, ಗಜೇಂದ್ರ, ಸದಾಶಿವಯ್ಯ, ಇಂದ್ರ ಕುಮಾರ್, ನರೇಶ್ ಕುಮಾರ್, ಕೃಷ್ಣಾ ರೆಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications