ಹನುಮಾನ್ ಚಾಲೀಸಾ ಹಾಕಿದವನ ಮೇಲೆ ಹಲ್ಲೆ: 3 ಬಂಧನ, ಬಿಜೆಪಿ ನಾಯಕರಿಂದ ಸ್ಥಳ ಭೇಟಿ: ನಡೆದಿದ್ದೇನು?
ಬೆಂಗಳೂರು, ಮಾರ್ಚ್ 19: ಮೊಬೈಲ್ ಬಿಡಿ ಭಾಗಗಳ ಅಂಗಡಿಯೊಂದರಲ್ಲಿ ಹನುಮಾನ್ ಚಾಲೀಸಾ (ಆಡಿಯೋ) ಹಾಕಿದ್ದಕ್ಕೆ ಮೂರು ಪುಂಡರು ಬಂದು ಹಲ್ಲೆ ಮಾಡಿ, ಅಂಗಡಿ ಮಾಲೀಕನನ್ನು ಥಳಿಸಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಘಟನೆಯಲ್ಲಿ ಹಲ್ಲೆ ಮಾಡಿದ್ದು ಅನ್ಯಕೋಮಿನ ಯುವಕರು ಎನ್ನಲಾಗಿದೆ. ಅಂಗಡಿ ಮಾಲೀಕ ಕಬ್ಬನ್ ಪೇಟೆ ನಿವಾಸಿಯಾಗಿರುವ ಮುಖೇಶ್ (26) ನಗರ್ತಪೇಟೆಯ ಸಿದ್ಧಣ್ಣ ಗಲ್ಲಿಯ ಮಸೀದಿ ರಸ್ತೆಯಲ್ಲಿ ಅಂಗಡಿ ಇಟ್ಟಿದ್ದರು. ಇವರ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದರು. ಘಟನೆ ಬಳಿಕ ಬಿಜೆಪಿ ಇಬ್ಬರು ಸಂಸದರು ಅಂಗಡಿ ಮಾಲೀಕನನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಈ ಕುರಿತ ಮಾಹಿತಿಯನ್ನು ಬಿಜೆಪಿ ನಾಯಕ ಸಿಟಿ ರವಿ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಮೊಬೈಲ್ ಬಿಡಿಭಾಗಗಳ ಅಂಗಡಿಯ ಮುಖೇಶ್ ಮೇಲೆ ಭಾನುವಾರ ದಾಳಿ ನಡೆಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮುಖೇಶ್ ದೂರು ನೀಡಿದ್ದಾರೆ. ಶೋಧಕ್ಕಿಳಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Under the Tughlaq Durbar of CONgress in Karnataka, it is a crime to be a Hindu listening to Hanuman Chalisa in your own shop in Bengaluru.
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) March 18, 2024
Brothers of DCM D K Shivakumar will attack you !
How long should Hindus suffer due to the Appeasement Politics of Communal CONgress ? pic.twitter.com/gHLC50zwbx
ಘಟನೆಯ ವಿವರ
ಹಲ್ಲೆಗೊಳಗಾದ ಮುಖೇಶ್ 'ಕೃಷ್ಣ ಟೆಲಿಕಾಂ' ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದ. ಘಟನೆ ದಿನ ಹನುಮಾನ್ ಚಾಲೀಸಾ ಹಾಕಿ ಕೇಳುತ್ತಿದ್ದ. ಈ ವೇಳೆ ಅಲ್ಲಿಗೆ ಬಂದ ಈ ಬಂಧಿತ ಮೂವರು ಆರೋಪಿಗಳು ನಿನ್ನ ಅಂಗಡಿಯಿಂದ ಹೆಚ್ಚು ಸೌಂಡ್ ಬಂದು ಬೇರೆಯವರಿಗೆ ತೊಂದರೆ ಆಗುತ್ತಿದೆ ಎಂದು ಕೆಣಕಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ.
ನೋಡ ನೋಡುತ್ತಿದ್ದಂತೆ ಅಂಗಡಿ ಒಳಗಿನಿಂದ ಮುಖೇಶ್‌ನನ್ನು ಎಳೆದಾಡಿದ್ದಾರೆ. ಮೂವರು ಸೇರಿ ರಸ್ತೆ ಎಳೆದು ತಂದು ಆತನನ್ನು ಕೆಡವಿ ಮನಬಂದಂತೆ ಥಳಿಸಿದ್ದಾರೆ. ಉಗುರುಗಳಿಂದ ಮುಖ ಪರಚಿದ್ದಾರೆ ಎನ್ನಲಾಗಿದೆ. ಕಾಲಲ್ಲಿ ಒದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬಳಿಕ ಅಲ್ಲಿಂದ ಆರೋಪಿಗಳು ತೆರಳಿದ್ದಾರೆ.
ಕೆಲವರ ಮೇಲೆ ಎಫ್‌ಐಆರ್, 3 ಬಂಧನ
ಹಲ್ಲೆಗೆ ಒಳಗಾದ ಸಂತ್ರಸ್ತ ಕೂಡಲೇ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), 506 (ಕ್ರಿಮಿನಲ್ ಬೆದರಿಕೆ), 504 (ಪ್ರಚೋದನೆ), ಮತ್ತು 323ಅಡಿ (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಪ್ರಕರಣ ದಾಖಲಿಸಲಾಗಿದೆ. .
ಪೊಲೀಸರು ಆರೋಪಿಗಳಾದ ಸುಲೇಮಾನ್, ಶಹನವಾಜ್, ರೋಹಿತ್, ದ್ಯಾನೀಶ್ ಮತ್ತು ತರುಣಾ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪೈಕಿ ಹಲ್ಲೆ ಮಾಡಿದ ಸುಲೇಮಾನ್, ಶಹನವಾಜ್ ಮತ್ತು ರೋಹಿತ್ ಮೂವರನ್ನು ಬಂಧಿಸಿದ್ದಾರೆ.

ಬಿಜೆಪಿ ಸಂಸದರು ಭೇಟಿ, ಸಾಂತ್ವನ
ಪುಂಡರಿಂದ ಹಲ್ಲೆಗೆ ಒಳಗಾದ ಸಂತ್ರಸ್ತ ಮುಖೇಶ್ ನನ್ನು ಸೋಮವಾರ ಬಿಜೆಪಿ ನಾಯಕರಾದ ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಶಾಸಕ ಉದಯ ಗರುಡಾಚಾರ್, ಎಂಎಲ್‌ಸಿ ಛಲವಾದಿ ನಾರಾಯಣ ಸೇರಿದಂತೆ ಇನ್ನಿತರರು ಭೇಟಿ ಮಾಡಿದರು.
ಘಟನೆ ಕುರಿತು ಸಂತ್ರಸ್ತರನಿಂದ ಮಾಹಿತಿ ಪಡೆದ ನಾಯಕರು ಆತನಿಗೆ ಸಾಂತ್ವನ ಹೇಳಿದರು. ಧೈರ್ಯ ತುಂಬಿದರು. ಹಲ್ಲೆ ನಡೆದ ಸ್ಥಳ, ಅಂಗಡಿಗೆ ಭೇಟಿ ಕೊಟ್ಟು ಪರಿಶೀಲಿಸಿದರು. ಆರೋಪಿಗಳ ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದರು.
Visited Mukesh, the shopkeeper who fell victim to a brutal assault by unruly youth for playing Bhajans at his premises. It's regrettable that under this Congress administration, such extremist elements feel empowered to target innocent individuals.
— Tejasvi Surya (ಮೋದಿಯ ಪರಿವಾರ) (@Tejasvi_Surya) March 18, 2024
Urging @CPBlr to swiftly… pic.twitter.com/4Pcoikthaz
ಈ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಮುಖೇಶ್ ಹಿಂದಿ ಭಾಷಿಕನಾಗಿದ್ದು, ಆತನಿಗೆ ಕನ್ನಡ ಅಷ್ಟಾಗಿ ಬರುವುದಿಲ್ಲ. ಸಿಸಿಟಿ ಆಧರಿಸಿ ಪೊಲೀಸರು ಪ್ರಾಮಾಣಿಕವಾಗಿ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಬೇಕು. ಇನ್ನೂ ದೂರುದಾರರು ನೀಡಿದ ದೂರಿನಲ್ಲಿ ಹನುಮಾನ್ ಚಾಲೀಸಾ ಬಗ್ಗೆ ಉಲ್ಲೇಖಿಸಿಲ್ಲ ಎಂದು ತಿಳಿಸಿದರು.
ಮುಖೇಶ್ ಮೇಲೆ ಹಲ್ಲೆ ಖಂಡಿಸಿ ಆ ರಸ್ತೆಯಲ್ಲಿನ ವರ್ತಕರು ಪೊಲೀಸ್ ಠಾಣೆ ಮುಂದೆ ನ್ಯಾಯಕ್ಕಾಗಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟಿಸಿದರು. ಕೆಲವು ವರ್ತಕರು ಮುಖೇಶ್ ಅಂಗಡಿ ಬಳಿ ಹನುಮಾನ್ ಚಾಲಿಸಾ ಪಠಿಸಿದರು.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
IPL 2026: ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications