• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ಸಚಿವ ಸುಧಾಕರ್ ದಿಢೀರ್ ಭೇಟಿ

|

ಬೆಂಗಳೂರು, ಜುಲೈ 18: ಕೆಸಿ ಜನರಲ್ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಶುಕ್ರವಾರ ರಾತ್ರಿ ದಿಢೀರ್ ಭೇಟಿ ನೀಡಿದರು.

   ಕೊರೊನ ವಿರುದ್ಧದ ಯುದ್ಧದಲ್ಲಿ ಗೆದ್ದ Sharath Bacche Gowda | Oneindia Kannada

   ಪಿಪಿಇ ಕಿಟ್‌ಗಳ ಗುಣಮಟ್ಟ , ಕೊರೊನಾ ಸೋಂಕಿತರ ಆರೈಕೆ, ಶುಚಿತ್ವ , ಸಿ್ಬಂದಿಯ ಹಾಜರಾತಿ ಪರಿಶೀಲನೆ ನಡೆಸಿದರು.

   ಚಿಕ್ಕಬಳ್ಳಾಪುರ: ಪೌರಕಾರ್ಮಿಕರಿಗೆ ಉಚಿತ ನಿವೇಶನ ವಿತರಿಸಿದ ಸಚಿವ ಕೆ.ಸುಧಾಕರ್

   ಪ್ರತಿಯೊಂದು ವಿಭಾಗದಲ್ಲೂ ಕೆಸಿ ಜನರಲ್ ಆಸ್ಪತ್ರೆಯ ವೈಫಲ್ಯಗಳನ್ನು ಎಳೆ ಎಳೆಯಾಗಿ ಪರಿಶೀಲಿಸಿದ ಸುಧಾಕರ್ ಅವರಿಗೆ ಆಸ್ಪತ್ರೆಯಲ್ಲಿನ ನಿರ್ವಹಣೆಯ ವೈಫಲ್ಯ ಹಾಗೂ ಅವ್ಯವಸ್ಥೆಯನ್ನು ತಾವಾಗಿಯೇ ಬಯಲಿಗೆಳೆದರು.

   ಆಸ್ಪತ್ರೆಯಲ್ಲಿ 35 ಮಂದಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು

   ಆಸ್ಪತ್ರೆಯಲ್ಲಿ 35 ಮಂದಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು

   ಆಸ್ಪತ್ರೆಯಲ್ಲಿ 35 ಮಂದಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲಿದ್ದು, ಇದರಿಂದ ಅನುಮಾನಗೊಂಡ ಸುಧಾಕರ್ ಪಿಪಿಇ ಕಿಟ್ , ಫೇಸ್‌ಶೀಲ್ಡ್ ಹಾಗೂ ಮಾಸ್ಕ್ ತರಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಎನ್‌ 95 ಮಾಸ್ಕ್ ಬದಲಿಗೆ ಬೇರೆ ಮಾಸ್ಕ್ ಬಳಸಲಾಗಿತ್ತು.

   ಸುರಕ್ಷತಾ ಸಾಮಗ್ರಿ ಕುರಿತು ಸುಧಾಕರ್ ಗರಂ

   ಸುರಕ್ಷತಾ ಸಾಮಗ್ರಿ ಕುರಿತು ಸುಧಾಕರ್ ಗರಂ

   ಸುರಕ್ಷತಾ ಸಾಮಗ್ರಿ ಗುಣಮಟ್ಟದ್ದು ನೀಡದಿದ್ದರೆ ವೈದ್ಯರಿಗೆ, ಶುಶ್ರೂಷಕರಿಗೆ, ಸಿಬ್ಬಂದಿಗೆ ಕೊರೊನಾ ಸೋಂಕು ತಗುಲದೆ ಇರುತ್ತದೆಯೇ, 95ಜಿಎಸ್ ಎಂ ಮಾನದಂಡ ಇರಬೇಕಿದ್ದ ಪಿಪಿಇ ಕಿಟ್‌ನಲ್ಲಿ 65 ಜಿಎಸ್ ಎಂ ವಸ್ತುಗಳನ್ನು ಪೂರೈಸಲಾಗಿದೆ. ಇದಕ್ಕೆ ಯಾರು ಹೊಣೆ ಎಂದು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸೂಕ್ತ ಗುಣಮಟ್ಟದ ಪಿಪಿಇ ಕಿಟ್ ಪೂರೈಸಿಲ್ಲ. ಇದಕ್ಕೆ ಯಾರು ಹೊಣೆ ಎಂಬ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಬರೆಯಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

   ಲಕ್ಷಣ ಇಲ್ಲದವರಿಗೆ ಚಿಕಿತ್ಸೆ, ತರಾಟೆ

   ಲಕ್ಷಣ ಇಲ್ಲದವರಿಗೆ ಚಿಕಿತ್ಸೆ, ತರಾಟೆ

   ಕೊರೊನಾ ವಾರ್ಡ್ ಶುಚಿತ್ವ ಹಾಗೂ ವೈದ್ಯರ ಚಿಕಿತ್ಸೆ ಬಗ್ಗೆ ಕೊರೊನಾ ವಾರ್ಡ್ ಮುಂದೆ ನಿಂತು ವಿಡಿಯೋ ಕಾಲ್ ಮೂಲಕ ಸೋಂಕಿತರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ 8 ವರ್ಷದ ಪುಟ್ಟ ಬಾಲಕನ ಜೊತೆ ಮಾತುಕತೆ ನಡೆಸಿದರು.ಬಳಿಕ ಇಬ್ಬರು ರೋಗಿಗಳೊಂದಿಗೆ ಸಂವಾದ ನಡೆಸಿದ್ದು, ಅವರಿಗೆ ರೋಗ ಲಕ್ಷಣಗಳಿಲ್ಲ, ಹೀಗಿದ್ದರೂ ಅವರನ್ನು ಕೊರೊನಾ ಆಸ್ಪತ್ರೆಗೆ ಏಕೆ ದಾಖಲಿಸಿದ್ದೀರಿ, ರೋಗ ಲಕ್ಷಣ ಇರುವವರಿಗೆ ಹಾಸಿಗೆ ಎಲ್ಲಿಂದ ತರುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

   ಆಸ್ಪತ್ರೆಯ ಐಸಿಯು ವಾರ್ಡ್ ಲಾಕ್

   ಆಸ್ಪತ್ರೆಯ ಐಸಿಯು ವಾರ್ಡ್ ಲಾಕ್

   ಐಸಿಯು ವಾರ್ಡ್ ಏಕೆ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸಿದಾಗ ವೈದ್ಯರು, ಕೊರೊನಾ ಪಾಸಿಟಿವ್ ಬಂದಿದ್ದಾರೆ ಎಂದು ಐಸಿಯು ಮುಚ್ಚಿದ್ದಾರೆ ಎಂದು ವಿವರಣೆ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುಧಾಕರ್ ಪಾಸಿಟಿವ್ ಬಂದಿರುವ ರೋಗಿಯನ್ನೇ ಐಸಿಯುನಲ್ಲಿ ಇಡಲಾಗುತ್ತದೆ. ನೀವು ಏನು ಮಾತನಾಡುತ್ತಿದ್ದೀರಿ ಎಂಬುದು ನಿಮಗೆ ಅರ್ಥವಾಗುತ್ತಿದೆಯೇ ಎಂದು ಖಾರವಾಗಿಯೇ ಪ್ರಶ್ನಿಸಿದರು.

   English summary
   State Medical Education Minister K Sudhakar visits various hospitals in Bengaluru to inspect COVID19 facilities and other conditions. Visuals from KC General Hospital.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more