Breaking; 78 ದಿನಗಳ ಬಳಿಕ ಗುಜರಾತ್‌ನಲ್ಲಿ ಬೆಂಗಳೂರು ಬಾಲಕಿ ಪತ್ತೆ
ಬೆಂಗಳೂರು, ಜನವರಿ 18; ಬೆಂಗಳೂರಿನಿಂದ ನಾಪತ್ತೆಯಾಗಿದ್ದ 17 ವರ್ಷದ ಬಾಲಕಿ 78 ದಿನಗಳ ಬಳಿಕ ಗುಜರಾತ್‌ನ ಸೂರತ್‌ನಲ್ಲಿ ಪತ್ತೆಯಾಗಿದ್ದಾಳೆ. ಯುವತಿ ಮಾಟ ಮಂತ್ರದ ಆಕರ್ಷಣೆಗೆ ಒಳಗಾಗಿ ನಾಪತ್ತೆಯಾಗಿದ್ದಾಳೆ ಎಂದು ಶಂಕಿಸಲಾಗಿತ್ತು.
ಅಕ್ಟೋಬರ್ 31 ರಂದು ಅನುಷ್ಕಾ (17) ಬೆಂಗಳೂರಿನಿಂದ ನಾಪತ್ತೆಯಾಗಿದ್ದಳು. ಸಾಮಾಜಿಕ ಜಾಲತಾಣದ ಮೂಲಕ ಪುತ್ರಿಗಾಗಿ ಅಭಿಷೇಕ್ ಮತ್ತು ಅರ್ಚನಾ ದಂಪತಿ ಹುಡುಕಾಟ ನಡೆಸುತ್ತಿದ್ದರು. ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲು ಮಾಡಲಾಗಿತ್ತು.
ಗುಜರಾತ್ ರಾಜ್ಯದ ಸೂರತ್‌ನ ಅನಾಥಶ್ರಮದಲ್ಲಿ ಅನುಷ್ಠಾ ಪತ್ತೆಯಾಗಿದ್ದಾಳೆ. ಬೆಂಗಳೂರು ಪೊಲೀಸರ ವಶಕ್ಕೆ ಆಕೆಯನ್ನು ನೀಡಲಾಗಿದ್ದು, ಪೊಲೀಸರು ಕುಟುಂಬದವರಿಗೆ ಹಸ್ತಾಂತರ ಮಾಡಿದ್ದಾರೆ.

Shamanism (ಆತ್ಮಗಳ ಜೊತೆ ಸಂಭಾಷಣೆ) ಮಾದರಿಯನ್ನು ಕಲಿಯಲು ಅನುಷ್ಕಾ ಬಯಸಿದ್ದಳು. ಆದರೆ ಪೋಷಕರು ಮನೆಯಲ್ಲಿಯೇ ಕಲಿಯುವಂತೆ ಹೇಳಿದ್ದರು. ಆದರೆ ಅಕ್ಟೋಬರ್ 31ರಂದು ಅನುಷ್ಕಾ ಮನೆಯಿಂದ ನಾಪತ್ತೆಯಾಗಿದ್ದಳು. ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
"ಯಾರೋ ಆಕೆಯ ಮೇಲೆ ಪ್ರಭಾವ ಬೀರಿದ್ದಾರೆ. ಆಕೆ ಮನೆ ಬಿಟ್ಟು ಬೇರೆಲ್ಲೂ ಒಬ್ಬಳೇ ಹೋದವಳಲ್ಲ. ಸಾಮಾಜಿಕ ಜಾಲತಾಣದ ಮೂಲಕ ಆಕೆಯನ್ನು ಹುಡುಕಲು ಪ್ರಯತ್ನ ನಡೆಸುತ್ತಿದ್ದೇನೆ" ಎಂದು ಅನುಷ್ಕಾ ತಂದೆ ಅಭಿಷೇಕ್ ಹೇಳಿದ್ದರು.
Karnataka: Family members of a minor girl, missing for the last 2 months from Bengaluru, suspect a 'shamanism' connection to her disappearance
— ANI (@ANI) December 30, 2021
"She told us that she wanted to do shamanism type of meditation. We told her to learn it at home only," says her mother Archana (1/2) pic.twitter.com/3su6RpuGDP
ಸಿಸಿಟಿವಿ ದೃಶ್ಯಾವಳಿ; ಅಕ್ಟೋಬರ್ 31 ರಂದು ಅನುಷ್ಕಾ ಮನೆಯಿಂದ ಎರಡು ಜೊತೆ ಬಟ್ಟೆ ಮತ್ತು 2,500 ರೂ.ಗಳ ಜೊತೆ ಹೊರಟವಳು ನಾಪತ್ತೆಯಾಗಿದ್ದಳು. ಎರಡು ತಿಂಗಳು ಕಳೆದರೂ ಆಕೆ ಪತ್ತೆಯಾಗಿರಲಿಲ್ಲ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಸುಳಿವು ಪತ್ತೆಯಾಗಿರಲಿಲ್ಲ.
ಅನುಷ್ಕಾ ಆನ್‌ಲೈನ್ ಮೂಲಕ ಓದುವಾಗ Shamanism ನತ್ತ ಆಕರ್ಷಿತಳಾಗಿದ್ದಳು. ಸೆಪ್ಟೆಂಬರ್‌ನಲ್ಲಿಯೇ ಆಕೆಯ ವರ್ತನೆಯಲ್ಲಿ ಬದಲಾವಣೆಗಳಾಗಿದ್ದವು. ಯಾರೊಂದಿಗೂ ಬೆರೆಯಲು ಇಷ್ಟಪಡದಿದ್ದ ಆಕೆ ಸದಾ ಏಕಾಂಗಿಯಾಗಿ ಇರುತ್ತಿದ್ದಳು. ಇದನ್ನು ಗಮನಿಸಿದ್ದ ತಂದೆ-ತಾಯಿ ಕೌನ್ಸಿಲಿಂಗ್ ಸಹ ಮಾಡಿಸಿದ್ದರು. ಆದರೂ ಆಕೆ ಸರಿ ಹೋಗಿರಲಿಲ್ಲ.












Click it and Unblock the Notifications