ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮನಬಿಚ್ಚಿ ಮಾತನಾಡಿದ ಅಂಬರೀಷ್

By Mahesh
|
Google Oneindia Kannada News

ಬೆಂಗಳೂರು, ಏ.11: ವಸತಿ ಸಚಿವ ಅಂಬರೀಷ್ ಅವರು ಮಲೇಷಿಯಾದಿಂದ ಬೆಂಗಳೂರಿಗೆ ಹಿಂತಿರುಗಿದ ನಂತರ ಇದೇ ಮೊದಲ ಬಾರಿಗೆ ಪ್ರೆಸ್ ಕ್ಲಬ್ ವತಿಯಿಂದ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ನಗರದ ಅಶೋಕ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗೃಹಸಚಿವ ಕೆ.ಜೆ ಜಾರ್ಜ್, ಪುತ್ರ ಅಭಿಷೇಕ್ ಗೌಡ ಮುಂತಾದವರು ಹಾಜರಿದ್ದರು.

ಹೋಟೆಲ್ ಅಶೋಕದಲ್ಲಿ ಮನಬಿಚ್ಚಿ ಮಾತನಾಡಿದ ಅಂಬಿ:

Minister MH Ambareesh Press meet Lalit Ashok Hotel Bangalore

* ನಿಮ್ಮ ಜತೆ ನಾನು ಈಗಿರುವುದು ನನ್ನ ಅದೃಷ್ಟ, ನನ್ನ ನಿರ್ಲಕ್ಷ್ಯವೇ ಆರೋಗ್ಯ ಹದೆಗೆಡಲು ಕಾರಣ
* ಆದರೆ, ನಿರ್ಲಕ್ಷ್ಯದಿಂದ ನನಗೆ ಅಪಾರ ಪ್ರೀತಿ ಸಿಕ್ಕಿದೆ. ಯಾವುದೇ ಜಾತಿ, ಧರ್ಮ ಎನ್ನದೇ ಎಲ್ಲರೂ ನನಗೆ ಶುಭ ಹಾರೈಸಿದ್ದಾರೆ.
* ರಜನಿ ಅವರ ಪತ್ನಿ ನನಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.
* ಸಿಂಗಪುರದಲ್ಲಿ ನನ್ನನ್ನು ನೋಡಲು ಬಂದವರು ಶ್ರೀಮಂತರು ಮಾತ್ರವಲ್ಲ, ಬಡವರು ದುಡ್ಡು ಹಾಕಿಕೊಂಡು ಅಷ್ಟು ದೂರ ಬಂದಿದ್ದರು.
* ಅಷ್ಟೊಂದು ಜನರ ಬಳಿ ಪಾಸ್ ಪೋರ್ಟ್ ಇದೆ ವೀಸಾ ಪಡೆದು ಹೇಗೆ ಬಂದರೋ ಗೊತ್ತಿಲ್ಲ. ಬಂದವರೆಲ್ಲರ ಜತೆ ಕನಿಷ್ಠ 2 ನಿಮಿಷ ಮಾತನಾಡಿದ್ದೇನೆ.
* ಸಿಎಂ ಆಗುವ ಆಸೆ ನನಗಿಲ್ಲ, ಜನರ ಪ್ರೀತಿಗೆ ನಾನು ಋಣಿ
* ನಾನು ವೈದ್ಯರ ಸಲಹೆಯಂತೆ ನನ್ನ ಜೀವನ ಶೈಲಿ ಬದಲಾಯಿಸಿಕೊಳ್ಳುತ್ತೇನೆ. ಶಿಸ್ತುಬದ್ಧ ಜೀವನ ನಡೆಸುತ್ತೇನೆ.
* ಮಂಡ್ಯದ ರೈತರಿಗೆ ಬೆಂಬಲ ಬೆಲೆ, 2 ಸಕ್ಕರೆ ಕಾರ್ಖಾನೆ ಪುನಶ್ಚೇತನ, ಅನುದಾನ ನೀಡಿದ್ದರ ಬಗ್ಗೆ ಘೋಷಿಸಿದ ಅಂಬರೀಷ್ ಗೆ ತಕ್ಷಣವೇ ಚುನಾವಣಾ ನೀತಿ ಸಂಹಿತೆ ಇರುವುದು ಗೊತ್ತು. ಹಳೆಯದ್ದರ ಬಗ್ಗೆ ಹೇಳಿಕೊಳ್ಳಬಹುದು. ಇದೇನು ಹೊಸ ಆಶ್ವಾಸನೆಯಲ್ಲ ಎಂದರು.
* ಸಂಸದನಾಗಿ, ಶಾಸಕನಾಗಿ, ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ಕಾವೇರಿ ವಿಚಾರವಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟೆ. ಈಗ ರಾಜ್ಯದಲ್ಲಿ ವಸತಿ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ.
* ಇನ್ನು ಖಳನಾಯಕನಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ, ನಾಯಕನಾಗಿ, ಸಹ ನಟನಾಗಿಯೂ ಕೆಲಸ ಮಾಡಿದ್ದೇನೆ. ನನ್ನ ಈ ಎಲ್ಲ ಬೆಳವಣಿಗೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
* ಬೆಂಗಳೂರು-ಮೈಸೂರು ನಡುವೆ ಸುಗಮ ಸಂಚಾರಕ್ಕೆ ರಸ್ತೆ ಯೋಜನೆ ಮಾಡುವ ಆಶಯವಿದೆ ಎಂದರು.
* ಬೆಂಗಳೂರು-ಮೈಸೂರು ನಡುವೆ ಇನ್ನಷ್ಟು ಸ್ಯಾಟಲೈಟ್ ಟೌನ್ ಗಳು ನಿರ್ಮಾಣಗೊಳ್ಳಬೇಕು ಎಂಬುದು ನನ್ನಾಸೆ.

ಸುಮಲತಾ ಮಾತುಗಳು: 4.45: ರೆಬೆಲ್ ಸ್ಟಾರ್ ಪತ್ನಿ ಸುಮಲತಾ ಅವರು ಸುದ್ದಿಗೋಷ್ಠಿ ಹಾಜರಾದರು.
* ಸುಮಲತಾಳ ಪ್ರಯತ್ನದಿಂದ ನಾನು ಬೇಗ ಗುಣಮುಖನಾದೆ. ಎಷ್ಟೋ ಸಲ ಸುಮಲತಾ ಹೆಸರು ಹೇಳದೆ ಮರೆತು ಬಿಡುತ್ತೇನೆ ಎಂದು ಅಂಬರೀಷ್ ತಮಾಷೆ ಮಾಡಿದರು.
* ಈಗ ನಗು ನಗುತ್ತಾ ಮಾತನಾಡುವ ಸಂದರ್ಭ ಬಂದಿದೆ. ಈಗ ನನ್ನ ನಗುವಿಗೆ ಜನರ ಪ್ರೀತಿ, ವಿಶ್ವಾಸವೇ ಕಾರಣ.
* ಅಂಬರೀಷ್ ಯಾವುದೋ ಜನ್ಮದ ಪುಣ್ಯ ಮಾಡಿದ್ದಾರೆ ಎಂದು ಸುಮಲತಾ ಹೇಳುತ್ತಿದ್ದಂತೆ ಯಾವುದೋ ಜನ್ಮ ಯಾಕೆ ಈ ಜನ್ಮದ ಪುಣ್ಯ ಎಂದು ಅಂಬರೀಷ್ ದನಿಗೂಡಿಸಿದರು.
* ಅಭಿಮಾನಿಗಳು, ಮಾಧ್ಯಮದವರು ವಿಕ್ರಮ್ ಆಸ್ಪತ್ರೆ, ಸಿಂಗಪುರದ ವೈದ್ಯರು, ಮಿತ್ರರು ಸೇರಿದಂತೆ ಅಂಬರೀಷ್ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ನನ್ನ ಚಿರಋಣಿ ಎಂದು ಸುಮಲತಾ ಹೇಳಿದರು. [ರಿಯಲ್ ರಾಜಕೀಯದ ಬಗ್ಗೆ ಅಂಬರೀಷ್ ಮಾತುಗಳು ಇಲ್ಲಿ ಓದಿ]

English summary
Rebel Star, Minister MH Ambareesh returned to Bangalore on 11th April from Malaysia. Minister MH Ambareesh meets the Press club organized a press meet at Ashoka Hotel in which home minister KJ George and several senior journalist of reporters guild were present
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X