ವಿಷವೆಂಬ ಕ್ರೌರ್ಯಕೆ ಹಾಲೆಂಬ ಅಮೃತದ ಉತ್ತರ: #MilkFest
ಬೆಂಗಳೂರು, ಜೂನ್ 9: ಬೀಫ್ ಫೆಸ್ಟ್ ಎಂಬ ಅಮಾನವೀಯ ಕೃತ್ಯದ ಮೂಲಕ ವಿಷದ ಬೀಜಗಳನ್ನು ದೇಶದೆಲ್ಲೆಡೆ ಹರಡಲು ಕೆಲವೊಂದು ಗುಂಪುಗಳು ಯೋಜಿಸಿದ್ದವು. ಸಮಾಜದಲ್ಲಿ ಹಬ್ಬಿರುವ ವಿಷವನ್ನು ಹೋಗಲಾಡಿಸಲು ಅಮೃತಸಿಂಚನದ ಅಗತ್ಯವಿದೆ ಎಂದು ಮನಗಂಡವರು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು.
ಈ ಕಾರಣಕ್ಕಾಗಿಯೇ ಬೆಂಗಳೂರಿನ ವಿಜಯನಗರದ ಶ್ರೀಭಾರತಿ ವಿದ್ಯಾಲಯದಲ್ಲಿ ಬರುವ ಭಾನುವಾರ (ಜೂನ್ 11) ಮಧ್ಯಾಹ್ನ 3 ಗಂಟೆಗೆ #MilkFest ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
[ಕ್ರೂರತ್ವದ ವಿರುದ್ಧ ಸಾತ್ವಿಕ ಅಭಿಯಾನ: #BeefFest vs #MilkFest]
ಗೋವುಗಳ ಸಂರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಮಹತ್ವದ ಅಧಿಸೂಚನೆಯನ್ನು ವಿರೋಧಿಸಿದ ಕೆಲ ಗುಂಪುಗಳು ಕೇರಳದಲ್ಲಿ ಅಮಾನವೀಯವಾಗಿ ಗೋವೊಂದನ್ನು ಕಡಿದು ವಿಕೃತಾನಂದದ ಮೂಲಕ ಬೀಫ್ ಫೆಸ್ಟ್ ಎಂಬ ಹಬ್ಬ ಆಚರಿಸಿದರು.
ಈ ಮೂಲಕ ಗೋಹತ್ಯೆಯ ವಿಷಬೀಜವನ್ನು ದೇಶದೆಲ್ಲೆಡೆ ಬಿತ್ತಲು ಮುನ್ನುಡಿ ಹಾಕಲಾಗಿತ್ತು. ಇದೇ ತರಹದ ಕೃತ್ಯವನ್ನು ಬೆಂಗಳೂರಿನಲ್ಲೂ ನಡೆಸಲು ಆಯೋಜಿಸಲಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ, ಈ ನಾಡಿನಲ್ಲಿ ಗೋವಿನ ರಕ್ತ ಹರಿಯಲು ಅವಕಾಶ ಕೊಡಬಾರದು ಎಂದು ಮಿಲ್ಕ್ ಫೆಸ್ಟ್ ಆಚರಿಸಲು ನಿರ್ಧರಿಸಲಾಯಿತು.

ಬೀಫ್ ಫೆಸ್ಟ್ ಪ್ರತಿಯಾಗಿ ಮಿಲ್ಕ್ ಫೆಸ್ಟ್
ಇಂಥಹ ಕ್ರೌರ್ಯಕ್ಕೆ ಕಾರುಣ್ಯದ ಮೂಲಕ ಉತ್ತರ ಕೊಡಬೇಕೆಂಬ ದೃಷ್ಟಿಯಲ್ಲಿ BeefFest ಗೆ ಪ್ರತಿಯಾಗಿ ರಾಜ್ಯಾದ್ಯಂತ #MilkFest ಆಯೋಜಿಸಲಾಗಿದೆ. ಗೋವಿನಿಂದ ಮಾಂಸವನ್ನಲ್ಲ , ಹಾಲು - ಗೋಮಯ - ಗೋಮೂತ್ರಗಳನ್ನು ಪಡೆಯಬೇಕು ಎಂಬುದನ್ನು ಸಾರಿ ಹೇಳಲಿದೆ ಈ ಹಾಲುಹಬ್ಬ. ಗೋವು ನಮ್ಮ ಆಹಾರವಲ್ಲ , ಗೋವು ನಮ್ಮ ಜೀವನದ ಆಧಾರ ಎಂಬುದನ್ನು ಪ್ರಸ್ತುತಪಡಿಸಲಿದೆ ಈ ಹಾಲುಹಬ್ಬ.

ಏನಿರಲಿದೆ ಹಾಲು ಹಬ್ಬದಲ್ಲಿ?
* ಗೋಕ್ಷೀರದ ಸಾತ್ವಿಕ ಉತ್ಪನ್ನಗಳ ಪ್ರದರ್ಶನ ಮತ್ತು ಮಾಟ
* ಹಾಲಿನಿಂದ ಮಾಡುವ ಸ್ವಾದಿಷ್ಟ ಸಿಹಿ ತಿಂಡಿ ತಯಾರಿಯ ಪ್ರಾತ್ಯಕ್ಷಿಕೆ ಮತ್ತು ಮಾರಾಟ
* ಹಾಲಿನ ಮಹತಿ ಸಾರುವ ಸಾಹಿತ್ಯ ಕೃತಿ ಲೋಕಾರ್ಪಣೆ
* ಗೋವಿನ ಮಹತ್ವವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು
* ಹಾಲು ಕುಡಿಯುವದರಿಂದ ನಮಗೇನು ಉಪಯೋಗ ಗೋಮಾಂಸ ಭಕ್ಷಣೆಯಿಂದ ನಮಗಾಗುವ ದುಷ್ಪರಿಣಾಮಗಳ ಕುರಿತು ಪ್ರಸ್ತುತಿ, ಪ್ರದರ್ಶನಗಳ ಅನಾವರಣ.
[ಬೆಂಗಳೂರು: ಜೂನ್ 11 ರಂದು ಅಂಕಿತ ಪ್ರಕಾಶನದ ಐದು ಪುಸ್ತಕ ಬಿಡುಗಡೆ]
|
ಅಭಿಷೇಕ-ಗೋಪೂಜೆ
ವಿಶೇಷವಾಗಿ ಗೋಪಾಲಕೃಷ್ಣನಿಗೆ ಹಾಲಿನ ಅಭಿಷೇಕ, ಗೋಪೂಜೆ ಗೋಗ್ರಾಸ ಸಮರ್ಪಿಸುವ ಅವಕಾಶಗಳು ಇರಲಿದೆ.
ಗೋವು ಕೇವಲ ತಿನ್ನುವ ಸರಕಲ್ಲ ಅದರಿಂದ ಮನುಷ್ಯನ ಜೀವನಕ್ಕೆ ಯಾವೆಲ್ಲ ರೀತಿಯಲ್ಲಿ ಉಪಯೋಗ ಇದೆ ಎಂಬುದನ್ನು ತಿಳಿಯೋಣ ಮತ್ತು ತಿಳಿಸೋಣ
|
ರಾಜ್ಯದಾದ್ಯಂತ ನಡೆಯಲಿ
ಹಾಲುಹಬ್ಬ ಕೇವಲ ಬೆಂಗಳೂರಲ್ಲಿ ಮಾತ್ರ ಅಲ್ಲ, ರಾಜ್ಯಾದ್ಯಂತ ಎಲ್ಲರೂ #MilkFest ಅನ್ನು ಆಚರಿಸಬೇಕು ಎಂಬುದು ಶ್ರೀ ಮಠದ ಅಪೇಕ್ಷೆ
[ಬೆಂಗಳೂರಿನ ಕಲಾರಸಿಕರಿಗಾಗಿ ಜೂ.9 ರಂದು 'ಮಿಸ್ಟಿಕ್ ಲೋಟಸ್']
|
ಸೆಲ್ಫಿ ವಿಥ್ ಗೋವು!
ನಿಮ್ಮ ಅಕ್ಕಪಕ್ಕದವರಿಗೆ, ಶಾಲಾ ಮಕ್ಕಳಿಗೆ, ಸಹೋದ್ಯೋಗಿಗಳಿಗೆ, ಅಪರಿಚಿತಪರಿಚಿತರಿಗೆ ಹೀಗೆ ಯಾರಿಗೆಲ್ಲ ಸಾಧ್ಯವೋ ಅವರಿಗೆಲ್ಲ ಹಾಲಿನ ಪಾಯಸ, ಹಾಲು ಅಥವಾ ಮಜ್ಜಿಗೆಯನ್ನು ಪ್ರೀತಿಯಿಂದ ಕೊಟ್ಟು ಗೋಮಾತೆಯನ್ನು ಸ್ಮರಿಸಿ ಅವರೊಂದಿಗೆ ಸೆಲ್ಫಿಯೊಂದನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ #MilkFest ಎಂಬ ಹ್ಯಾಷಟ್ಯಾಗಿನೊಂದಿಗೆ ಪೋಸ್ಟ್ ಮಾಡುವುದು. ನಮಗಾಗಿಯೇ ಜೀವನ ಸವೆಸುವ ಗೋವುಗಳ ಜೀವ ಉಳಿಸಲು ಇಷ್ಟಾದರೂ ಮಾಡೋಣವೇ?
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications