ಹತ್ತು ವರ್ಷದ ಬಾಲಕಿ ಎರಡು ತಿಂಗಳ ಗರ್ಭಿಣಿ !
ಬೆಂಗಳೂರು, ಫೆಬ್ರವರಿ 10: ತನ್ನ ಮಗಳ ವಯಸ್ಸಿನ ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಎರಡು ತಿಂಗಳ ಗರ್ಭಿಣಿ ಮಾಡಿರುವ ಘಟನೆ ಬೆಂಗಳೂರಿನ ಹೊರ ವಲಯದಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಹತ್ತು ವರ್ಷದ ಬಾಲಕಿ ತನ್ನ ಸೋದರ ಮಾವನ ಮನೆಯಲ್ಲಿ ವಾಸವಾಗಿದ್ದಳು. ಕೂಲಿ ಕೆಲಸ ಮಾಡುವ ಸೋದರ ಮಾವನ ಸಂಬಂಧಿ ಪಕ್ಕದಲ್ಲಿಯೇ ವಾಸವಾಗಿದ್ದರು. ಹತ್ತು ವರ್ಷದ ಬಾಲಕಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಕಳೆದ ಬುಧವಾರ ಆಸ್ಪತ್ರೆಗೆ ದಾಖಲಿಸಿದಾಗ ಹತ್ತು ವರ್ಷದ ಬಾಲಕಿ ಎರಡು ತಿಂಗಳ ಗರ್ಭಿಣಿಯಾಗಿರುವ ಸಂಗತಿ ಗೊತ್ತಾಗಿದೆ.
ಬಾಲಕಿಯನ್ನು ವಿಚಾರಣೆ ನಡೆಸಿದಾಗ ಸೋದರ ಮಾವ ಹಾಗೂ ಸಂಬಂಧಿ ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡಿರುವ ವಿಷಯವನ್ನು ಹೇಳಿದ್ದಾಳೆ. ಈ ವಿಷಯ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ. ವಿಷಯ ತಿಳಿಸಿದರೆ ಜೀವ ಸಮೇತ ಇರಲ್ಲ ಎಂದು ಹೆದರಿಕೆ ಹುಟ್ಟಿಸಿದ್ದಾರೆ. ಇದರಿಂದ ಮಗು ಯಾರಿಗೂ ಹೇಳಿರಲಿಲ್ಲ.
ಇದೀಗ ಬಾಲಕಿ ಹೇಳಿಕೆ ಅಧರಿಸಿ ಸರ್ಜಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಬಳಿಕ ಬಾಲಕಿಯ ಸೋದರ ಮಾವ ಹಾಗೂ ಸಂಬಂಧಿಯನ್ನು ಸರ್ಜಾಪುರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಯನ್ನು ಆನೇಕಲ್‌ನ ಮಕ್ಕಳ ಆರೈಕೆ ಕೇಂದ್ರಕ್ಕೆ ರವಾನಿಸಿ ಹಾರೈಕೆ ಮಾಡಲಾಗುತ್ತಿದೆ. ತನ್ನ ಮಗಳ ವಯಸ್ಸಿನ ಮಗು ಮೇಲೆ ಕಾಮ ತೃಷೆ ತೋರಿಸಿಕೊಂಡಿರುವ ಈ ಕಿರಾತಕರಿಗೆ ಪೊಲೀಸರೇ ಸರಿಯಾದ ಬುದ್ಧಿ ಕಲಿಸಬೇಕು.