Get Updates
Get notified of breaking news, exclusive insights, and must-see stories!

₹7,00,00,000 ವೆಚ್ಚದ POW ಕಾಮಗಾರಿಗಳಿಗೆ ಮರು ಟೆಂಡರ್ : ರಾಮಲಿಂಗಾ ರೆಡ್ಡಿ

ಬೆಂಗಳೂರು, ನವೆಂಬರ್ 08: ಬಿ.ಟಿ.ಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 2024-25ನೇ ಸಾಲಿನ ಅನುಮೋದಿತ ರೂ.27 ಕೋಟಿಗಳ ಪಿ.ಓ.ಡಬ್ಲ್ಯೂ. ಕಾಮಗಾರಿಗಳ ಪೈಕಿ ಕೆಲವೊಂದು ಇನ್ನೂ ಪ್ರಾರಂಭ ಆಗಿಲ್ಲ. ಈ ಯೋಜನೆಗಳನ್ನಿ ಆರಂಭಿಸಬೇಕು. ಈ ಪೈಕಿ ಜೆ.ಡಿ. ಮರ ಸ್ಲಂ, ಎನ್.ಎಸ್ ಪಾಳ್ಯ ವಾರ್ಡ್ ನ ಅಂಗನವಾಡಿ ಕಟ್ಟಡ ಕಾಮಗಾರಿ ಕೂಡಲೇ ಪ್ರಾರಂಭಿಸುವಂತೆ ಸಚಿವ ಬಿಟಿಎಂ ಶಾಸಕ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದರು.

ಇಂದು ಶನಿವಾರ ಸಚಿವರು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಬಳಿಕ ಮಾತನಾಡಿದ ಅವರು, ಮಂದಗತಿಯಲ್ಲಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿರುತ್ತದೆ. ಆದರೂ ಸಹ ಗುತ್ತಿಗೆದಾರರು ಹೆಚ್ಚುವರಿ ಕಾಲಾವಕಾಶದಲ್ಲಿಯೂ ಕಾಮಗಾರಿ ಸರಿಯಾಗಿ ನಿರ್ವಹಿಸದಿರುವ ಪ್ರಕರಣಗಳಲ್ಲಿ ಟೆಂಡರ್‌ ರದ್ದುಪಡಿಸಿ ಮರುಟೆಂಡರ್‌ ಕರೆಯುವಂತೆ ಸೂಚಿಸಿದರು.

Minister Ramalinga Reddy Orders Re-Tender for Rs 7 Crore POW Works in BTM Layout

ಕಾಮಗಾರಿ ನಿರ್ವಹಿಸಿರುವ ಕುರಿತಂತೆ ಜಿ.ಪಿ.ಎಸ್. ಚಿತ್ರಗಳನ್ನು ಒಳಗೊಂಡಂತೆ ಎಲ್ಲಾ ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಬಿಲ್‌ ಪಾವತಿಸಬೇಕು. ಯಾವುದೇ ಕಾಮಗಾರಿಯಲ್ಲಿನ ಟೆಂಡರ್ ಒಪ್ಪಂದದಲ್ಲಿರುವ ಎಲ್ಲಾ ಅಂಶಗಳನ್ನು ಪಾಲಿಸಬೇಕು. ಯಾವುದೇ ಗುತ್ತಿಗೆದಾರರು ಕರಾರಿನಲ್ಲಿರುವ ಅಂಶಗಳನ್ನು ಪಾಲಿಸದಿದ್ದಲ್ಲಿ ಕೂಡಲೇ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ನಿರ್ದೇಶಿಸಿದರು.

ಲಕ್ಕಸಂದ್ರ ಶಾಲೆ ಕಾಮಗಾರಿ ಪ್ರಾರಂಭಗೊಂಡಿದ್ದು, ಕಾಮಗಾರಿ ವೇಳೆ ಶಾಲಾ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗಬಾರದು. ಹಿಂದಿನ ಆರ್ಥಿಕ ಸಾಲುಗಳಲ್ಲಿ ಕರೆಯಲಾಗಿರುವ ಟೆಂಡರ್‌ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಸದರಿ ಕಾಮಗಾರಿಗಳು ಸಮರ್ಪಕವಾಗಿ ಮುಗಿದ ನಂತರವೇ ಚಾಲ್ತಿ ಸಾಲಿನ ಕಾಮಗಾರಿಗಳನ್ನು ಕುರಿತಂತೆ ಟೆಂಡರ್‌ ಕರೆಯಬೇಕು ಎಂದರು.

ಪಾದಚಾರಿ ಮಾರ್ಗದ ಸಮರ್ಥ ನಿರ್ವಹಣೆ

ಇನ್ನೂ ಕ್ಷೇತ್ರದಲ್ಲಿನ ರಸ್ತೆಗಳ ಪಾದಚಾರಿ ಮಾರ್ಗಗಳನ್ನು ಸರಿಯಾಗಿ ನಿರ್ವಹಿಸದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ ಸಚಿವರು ಸಂಬಂಧಪಟ್ಟ ಅಭಿಯಂತರರು ಕೂಡಲೇ ಎಚ್ಚೆತ್ತು ಕಾರ್ಯನಿರ್ವಹಿಸಬೇಕೆಂದರು. ಕ್ಷೇತ್ರದಲ್ಲಿ ಅಳವಡಿಸಲಾಗಿರುವ ಸಿ.ಸಿ ಟಿವಿಗಳು ಸರಿಯಾದ ನಿರ್ವಹಣೆಯಿಲ್ಲದೇ ಕೆಟ್ಟು ಹೋಗಿವೆ. ಅವೆಲ್ಲ ಪರಿಶೀಲಿಸಿ, ಅಗತ್ಯವಿರುವುದು ಹೊಸದಾಗಿ ಸಿ.ಸಿ ಟಿವಿಗಳನ್ನು ಅಳವಡಿಸಬೇಕೆಂದು ಹೇಳಿದರು.

ತಮ್ಮ ವಾರ್ಡ್‌ ವ್ಯಾಪ್ತಿಯಲ್ಲಿ ಎಲ್ಲಾ ರಸ್ತೆಗಳಲ್ಲಿ ಕಿರಿಯ ಹಾಗೂ ಸಹಾಯಕ ಅಭಿಯಂತರರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿ ಪ್ರತಿ ರಸ್ತೆಯಲ್ಲಿ ಪರಿಶೀಲಿಸಿದಾಗ ನಿರ್ವಹಣೆಗೆ ಕಂಡುಬರುವ ಕೆಲಸಗಳನ್ನು ಪಟ್ಟಿ ಮಾಡಿಕೊಂಡು ಮುಂದಿನ ದಿನಗಳಲ್ಲಿ ಕಾಮಗಾರಿ ನಿರ್ವಹಿಸಬೇಕು

ಸ್ಕೈವಾಕ್ ಗಳನ್ನು ಪಿಪಿಪಿ ಅಡಿ ಮರುಸ್ಥಾಪಿಸಿ

ಕ್ಷೇತ್ರದಲ್ಲಿ ಇರುವ ಹಲವಾರು ಸ್ಕೈವಾಕ್ ಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣಗಳಿಂದ ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ. ಆದುದರಿಂದ ಅವುಗಳನ್ನು PPP ಅಡಿಯಲ್ಲಿ ಮರುಸ್ಥಾಪಿಸಲು ಸೂಚಿಸಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಆಟೋಗಳನ್ನು ಪ್ರತಿನಿತ್ಯ ನಿಗದಿತ ಸಮಯಕ್ಕೆ ಕಳುಹಿಸಲು ಸೂಚಿಸಿದರು. ಸಿಲ್ಕ್ ಬೋರ್ಡ್ ಹಾಗೂ ಕೋರಮಂಗಲದ ಪಾಸ್ ಪೋರ್ಟ್ ಕಚೇರಿ ಬಳಿ ಬ್ಲಾಕ್ ಸ್ಪಾಟ್ ಗಳು ಹೆಚ್ಚಿದ್ದು ಕೂಡಲೇ ಅವುಗಳನ್ನು ತೆರವುಗೊಳಿಸಿ ನಾಗರಿಕರಿಗೆ ಸ್ವಚ್ಛ ವಾತಾವರಣ ಕಲ್ಪಿಸಬೇಕು.

ಈಜಿಪುರ ಮೇಲ್ಸೇತುವೆ: ಬೀದಿ ದೀಪ ಅಳವಡಿಕೆ

ಮುಂದಿನ ವರ್ಷ ಜುಲೈಗೆ ಸಿದ್ಧಗೊಳ್ಳಿರುವ ಈಜಿಪುರ ಮೇಲ್ಸೇತುವೆ ಬಳಿ ಬೀದಿ ದೀಪಗಳನ್ನು ಅಳವಡಿಸಬೇಕು. ಮಡಿವಾಳ ಕೆರೆ ಸಂಪೂರ್ಣ ಅಭಿವೃದ್ಧಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನಕ್ಕೆ ಒತ್ತು ಕೊಡುವಂತೆ ತಿಳಿಸಿ, ಅನಗತ್ಯ ಕಡೆಗಳಲ್ಲಿ ವೈಟ್ ಟಾಪಿಂಗ್ ರದ್ದುಗೊಳಿಸಿ ಕೆರೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು. ಈ ಮೂಲಕ ಕ್ಷೇತ್ರದ ಸಣ್ಣ ಸಣ್ಣ ನಾಗರಿಕ ಸಮಸ್ಯೆಗಳ ಪರಿಹಾರಕ್ಕೆ ಸಚಿವರು ಒತ್ತು ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+