• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋರಮಂಗಲ : ಬಾಲಕಿ ಮೇಲೆ ಅತ್ಯಾಚಾರ, ನೆರೆಮನೆಯಾತ ಸೆರೆ

By Mahesh
|

ಬೆಂಗಳೂರು, ಜ. 19: ನಗರದ ಕೋರಮಂಗಲ ಸಮೀಪದ ವೆಂಕಟಾಪುರದ ಬಡಾವಣೆಯಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಯುವಕನನ್ನು ಮಡಿವಾಳ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

8 ವರ್ಷ ವಯಸ್ಸಿನ ಬಾಲಕಿಯ ನೆರೆಮನೆಯಲ್ಲಿ ವಾಸಿಸುತ್ತಿದ್ದ ರವಿಚಂದ್ರನ್ ಎಂಬ 18 ವರ್ಷದ ಯುವಕ ಸೆರೆ ಸಿಕ್ಕಿರುವ ಆರೋಪಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನಿನ್ನೆ ಸಂಜೆ ಮನೆ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ರವಿಚಂದ್ರನ್ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಮನೆಯವರಿಗೆ ತಿಳಿಸಿದರೆ ನಿನ್ನನ್ನು ಕೊಂದು ಹಾಕುತ್ತಾನೆ ಎಂದು ಬೆದರಿಸಿ, ಪರಾರಿಯಾಗಿದ್ದ.

ಮನೆಗೆ ಬಂದ ಬಾಲಕಿ ಸುಮ್ಮನೆ ಮಲಗಿ ಬಿಟ್ಟಿದ್ದಾಳೆ. ಆದರೆ, ಮೂತ್ರವಿಸರ್ಜನೆ ಮಾಡಲು ಹೋದಾಗ ರಕ್ತಸ್ರಾವವಾಗಿದ್ದನ್ನು ಕಂಗಾಲಾಗಿ ತನ್ನ ಅಮ್ಮನ ಬಳಿ ಹೇಳಿಕೊಂಡಿದ್ದಾಳೆ. ಬಾಲಕಿಯ ಪೋಷಕರು ವಿಚಾರಣೆ ನಡೆಸಿದಾಗ ಪಕ್ಕದ ಮನೆ ಯುವಕನ ಕುಕೃತ್ಯ ಬಯಲಿಗೆ ಬಂದಿದೆ. ತಕ್ಷಣವೇ ಮಡಿವಾಳ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ. ಬಾಲಕಿ ನೀಡಿದ ಸುಳಿವಿನ ಮೇರೆಗೆ ಬಲೆ ಬೀಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಶಾಲಾ ಬಾಲಕಿ, ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ನಗರ ದಕ್ಷಿಣ ಭಾಗದಲ್ಲಿರುವ ಬೇಗೂರಿನ ಖಾಸಗಿ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಜ. 4 ರಂದು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಯುವಕನೊಬ್ಬ ರೇಪ್ ಮಾಡಿದ್ದ. ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು ಕುತೂಹಲಕ್ಕಾಗಿ ಎಂದು ತಪ್ಪೊಪ್ಪಿಗೆ ನೀಡಿದ್ದ ಆರೋಪಿಯ ವಯಸ್ಸು ಇನ್ನೂ 13 ದಾಟಿಲ್ಲದಿರುವುದು ಆತಂಕಕಾರಿಯಾಗಿದೆ. [ವಿವರ ಇಲ್ಲಿ ಓದಿ]

ಕರ್ನಾಟಕದಲ್ಲಿ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣ

ಇದರ ಜತೆಗೆ ಕರ್ನಾಟಕದಲ್ಲಿ ಅದರಲ್ಲೂ ನಗರ ಪ್ರದೇಶದಲ್ಲಿ ವಾಸಿಸುವ 5 ರಿಂದ 15 ವರ್ಷ ಕೆಳಗಿನ ವಯಸ್ಕರು ಅತಿ ಹೆಚ್ಚು ಮದ್ಯಪಾನ ಸೇವಿಸುತ್ತಿದ್ದಾರೆ. 18 ರಿಂದ 27 ವರ್ಷದೊಳಗಿನ ಶೇ.88.9ರಷ್ಟು ಯುವಕರು ಮದ್ಯಪಾನ ವ್ಯಸನಿಗಳಾಗಿದ್ದಾರೆ ಎಂಬ ಸಮೀಕ್ಷೆ ವರದಿ ಇಲ್ಲಿ ಉಲ್ಲೇಖಾರ್ಹ

ಅಸ್ವಾಭಾವಿಕ ಮರಣ ಪ್ರಕರಣ

ಅಸ್ವಾಭಾವಿಕ ಮರಣ ಪ್ರಕರಣ

ಶಂಕರನಾರಾಯಣ: ರತ್ನಾಕರ ಶೆಟ್ಟಿ (63) ತಂದೆ: ದಿ| ಬಿ ಹೆರಿಯಣ್ಣ ಶೆಟ್ಟಿ ವಾಸ: ಎಲ್‌ಐಸಿ ರಸ್ತೆ ವಡೇರ ಹೋಬಳಿ ಕುಂದಾಪುರ ತಾಲೂಕು ಇವರ ಮಗ ಹರ್ಷ ಶೆಟ್ಟಿ ಪ್ರಾಯ:31 ವರ್ಷ ಎಂಬುವವನ ಹೆಸರಿನಲ್ಲಿ 5 ಲಕ್ಷ ರೂಪಾಯಿ ಹಣವನ್ನು ಡೆಪಾಸಿಟ್‌ಇಟ್ಟಿದ್ದು ಆತನು ಆ ಹಣವನ್ನು ಡ್ರಾ ಮಾಡಿ ಯಾರೂ ಗೆಳಯರಿಗೆ ನೀಡಿ ಕಳೆದು ಕೊಂಡಿದ್ದು ಅದನ್ನು ಹೊಂದಿಸಲಿಕ್ಕಾಗದೇ ಮನನೊಂದು ಜೀವನದಲ್ಲಿ ಬೇಸರಗೊಂಡು ದಿನಾಂಕ 18/01/2014 ರಂದು ಮದ್ಯಾಹ್ನ 01:00 ಗಂಟೆಯಿಂದ 01:45 ಗಂಟೆಯ ನಡುವಿನ ಅವದಿಯಲ್ಲಿ ಕುಂದಾಪುರ ತಾಲೂಕು ಕುಳ್ಳುಂಜೆ ಗ್ರಾಮದ ಕುಂಬಾರಮಕ್ಕಿ ಎಂಬಲ್ಲಿರುವ ವಿರಾಜ್‌ಎಂಬುವವರ ಬಾಬ್ತು ವಾಸ್ಥವ್ಯವಿಲ್ಲದ ಹಳೆಯ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ರತ್ನಾಕರ ಶೆಟ್ಟಿ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 02/2014 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನೆಯ ಬೀಗ ಮುರಿದು ಕಳ್ಳತನ

ಮನೆಯ ಬೀಗ ಮುರಿದು ಕಳ್ಳತನ

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌನ್, ಎ.ಡಿ. ಕಾಲೋನಿಯ ವಾಸಿ ನಾರಾಯಣಸ್ವಾಮಿ ರವರು ತಮ್ಮ ಮನೆಗೆ ಬೀಗವನ್ನು ಹಾಕಿಕೊಂಡು ತಮ್ಮ ಸ್ವಂತ ಊರಿಗೆ ಹೋಗಿದ್ದು. ಈ ಸಮಯದಲ್ಲಿ ನಾರಾಯಣಸ್ವಾಮಿ ರವರ ಮನೆಯ ಬೀಗವನ್ನು ಮುರಿದು ಒಳ ಪ್ರವೇಶಿಸಿದ ಯಾರೋ ಕಳ್ಳರು ಮನೆಯಲ್ಲಿದ್ದ ಸುಮಾರು ೮೦೦ ಗ್ರಾಂ ತೂಕದ ವಡವೆಗಳನ್ನು ಮತ್ತು ೪೩,೦೦೦-೦೦ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಹರಿಹರಪುರ ಹಾವಿನ ವಿಷ ವಶ

ಹರಿಹರಪುರ ಹಾವಿನ ವಿಷ ವಶ

ಹರಿಹರಪುರ ಪೊಲೀಸ್‌ ಠಾಣೆ ಮೊ.ಸಂ.01/2014 - ಕಲಂ: 49 51 ವನ್ಯ ಜೀವಿ ಸಂರಕ್ಷಣಾ ಕಾಯ್ದೆ : ಪಿ.ಎಸ್. ಐ. ಅರಣ್ಯ ಸಂಚಾರಿ ದಳರವರು ಮೂರು ಜನ ಆರೋಪಿಗಳನ್ನು ನೀಡಿದ್ದನ್ನು ಸ್ವೀಕರಿಸಿಕೊಂಡಿದ್ದು ಸಾರಾಂಶವೇನೆಂದರೆ ಈ ದಿನ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕ್, ಬೇಗಾರು ಕೈಮರ ಸರ್ಕಲ್ ಬಳಿ, ಆರೋಪಿತರುಗಳಾದ 1) ಜುಬೇರ್ ಅಹ್ಮದ್,@ ಜುಬೇರ್ ಬಿನ್ ಖಾಸಿಂ ಸಾಬ್,. 2) ಪ್ರಭಾಕರ ಪೂಜಾರಿ 3) ಹೆಚ್ ಎಮ್ ವಿಜಯ ಬಿನ್ ಮಂಜಪ್ಪ ಶಿವಮೊಗ್ಗ ಜಿಲ್ಲೆ, ಇವರುಗಳು ಒಂದು ಏರು ಬ್ಯಾಗ್ ನಲ್ಲಿ ಒಂದೊಂದು ಲೀಟರಿನ ಎರಡು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹಾವಿನ ವಿಷವನ್ನು ತುಂಬಿ ಇಟ್ಟುಕೊಂಡು ಎರಡು ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವ ಸಲುವಾಗಿ ಯತ್ನಿಸುತ್ತಿದ್ದವರನ್ನು, ಆರೋಪಿಗಳನ್ನು ಹಿಡಿದು ಎರಡು ಲೀಟರ್ ಬಾಟಲ್ ಹಾವಿನ ವಿಷವನ್ನು ವಷಕ್ಕೆ ಪಡೆದುಕೊಂಡಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಇದ್ದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ನಿವೇದಿಸಿಕೊಂಡಿರುತ್ತೆ.

ಶಿವಮೊಗ್ಗ : ಕಳುವು ಪ್ರಕರಣ

ಶಿವಮೊಗ್ಗ : ಕಳುವು ಪ್ರಕರಣ

ಜಯನಗರ ಠಾಣೆಃ- ಕಳುವು ಪ್ರಕರಣ

ಕೆ.ಎನ್.ಯೋಗೀಶ ಬಿನ್ ಕೆ.ಜಿ.ನಾಗರಾಜಪ್ಪ, 33 ವರ್ಷ, ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ ಇವರು ಪಾರ್ಕ್ ಬಡಾವಣೆಯ ಭೋವಿ ಕಾಂಪ್ಲೇಕ್ಸ್‍ನಲ್ಲಿ ಕರ್ನಾಟಕ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಇಟ್ಟಿಕೊಂಡಿದ್ದು, ರಾತ್ರಿ ಬೀಗ ಹಾಕಿಕೊಂಡು ಹೋಗಿದ್ದು, ಎಂದಿನಂತೆ ಬೆಳಿಗ್ಗೆ ಬಂದು ನೋಡಿದಾಗ ಯಾರೋ ಕಳ್ಳರು ಅಂಗಡಿಯ ಬೀಗ ಮುರಿದು ಕ್ಯಾಷ್ ಡ್ರಾದಲ್ಲಿ ಇಟ್ಟಿದ್ದ ರೂ. 24,000/-ಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 8 year girl allegedly raped by a 18 year old young man in Venkatapura, Koramangala. Madiwala police arrested the accused Ravichandran and sent to jail today(Jan.19)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more