ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಬೈಲ್‌ ಮೂಲಕವೇ ನಮ್ಮ ಮೆಟ್ರೋ ಟಿಕೆಟ್ ಪಡೆಯಬಹುದು

By Nayana
|
Google Oneindia Kannada News

ಬೆಂಗಳೂರು, ಜೂನ್ 15: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಟೋಕನ್ ಇಲ್ಲವೇ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕಿತ್ತು. ಆದರೆ ಎರಡನೇ ಹಂತದ ಮೆಟ್ರೋ ಯೋಜನೆಯಲ್ಲಿ ಆನ್‌ಲೈನ್‌ ಮೂಲಕ ಟಿಕೆಟ್‌ ಬುಕಿಂಗ್ ಮಾಡುವ ವ್ಯವಸ್ಥೆ ಪರಿಚಯಿಸಲು ಬಿಎಂಆರ್‌ಸಿಲ್ ಮುಂದಾಗಿದೆ.

ಕೆಲ ಬ್ಯಾಂಕ್‌ಗಳ ಗ್ರಾಹಕರಿಗೆ ವಿಶೇಷ ಪಾಸ್ ಹಾಗೂ ವಿಶೇಷ ದಿನಗಳಲ್ಲಿ ನಿಗದಿತ ಮೊತ್ತದ ಪಾಸ್ ವ್ಯವಸ್ಥೆಯೂ ಇದೆ. ಆದರೆ ಸಾಮಾನ್ಯ ದಿನಗಳಲ್ಲಿ ಸ್ಮಾರ್ಟ್ ಕಾರ್ಡ್ ಹಾಗೂ ಟೋಕನ್ ಅಧಿಕ ಬಳಕೆಯಗುತ್ತದೆ. ಹಾಗಾದರೆ ಟಿಕೇಟ್‌ ಹೇಗೆ ಪಡೆಯಬಹುದು ಎನ್ನುವುದಕ್ಕೆ ಉತ್ತರ ಇಲ್ಲಿದೆ. ಮೆಟ್ರೋ ನಿಗಮವು ಮೆಟ್ರೋ ಟಿಕೆಟ್‌ ಬುಕಿಂಗ್‌ಗಾಗಿಯೇ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸುತ್ತಿದೆ. ಇದನ್ನು ಬಳಸಿಕೊಂಡು ಟಿಕೇಟ್ ಪಡೆಯಬಹುದು.

ಜಾಗದ ಗೊಂದಲ: 2ನೇ ಹಂತ ಮೆಟ್ರೋ ಅನುಷ್ಠಾನ ವಿಳಂಬ ಜಾಗದ ಗೊಂದಲ: 2ನೇ ಹಂತ ಮೆಟ್ರೋ ಅನುಷ್ಠಾನ ವಿಳಂಬ

ನಿಲ್ದಾಣದ ಒಳಗೆ ಹೋಗುವಾಗ ನಿರ್ಗಮನ ದ್ವಾರದಲ್ಲಿ ಹಿಡಿದರೆ ಟಿಕೆಟ್ ಶುಲ್ಕ ಪಾವತಿಯಾಗುತ್ತದೆ. ಇದೇ ರೀತಿ ಮೊಬೈಲ್ ನಲ್ಲಿ ಎನ್‌ಎಫ್‌ಸಿ ಆನ್‌ ಮಾಡಿ ಪ್ರವೇಶದ್ವಾರ ಹಾಗೂ ನಿರ್ಗಮನ ದ್ವಾರದಲ್ಲಿ ಹಿಡಿದರೆ ಅಪ್ಲಿಕೇಷನ್ ಮೂಲಕ ಟಿಕೆಟ್‌ಗೆ ದುಡ್ಡು ಪಾವತಿಯಾಗುತ್ತದೆ. ಆದರೆ ಅಪ್ಲಿಕೇಷನ್‌ನಲ್ಲಿ ಮೊದಲೇ ಹಣ ಹಾಕಿಕೊಂಡಿರಬೇಕು.

Mobile ticketing system in Namma metro soon

ಇದರಿಂದಾಗಿ ಸ್ಮಾರ್ಟ್ ಕಾರ್ಡ್ ಖರೀದಿಸುವ ಅಗತ್ಯವೂ ಇರುವುದಿಲ್ಲ. ಪ್ರಯಾಣಿಕರು ತಮ್ಮ ಮೊಬೈಲ್ ಅನ್ನೇ ಸ್ಮಾರ್ಟ್ ಕಾರ್ಡ್ ಬಳಸುವ ಆಯ್ಕೆ ಇಲ್ಲದೆ. ಒಂದು ಟೋಕನ್ ಉತ್ಪಾದನೆಗೆ ಮೆಟ್ರೋ ನಿಗಮವು 60 ರೂ. ಖರ್ಚು ಮಾಡಬೇಕಿದೆ. ಟೋಕನ್‌ಗಳು ಕಾಣೆಯಾಗುತ್ತಿರುವುದರಿಂದ ನಿಗಮಕ್ಕೆ ಭಾರಿ ನಷ್ಟ ಉಂಟಾಗಿದೆ. ಇದಕ್ಕಾಗಿಯೇ ಸ್ಮಾರ್ಟ್ ಕಾರ್ಡ್ ಖರೀದಿಗೆ ಹೆಚ್ಚು ಉತ್ತೇಜ ನೀಡಲಾಗುತ್ತಿದೆ.

English summary
BMRCL is planning to introduce NFC technology based mobile ticketing for commuters in second phase of Namma metro project. It will avoid standing in queue for purchase ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X