ಕೊರೊನಾಗೆ ಔಷಧ ಸೂಚಿಸಿದ ಮಾಜಿ ಸಚಿವ, ಟಿಕ್‌ಟಾಕ್‌ನಲ್ಲೂ ಟ್ರೆಂಡ್

ಬೆಂಗಳೂರು, ಮಾರ್ಚ್ 11: ಜಗತ್ತಿನಾದ್ಯಂತ ಮಾರಣಹೋಮ ನಡೆಸುತ್ತಿರುವ ಕೊರೊನಾ ವೈರಸ್‌ಗೆ ಇದುವರೆಗೂ ಯಾರೂ ಔಷಧ ಕಂಡುಹಿಡಿದಿಲ್ಲ. ಕೆಲವು ಕಡೆ ಈಗಾಗಲೇ ಚಾಲ್ತಿಯಲ್ಲಿರುವ ಔಷಧಗಳನ್ನು ಕೊರೊನಾ ರೋಗಿಗಳ ಮೇಲೆ ಪ್ರಯೋಗ ಮಾಡಿರುವುದು ವರದಿಯಾಗಿದೆ.

Recommended Video

      karnataka ban selling offood cut fruits on footpaths | Street food Banned | Bangalore

      ಚೀನಾದಲ್ಲಿ ಹಾಗೂ ಭಾರತದ ಜೈಪುರದಲ್ಲಿ Anti-HIV ಡಗ್ರ್ಸ್ ಬಳಕೆ ಮಾಡಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನ ಆಗಿಲ್ಲ. ವೈದ್ಯಲೋಕಕ್ಕೆ ಸವಾಲೆಸೆದಿರುವ ಕೊರೊನಾಗೆ ಕರ್ನಾಟಕದ ಮಾಜಿ ಸಚಿವ ಸಿಎಂ ಇಬ್ರಾಹಿಂ ಮನೆ ಮದ್ದು ಕಂಡು ಹಿಡಿದಿದ್ದಾರೆ.

      ಈ ಮದ್ದು ಬಳಸಿದರೆ ಕೊರೊನಾ ಹತ್ತಿರನೂ ಸುಳಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಹೇಳಿದ್ದು ಈಗ ಟಿಕ್‌ಟಾಕ್‌ನಲ್ಲೂ ಟ್ರೆಂಡ್ ಆಗ್ತಿದೆ. ಅಷ್ಟಕ್ಕೂ, ಸಿಎಂ ಇಬ್ರಾಹಿಂ ಹೇಳಿದ ಆ ಮದ್ದು ಯಾವುದು? ಮುಂದೆ ಓದಿ....

      ಕೊರೊನಾಗೆ ಇದೇ ಮದ್ದು!

      ಕೊರೊನಾಗೆ ಇದೇ ಮದ್ದು!

      ವೈದ್ಯರಿಂದ ರೋಗಕ್ಕೆ ಪರಿಹಾರ ಸಿಗದ ಸಂದರ್ಭದಲ್ಲಿ ನಾಟಿ ಔಷಧದ ಮೊರೆ ಹೋಗುವುದು ಸಹಜ. ಇದೀಗ, ಕೊರೊನಾಗೆ ಮಾಜಿ ಸಚಿವ ಇಬ್ರಾಹಿಂ ಅವರು ನಾಟಿ ಔಷಧ ಪರಿಹಾರ ಎಂದಿದ್ದಾರೆ. ಕೊರೊನಾ ಬರಬಾರದು ಅಂದ್ರೆ ಮೂರು ಹೊತ್ತು ಈರುಳ್ಳಿ ತಿನ್ನಿ ಎಂದು ಸಲಹೆ ನೀಡಿದ್ದಾರೆ. ಈರುಳ್ಳಿಗೆ ಉಪ್ಪು ಸೇರಿಸಿ ತಿಂದರೆ ಕೊರೊನಾ ಬರಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ.

      ನಮ್ಮಲ್ಲಿ ಹೆಚ್ಚು ಕ್ರಮ ತೆಗೆದುಕೊಳ್ಳಬೇಕು

      ನಮ್ಮಲ್ಲಿ ಹೆಚ್ಚು ಕ್ರಮ ತೆಗೆದುಕೊಳ್ಳಬೇಕು

      ಚೀನಾದಲ್ಲಿ, ಇಟಲಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡ್ತಾರೆ. ಹಣೆಗೆ ಇಟ್ಟ ತಕ್ಷಣ ಕೊರೊನಾ ಇದ್ಯಾ ಇಲ್ವಾ ಎಂದು ಪತ್ತೆಯಾಗುತ್ತೆ. ನಮ್ಮಲ್ಲಿ ರಕ್ತ ತೆಗೆದು ವರದಿ ಬರುವಷ್ಟರಲ್ಲಿ ರೋಗಿ ಹೋಗಿರ್ತಾನೆ. ಜಿಲ್ಲೆಗೆ ಮೂರು ತಪಾಸಣೆ ಕೇಂದ್ರ ಆರಂಭಿಸಬೇಕು. ಇದರ ಬಗ್ಗೆ ಆರೋಗ್ಯ ಇಲಾಖೆ ಗಮನ ಕೊಡಬೇಕು. ಅದನ್ನು ಬಿಟ್ಟು ಫೋನ್‌ನಲ್ಲಿ ಕೆಮ್ಮುವ ಕಾಲರ್ ಟ್ಯೂನ್ ಹಾಕಿದ್ರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

      ಟಿಕ್‌ಟಾಕ್‌ನಲ್ಲಿ ಟ್ರೆಂಡ್ ಆಯ್ತು

      ಟಿಕ್‌ಟಾಕ್‌ನಲ್ಲಿ ಟ್ರೆಂಡ್ ಆಯ್ತು

      ಎಂಎಲ್‌ಸಿ ಇಬ್ರಾಹಿಂ ಅವರು ಕೊರೊನಾಗೆ ಈರುಳ್ಳಿ ಮದ್ದು ಎಂಬ ಸಲಹೆ ನೀಡಿದ ಬೆನ್ನಲ್ಲೆ, ಟಿಕ್‌ಟಾಕ್‌ನಲ್ಲಿ ಈರುಳ್ಳಿ ಔಷಧ ಟ್ರೆಂಡ್ ಆಗ್ತಿದೆ. 'ಕೊರೊನಾ ಹರಡಬಾರದು ಎಂದರು ಈರುಳ್ಳಿ ಕಟ್‌ ಮಾಡಿ, ಉಪ್ಪು ಸೇರಿಸಿ ಮೂರು ಸಮಯ ತಿನ್ನಿ ಎಂದು' ಯುವತಿ ಸಲಹೆ ನೀಡುತ್ತಿದ್ದಾರೆ.

      ಬೆಂಗಳೂರಿನಲ್ಲಿ ಕೊರೊನಾ?

      ಬೆಂಗಳೂರಿನಲ್ಲಿ ಕೊರೊನಾ?

      ಕರ್ನಾಟಕದಲ್ಲಿ ಇದುವರೆಗೂ ಒಟ್ಟು ನಾಲ್ಕು ಕೊರೊನಾ ವೈರಸ್‌ ಪ್ರಕರಣಗಳು ಪತ್ತೆಯಾಗಿದೆ. ಭಾರತದಲ್ಲಿ ಸುಮಾರು 62 ಕೇಸ್‌ಗಳು ವರದಿಯಾಗಿದೆ. ಭಾರತದಲ್ಲಿ ಇದುವರೆಗೂ ಕೊರೊನಾಗೆ ಯಾರೂ ಬಲಿಯಾಗಿಲ್ಲ. ಆದರೆ, ಜಗತ್ತಿನಲ್ಲಿ ಸುಮಾರು 4300 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+