ಇಂದಿರಾ ಕ್ಯಾಂಟೀನ್ ಊಟ-ತಿಂಡಿ ಗುಣಮಟ್ಟ ನಿಗಾಕ್ಕೆ ಮೊಬೈಲ್ ಅಪ್ಲಿಕೇಷನ್

Recommended Video

      ಬಿಬಿಎಂಪಿ ಇಂದ ಇಂದಿರಾ ಕ್ಯಾಂಟೀನಿಗಾಗಿ ಹೊಸ ಆಪ್ | Oneindia Kannada

      ಬೆಂಗಳೂರು, ನವೆಂಬರ್ 23: ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ಗೆ ಒಳ್ಳೆ ಆರಂಭವೇನೋ ಸಿಕ್ಕಿತು. ಆದರೆ ಆಹಾರದ ಗುಣಮಟ್ಟ, ತೂಕದ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಸರಿಪಡಿಸಲು ಆಲೋಚನೆಯೊಂದು ಜಾರಿಗೆ ತರಲು ಸರಕಾರ ಮುಂದಾಗಿದೆ.

      ಬಿಬಿಎಂಪಿ ಅವರಿಂದ ಮೊಬೈಲ್ ಅಪ್ಲಿಕೇಷನ್ ನ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರವನ್ನು ವಿತರಣೆ ಮಾಡುವ ಮುನ್ನ ಅದರ ತೂಕವನ್ನೂ ಒಳಗೊಂಡಂತೆ ಫೋಟೋ ತೆಗೆದು ಅದನ್ನು ಮೊಬೈಲ್ ಅಪ್ಲಿಕೇಷನ್ ಗೆ ಅಪ್ ಲೋಡ್ ಮಾಡಬೇಕಂತೆ.

      Indira Canteen

      ಹಾಗೆ ಮಾಡುವುದರಿಂದ ಆಹಾರದ ಗುಣಮಟ್ಟ, ತೂಕ ಮತ್ತಿತರ ವಿಚಾರಗಳು ಬಿಬಿಎಂಪಿ ಆಯುಕ್ತರನ್ನು ಮೊದಲುಗೊಂಡು ವಿವಿಧ ಹಂತದ ಅಧಿಕಾರಿಗಳ ಗಮನಕ್ಕೆ ಬರುತ್ತದೆ ಎಂಬುದು ಈ ಆಲೋಚನೆಯ ಹಿಂದಿನ ಉದ್ದೇಶ. ಇನ್ನು ಇಪ್ಪತ್ನಾಲ್ಕು ಮೊಬೈಲ್ ಇಂದಿರಾ ಕ್ಯಾಂಟೀನ್ ಕೂಡ ಶುರು ಮಾಡಲು ಚಿಂತನೆ ನಡೆದಿದ್ದು, ಸದ್ಯದಲ್ಲೇ ಮೊಬೈಲ್ ಕ್ಯಾಂಟೀನ್ ಗಳು ಆರಂಭವಾಗಲಿವೆ.

      ಚುನಾವಣೆಗಳು ಹತ್ತಿರ ಬರುವಾಗ ಇದೆಲ್ಲ ಮಾಮೂಲು ಎಂದು ಮೂದಲಿಸುವವರನ್ನು ಮೆಚ್ಚಿಸುವುದಕ್ಕೆ ಆಗಲ್ಲ ಅನ್ನೋದು ಸಿದ್ದರಾಮಯ್ಯ ಅಭಿಮಾನಿಗಳ ಮಾತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+